ಜೀ ಕನ್ನಡ (Zee Kannada) ವಾಹಿನಿಯಲ್ಲಿ ವಿವಿಧ ರೀತಿಯ ಧಾರಾವಾಹಿಗಳು ಪ್ರಸಾರ ಕಾಣುತ್ತಿವೆ. ಈ ಪೈಕಿ ‘ಭೂಮಿಗೆ ಬಂದ ಭಗವಂತ’ (Bhoomige Bandha Bhagavantha Serial) ಧಾರಾವಾಹಿ ಕೂಡ ಭಿನ್ನ ಶೈಲಿಯಲ್ಲಿ ಮೂಡಿ ಬರುತ್ತಿದೆ. ಎಷ್ಟೇ ಕಷ್ಟ ಬಂದರೂ ಕೇವಲ ಒಳ್ಳೆಯದನ್ನೇ ಮಾಡ ಬಯಸುವ ವ್ಯಕ್ತಿಯ ಜೊತೆ ದೇವರು ಸದಾ ಇರುತ್ತಾನೆ ಎಂಬ ಥೀಮ್ನಲ್ಲಿ ಈ ಧಾರಾವಾಹಿ ಮೂಡಿಬಂದಿದೆ. ಇಷ್ಟು ದಿನ ಸೋಮವಾರದಿಂದ-ಶುಕ್ರವಾರದವರೆಗೆ ರಾತ್ರಿ 9:30ಕ್ಕೆ ಈ ಧಾರಾವಾಹಿ ಪ್ರಸಾರ ಕಾಣುತ್ತಿತ್ತು. ಆದರೆ, ಈಗ ಪ್ರಸಾರ ಸಮಯದಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ವಾಹಿನಿ ಕಡೆಯಿಂದ ಅಧಿಕೃತ ಘೋಷಣೆ ಆಗಿದೆ.
ನವೀನ್ ಕೃಷ್ಣ, ಕೃತಿಕಾ ರವೀಂದ್ರ, ಉಮೇಶ್ ಮೊದಲಾದವರು ‘ಭೂಮಿಗೆ ಬಂದ ಭಗವಂತ’ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಶಿವ ಪ್ರಸಾದ್ (ನವೀನ್ ಕೃಷ್ಣ) ಅಂಡರ್ವೇರ್ ಕಂಪನಿ ಒಂದರಲ್ಲಿ ಕೆಲಸ ಮಾಡುವ ನೌಕರ. ಆತನ ಪತ್ನಿ ಗಿರಿಜಾ (ಕೃತಿಕಾ ರವೀಂದ್ರ) ಪತಿಗೆ ಬೆಂಬಲ ನೀಡುತ್ತಾ ಇರುತ್ತಾಳೆ. ಎಷ್ಟೇ ಕಷ್ಟ, ಆರ್ಥಿಕ ತೊಂದರೆ ಬಂದರೂ ಶಿವ ಪ್ರಸಾದ್ ಕೆಟ್ಟದ್ದನ್ನು ಮಾಡುವುದಿಲ್ಲ. ಈ ಕಾರಣದಿಂದಲೇ ಶಿವ ಪ್ರತ್ಯಕ್ಷ ಆಗಿ ಸದಾ ಶಿವ ಪ್ರಸಾದ್ ಜೊತೆಯೇ ಇರುತ್ತಾನೆ. ಆತನಿಗೆ ಒಳ್ಳೆಯ ಮಾರ್ಗ ತೋರಿಸುತ್ತಾನೆ. ಕಷ್ಟ ಬಂದಾಗ ಏನು ಮಾಡಬೇಕು ಎಂಬುದನ್ನು ಹೇಳುತ್ತಾನೆ. ಈಗ ಧಾರಾವಾಹಿ ಸಮಯದಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ.
ಜೀ ಕನ್ನಡ ವಾಹಿನಿಯಲ್ಲಿ ಹೊಸಹೊಸ ಧಾರಾವಾಹಿಗಳು ಪ್ರಸಾರ ಕಾಣುತ್ತಿವೆ. ಅದೇ ರೀತಿ ‘ಸೀತಾ ರಾಮ’ ಧಾರಾವಾಹಿ ಪ್ರಸಾರ ಕಾಣೋಕೆ ರೆಡಿ ಆಗಿದೆ. ವೈಷ್ಣವಿ ಗೌಡ, ಗಗನ್ ಚಿನ್ನಪ್ಪ ಹಾಗೂ ರೀತು ಸಿಂಗ್ ಅವರು ಈ ಧಾರಾವಾಹಿಯಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಈ ಧಾರಾವಾಹಿ ಜುಲೈ 17ರಿಂದ ರಾತ್ರಿ 9:30ಕ್ಕೆ ಪ್ರಸಾರ ಕಾಣಲಿದೆ. ಈ ಕಾರಣದಿಂದ ಜುಲೈ 17ರಿಂದ ‘ಭೂಮಿಗೆ ಬಂದ ಭಗವಂತ’ ಧಾರಾವಾಹಿ ರಾತ್ರಿ 10 ಗಂಟೆಗೆ ಪ್ರಸಾರ ಆಗಲಿದೆ.
ಇದನ್ನೂ ಓದಿ: ಹೊಸ ಪ್ರೋಮೋ ಹಂಚಿಕೊಂಡು ‘ಸೀತಾ ರಾಮ’ ಧಾರಾವಾಹಿಯ ಪ್ರಸಾರ ಸಮಯ ತಿಳಿಸಿದ ಜೀ ಕನ್ನಡ
‘ಭೂಮಿಗೆ ಬಂದ ಭಗವಂತ’ ಧಾರಾವಾಹಿ ಅನೇಕರಿಂದ ಮೆಚ್ಚುಗೆ ಪಡೆದಿದೆ. ಮಧ್ಯಮ ವರ್ಗದವರು ಪಡುವ ಪಾಡನ್ನು ಈ ಧಾರಾವಾಹಿಯಲ್ಲಿ ಕಣ್ಣಿಗೆ ಕಟ್ಟುವಂತೆ ತೋರಿಸಲಾಗುತ್ತಿದೆ. ಇದರ ಜೊತೆಗೆ ಕಷ್ಟ ಬಂದಾಗಲೂ ಕೆಟ್ಟ ಮಾರ್ಗ ತುಳಿಯಬಾರದು ಎನ್ನುವ ಸಂದೇಶವೂ ಧಾರಾವಾಹಿಯಿಂದ ಸಿಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ