AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಸ್ಟರ್​ ಆನಂದ್ ಪುತ್ರಿ ಹೆಸರು ಬಳಸಿ 40 ಲಕ್ಷ ರೂ ವಂಚನೆ, ಯುವತಿ ಬಂಧನ

Master Anand: ನಟ ಮಾಸ್ಟರ್ ಆನಂದ್ ಪುತ್ರಿ, ಬಾಲಕಲಾವಿದೆ ವಂಶಿಕಾ ಹೆಸರು ಹೇಳಿ 40 ಲಕ್ಷ ಹಣ ವಂಚನೆ ಮಾಡಿದ್ದ ನಿಶಾ ನರಸಪ್ಪ ಅನ್ನು ಪೊಲೀಸರು ಬಂಧಿಸಿದ್ದಾರೆ.

ಮಾಸ್ಟರ್​ ಆನಂದ್ ಪುತ್ರಿ ಹೆಸರು ಬಳಸಿ 40 ಲಕ್ಷ ರೂ ವಂಚನೆ, ಯುವತಿ ಬಂಧನ
ನಿಶಾ ನರಸಪ್ಪ
Jagadisha B
| Edited By: |

Updated on:Jul 13, 2023 | 6:39 PM

Share

ಟಿವಿ ರಿಯಾಲಿಟಿ ಶೋಗಳಲ್ಲಿ (Reality Show) ನಿರೂಪಣೆ, ನಟನೆ ಮೂಲಕ ಜನಪ್ರಿಯವಾಗಿರುವ ಮಾಸ್ಟರ್ ಆನಂದ್ ಪುತ್ರ ವಂಶಿಕಾ ಹೆಸರು ಬಳಸಿ ಮಹಿಳೆಯೊಬ್ಬರು 40 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆಂದು ಆರೋಪ ಮಾಡಲಾಗಿದ್ದು, ಮಾಸ್ಟರ್ ಆನಂದ್ (Master Anand) ಪತ್ನಿ ಸೇರಿದಂತೆ ನಿಶಾರಿಗೆ ಹಣ ಕೊಟ್ಟು ಮೋಸ ಹೋಗಿರುವ ಇತರರು ನಿಶಾ ವಿರುದ್ಧ ಈ ಕುರಿತು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಂತೆಯೇ ಪೊಲೀಸರು ನಿಶಾ ಅವರನ್ನು ಬಂಧಿಸಿದ್ದಾರೆ.

ಮಕ್ಕಳ ಟ್ಯಾಲೆಂಟ್ ಶೋ, ಮಕ್ಕಳ ಮಾಡೆಲಿಂಗ್, ಇವೆಂಟ್ ಮ್ಯಾನೇಜ್​ಮೆಂಟ್, ಮಕ್ಕಳ ಗ್ರೂಮಿಂಗ್ ತರಗತಿ ಇತ್ಯಾದಿ ನಡೆಸುತ್ತೇನೆ ಎಂದು ಹೇಳಿ ಮಕ್ಕಳ ಪೋಷಕರಿಂದ ಲಕ್ಷಾಂತರ ಹಣವನ್ನು ನಿಶಾ ವಸೂಲಿ ಮಾಡಿದ್ದಾರೆ ಎನ್ನಲಾಗುತ್ತಿದೆ. ನಿಶಾರಿಂದ ಹಣ ಪಡೆದು ಮೋಸ ಹೋದ ಕೆಲವರು ನಿಶಾರ ವಿರುದ್ಧ ದೂರು ನೀಡಿರುವುದಲ್ಲದೆ ಫೇಸ್​ಬುಕ್​ನಲ್ಲಿಯೂ ಈ ಬಗ್ಗೆ ಬರೆದುಕೊಂಡಿದ್ದಾರೆ.

ಇತ್ತೀಚೆಗೆ ಮಾಸ್ಟರ್ ಆನಂದ್​ರ ಪುತ್ರಿ ವಂಶಿಕಾ ಹೆಸರು ಹೇಳಿಕೊಂಡು ಹಲವರಿಗೆ ಮೋಸ ಮಾಡಿದ್ದಾರಂತೆ ನಿಶಾ ನರಸಪ್ಪ. ವಂಶಿಕಾ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸುಮಾರು 40 ಲಕ್ಷ ರೂಪಾಯಿ ಹಣವನ್ನು ನಿಶಾ ವಸೂಲಿ ಮಾಡಿದ್ದರಂತೆ. ಈ ಬಗ್ಗೆ ಹಣ ಕಳೆದುಕೊಂಡವರು ಹಾಗೂ ವಂಶಿಕಾರ ತಾಯಿ ಯಶಸ್ವಿನಿ ಆನಂದ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ:ಮಾಸ್ಟರ್ ಆನಂದ್​ಗೆ ವಂಚನೆ; ನಿವೇಶನ ಪಡೆಯಲು ಹೋಗಿ 18 ಲಕ್ಷ ರೂಪಾಯಿ ಕಳೆದುಕೊಂಡ ನಟ

ನಿಶಾರ ಫೇಸ್​ಬುಕ್​ ಪೋಸ್ಟ್​ನ ಕಮೆಂಟ್​ಗಳಲ್ಲಿಯೂ ಕೆಲವು ಹಣ ಕಳೆದುಕೊಂಡ ಸಂತ್ರಸ್ತರು ನಿಶಾ ವಿರುದ್ಧ ಅವರು ಮಾಡಿರುವ ಮೋಸಗಳ ಬಗ್ಗೆ ಬರೆದಿದ್ದಾರೆ. ಈ ಹಿಂದೆ ಪೂರ್ಣಿಮಾ ಎಂಬುವರಿಂದ ಮಕ್ಕಳ ಫ್ಯಾಷನ್ ಶೋ ನಡೆಸುತ್ತಿರುವುದಾಗಿ ಹೇಳಿ ಶ್ವೇತಾ ಶ್ರೀವತ್ಸಾಗೆ 50 ಸಾವಿರ ಹಣ ಕೊಟ್ಟರೆ ನಿಮ್ಮ ಮಗಳಿಗೆ ಮೊದಲ ಬಹುಮಾನ ಬರುವಂತೆ ಮಾಡುತ್ತೇನೆಂದು ಹೇಳಿ ಹಣ ಪಡೆದಿದ್ದರಂತೆ. ಈ ಕುರಿತಾಗಿ ನಿಶಾ ವಾಟ್ಸ್​ಆಪ್ ಮೆಸೇಜ್ ಮಾಡಿದ್ದ ಸ್ಕ್ರೀನ್​ಶಾಟ್​ಗಳನ್ನು ಪೂರ್ಣಿಮಾ ಹಂಚಿಕೊಂಡಿದ್ದಾರೆ. ಅಲ್ಲದೆ, ನಿಶಾಗೆ ಬೇಬಿ ಮಾಡೆಲಿಂಗ್​ಗಾಗಿ 10 ಲಕ್ಷ ಹಣ ಕೊಟ್ಟು ಹಣ ಕಳೆದುಕೊಂಡಿರುವ ಬಗ್ಗೆ ನೀಡಿರುವ ದೂರಿನ ಪ್ರತಿಯನ್ನು ಸಹ ಪೂರ್ಣಿಮಾ ಎಂಬುವರು ಹಂಚಿಕೊಂಡಿದ್ದಾರೆ.

ನಿಶಾ ನರಸಪ್ಪಗೆ ವಂಚನೆಯೇ ಉದ್ಯೋಗವಾಗಿತ್ತು. ವಂಶಿಕಾ ಮಾತ್ರವೇ ಅಲ್ಲದೆ ಚಿತ್ರರಂಗದ ಹಲವರ ಹೆಸರಿನಲ್ಲಿ ಹಣ ಹಲವರಿಂದ ಹಣ ಪಡೆದಿದ್ದ ನಿಶಾ ಆ ನಂತರ ಹಣ ಪಡೆದವರ ಕರೆಗಳನ್ನು ರಿಸೀವ್ ಮಾಡುತ್ತಿರಲಿಲ್ಲವಂತೆ, ಕರೆ ಮಾಡಿದರೂ ದರ್ಪದಿಂದ ಮಾತನಾಡುತ್ತಿದ್ದರಂತೆ. ಹೀಗೆ ವಂಚನೆ ಹಣದಿಂದಲೇ ಐಶಾರಾಮಿ ಜೀವನವನ್ನು ನಿಶಾ ನರಸಪ್ಪ ನಡೆಸುತ್ತಿದ್ದರು. ಆದರೆ ಈಗ ಬಂಧನಕ್ಕೆ ಒಳಗಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:18 pm, Thu, 13 July 23