
ನಟಿ ಪ್ರೇಮಾ (Prema) ಅವರು ಹಿರಿತೆರೆಯಲ್ಲಿ ಮಿಂಚಿದವರು. ಅವರು ಇತ್ತೀಚೆಗೆ ಸಿನಿಮಾ ರಂಗದಲ್ಲಿ ಆ್ಯಕ್ಟೀವ್ ಆಗಿದ್ದು ಕಡಿಮೆ. ಇದಕ್ಕೆ ಕಾರಣಗಳು ಹಲವು. ಈಗ ಅವರು ಕಿರುತೆರೆಯಲ್ಲಿ ಮಿಂಚಲು ರೆಡಿ ಆಗಿದ್ದಾರೆ. ಅದೂ ಎರಡನೇ ಬಾರಿಗೆ ಅನ್ನೋದು ವಿಶೇಷ. ಹಾಗಾದರೆ, ನಟಿ ಪ್ರೇಮಾ ಅವರು ಯಾವ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ? ಅವರು ನಟಿಸುತ್ತಿರುವುದು ಧಾರಾವಾಹಿಯಲ್ಲಿ ಅಲ್ಲ. ಬದಲಿಗೆ ರಿಯಾಲಿಟಿ ಶೋ ಒಂದಕ್ಕೆ ಜಡ್ಜ್ ಆಗಿ ಬಂದಿದ್ದಾರೆ. ಇದರ ಪ್ರೋಮೋ ರಿಲೀಸ್ ಆಗಿ ಗಮನ ಸೆಳೆದಿದೆ. ಆ ಬಗ್ಗೆ ಇಲ್ಲಿದೆ ವಿವರ.
ನಟಿ ಪ್ರೇಮಾ ಅವರು ಹಿರಿತೆರೆಯ ಬಳಿಕ ಕಿರುತೆರೆಯ ಜೊತೆ ನಂಟು ಬೆಳೆಸಿಕೊಂಡರು. ‘ಮಹಾನಟಿ’ ಹೆಸರಿನ ರಿಯಾಲಿಟಿ ಶೋ ಜೀ ಕನ್ನಡದಲ್ಲಿ ಪ್ರಸಾರ ಕಂಡು ಯಶಸ್ಸು ಕಂಡಿತು. ಈ ರಿಯಾಲಿಟಿ ಶೋಗೆ ಅವರು ಜಡ್ಜ್ ಸ್ಥಾನದಲ್ಲಿ ಇದ್ದರು. ಈಗ ಈ ರಿಯಾಲಿಟಿ ಶೋಗೆ ಎರಡನೇ ಸೀಸನ್ ಬರುತ್ತಿದೆ. ಕೇವಲ ಯುವತಿಯರಿಗೆ ಮಾತ್ರ ಇಲ್ಲಿ ಅವಕಾಶ. ಈ ಶೋನ ಜಡ್ಜ್ ಸ್ಥಾನದಲ್ಲಿ ಅವರೂ ಇರಲಿದ್ದಾರೆ.
‘ಮಹಾನಟಿ’ ರಿಯಾಲಿಟಿ ಶೋನಲ್ಲಿ ರಮೇಶ್ ಅರವಿಂದ್, ತರುಣ್ ಸುಧೀರ್, ನಿಶ್ವಿಕಾ ನಾಯ್ಡು ಹಾಗೂ ಪ್ರೇಮಾ ಜಡ್ಜ್ ಸ್ಥಾನದಲ್ಲಿ ಇದ್ದರು. ಈ ಬಾರಿಯೂ ಇದೇ ತಂಡ ಮುಂದುವರಿಯಲಿದೆ. ಸದ್ಯ ರಿಲೀಸ್ ಆಗಿರುವ ಪ್ರೋಮೋದಲ್ಲಿ ನಟನೆ ಹಾಗೂ ಅದರ ಪ್ರಾಮುಖ್ಯತೆ ಮತ್ತು ಕುಟುಂಬದವರು ಯಾವ ರೀತಿ ಬೆಂಬಲಿಸಬೇಕು ಎಂಬುದನ್ನು ವಿವರಿಸಲಾಗಿದೆ.
‘ಮಹಾನಟಿ ಸೀಸನ್ 2’ ಜೂನ್ 14ರಿಂದ ರಾತ್ರಿ 7.30ಕ್ಕೆ ಪ್ರಸಾರ ಕಾಣಲಿದೆ. ಈ ಮೊದಲು ‘ಸರಿಗಮಪ’ ಶೋ ಪ್ರಸಾರ ಕಾಣುತ್ತಿತ್ತು. ಅದು ಪೂರ್ಣಗೊಂಡ ಬಳಿಕ ಈ ಶೋ ಬರುತ್ತಿದೆ. ಒಂದೂವರೆ ಗಂಟೆಗಳ ಕಾಲ ಕಲಾವಿದೆಯರು ತಮ್ಮ ಪ್ರತಿಭೆಯನ್ನು ಅಭಿವ್ಯಕ್ತಪಡಿಸಲಿದ್ದಾರೆ.
ಇದನ್ನೂ ಓದಿ: ‘ಮಹಾನಟಿ’ ಆಶಿಕಾ ಧ್ವನಿ ಮೆಚ್ಚಿದ ಸುದೀಪ್; ಇವರ ಹಿನ್ನೆಲೆ ಕೇಳಿದ್ರೆ ಅಚ್ಚರಿ ಪಡ್ತೀರಾ
‘ಮಹಾನಟಿ ಸೀಸನ್ 2’ಗೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ತೆರಳಿ ಆಡಿಷನ್ ಮಾಡಲಾಗಿದೆ. ಈ ಆಡಿಷನ್ ಮೂಲಕ ಆಯ್ಕೆ ಆದವರ ಪೈಕಿ ಒಂದಷ್ಟು ಮಂದಿಯನ್ನು ಈ ಶೋಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ವಿವಿಧ ಹಂತದಲ್ಲಿ ಈ ಸ್ಪರ್ಧೆ ನಡೆಯಲಿದೆ. ಹೆಚ್ಚಿನ ಮಾಹಿತಿ ಈ ವೀಕೆಂಡ್ನಲ್ಲಿ ರಿವೀಲ್ ಆಗುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.