
‘ಬಿಗ್ ಬಾಸ್’ ಮನೆಯಲ್ಲಿ ಮ್ಯಾನ್ ಹ್ಯಾಂಡ್ಲಿಂಗ್ ಮಾಡುವಂತೆ ಇಲ್ಲ. ಹಾಗೆ ಮಾಡಿದರೆ ತಕ್ಷಣಕ್ಕೆ ಅವರನ್ನು ಎಲಿಮಿನೇಟ್ ಮಾಡಲಾಗುತ್ತದೆ. ‘ಬಿಗ್ ಬಾಸ್ ಹಿಂದಿ ಸೀಸನ್ 17’ನಲ್ಲಿ ಈ ರೀತಿಯ ಘಟನೆ ನಡೆದಿದೆ ಎಂದು ವರದಿ ಆಗಿದೆ. ಅಭಿಷೇಕ್ ಕುಮಾರ್ (Abhishek Kumar) ಹಾಗೂ ಸಮರ್ಥ್ ಜ್ಯುರೆಲ್ ಮಧ್ಯೆ ಫೈಟ್ ನಡೆದಿದೆ. ಅಭಿಷೇಕ್ ಅವರು ಸಮರ್ಥ್ಗೆ ಹೊಡೆದಿದ್ದಾರೆ. ಇದರಿಂದ ಅಭಿಷೇಕ್ನ ಮನೆಯಿಂದ ಹೊರಕ್ಕೆ ಹಾಕಲಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಕೆಲವು ಸ್ಪರ್ಧಿಗಳು ಫ್ರಸ್ಟ್ರೇಷನ್ ಅನುಭವಿಸುತ್ತಾ ಇರುತ್ತಾರೆ. ಸಣ್ಣ ಮಾತಿನಿಂದ ದೊಡ್ಡ ಫೈಟ್ ಆದ ಉದಾಹರಣೆ ಇದೆ. ಬಿಗ್ ಬಾಸ್ ಮನೆಯಲ್ಲಿ ಅಭಿಷೇಕ್ ಅವರು ಸಿಟ್ಟಿನಿಂದ ಸಮರ್ಥ್ಗೆ ಹೊಡೆದಿದ್ದಾರೆ. ಅಭಿಷೇಕ್ ಅವರನ್ನು ಮನೆಯಲ್ಲಿ ಉಳಿಸಿಕೊಳ್ಳಬೇಕೆ ಅಥವಾ ಬೇಡವೇ ಎನ್ನುವ ನಿರ್ಧಾರವನ್ನು ಮನೆಯ ಕ್ಯಾಪ್ಟನ್ ಅಂಕಿತಾ ತೆಗೆದುಕೊಳ್ಳುವಂತೆ ಬಿಗ್ ಬಾಸ್ ಆದೇಶ ನೀಡಿದರು ಎನ್ನಲಾಗಿದೆ.
ಅಂಕಿತಾ ಅವರು ಅಭಿಷೇಕ್ನ ಎಲಿಮಿನೇಟ್ ಮಾಡುವ ನಿರ್ಧಾರ ತೆಗೆದುಕೊಂಡರು. ಈ ಮೂಲಕ ಅವರನ್ನು ಬಿಗ್ ಬಾಸ್ನಿಂದ ಹೊರಕ್ಕೆ ಕಳುಹಿಸಲಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಟ್ವಿಟರ್ನಲ್ಲಿ ಚರ್ಚೆ ಜೋರಾಗಿದೆ. ಅವರನ್ನು ಮನೆಯಿಂದ ಎಲಿಮಿನೇಟ್ ಮಾಡಬಾರದಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ನೋಡ ನೋಡುತ್ತಿದ್ದಂತೆ ಹೋಯ್ತು ಲಕ್ಷ ಲಕ್ಷ ಹಣ; ಬಿಗ್ ಬಾಸ್ ವಿನ್ನರ್ಗೆ ಸಿಗೋ ಫೈನಲ್ ಅಮೌಂಟ್ ಎಷ್ಟು?
‘ಅಭಿಷೇಕ್ ಇರಬೇಕೋ ಅಥವಾ ಬೇಡವೋ ಎಂಬುದನ್ನು ಜನರು ನಿರ್ಧಾರ ಮಾಡಬೇಕು. ಅಂಕಿತಾಗೆ ಈ ಅಧಿಕಾರವನ್ನು ಏಕೆ ನೀಡಿದಿರಿ’ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ‘ಅಭಿಷೇಕ್ ಎಲಿಮಿನೇಟ್ ಆಗುತ್ತಾರೆ ಅನ್ನೋದು ಗೊತ್ತಿತ್ತು. ಆದರೆ, ಅಂಕಿತಾಗೆ ಈ ಅಧಿಕಾರ ನೀಡಿದ್ದೇಕೆ’ ಎಂದು ಕೆಲವರು ಕೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:26 pm, Fri, 5 January 24