ಕಿಚ್ಚ ಸುದೀಪ್ ನಡೆಸಿಕೊಡುತ್ತಿರುವ ‘ಬಿಗ್ ಬಾಸ್ ಕನ್ನಡ ಸೀಸನ್ 9’ ಶೋನಲ್ಲಿ (Bigg Boss Kannada Season 9) ಮೊದಲ ವಾರದ ಎಲಿಮಿನೇಷನ್ ನಡೆದಿದೆ. ಒಂದೇ ವಾರಕ್ಕೆ ಯಾರು ಔಟ್ ಆಗುತ್ತಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಬೈಕ್ ರೇಸರ್ ಐಶ್ವರ್ಯಾ ಪಿಸ್ಸೆ (Aishwarya Pissay) ಅವರು ಎಲಿಮಿನೇಟ್ ಆಗಿದ್ದಾರೆ. ಮೊದಲ ವಾರ 12 ಜನರು ನಾಮಿನೇಟ್ ಆಗಿದ್ದರು. ಆರ್ಯವರ್ಧನ್, ದರ್ಶ್, ದಿವ್ಯಾ ಉರುಡುಗ, ಐಶ್ವರ್ಯಾ ಪಿಸೆ, ಪ್ರಶಾಂತ್ ಸಂಬರ್ಗಿ, ವಿನೋದ್, ಅರುಣ್ ಸಾಗರ್, ನವಾಜ್, ಸಾನ್ಯಾ ಅಯ್ಯರ್, ಮಯೂರಿ, ರೂಪೇಶ್ ಶೆಟ್ಟಿ, ಕ್ಯಾವ್ಯಶ್ರೀ ಮೇಲೆ ಎಲಿಮಿನೇಷನ್ ತೂಗುಗತ್ತಿ ಇತ್ತು. ಶನಿವಾರದ ಎಪಿಸೋಡ್ನಲ್ಲಿ ದಿವ್ಯಾ, ಅರುಣ್, ವಿನೋದ್ ಸೇಫ್ ಆದರು. ಭಾನುವಾರದ ಸಂಚಿಕೆಯಲ್ಲಿ ಐಶ್ವರ್ಯಾ ಪಿಸ್ಸೆ ಎಲಿಮಿನೇಟ್ ಎಂಬ ವಿಷಯವನ್ನು ಕಿಚ್ಚ ಸುದೀಪ್ (Kichcha Sudeep) ತಿಳಿಸಿದರು.
ಕಲರ್ಸ್ ಕನ್ನಡ ವಾಹಿನಿಯಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 9’ ಶೋ ಪ್ರಸಾರ ಆಗುತ್ತಿದೆ. ಈ ಬಾರಿಯ ಕಾರ್ಯಕ್ರಮ ಕೊಂಚ ಡಿಫರೆಂಟ್ ಆಗಿದೆ. ಈ ಹಿಂದಿನ ಸೀಸನ್ಗಳಲ್ಲಿ ಸ್ಪರ್ಧಿಸಿದ ಕೆಲವರ ಜೊತೆಗೆ 9 ಮಂದಿ ಹೊಸ ಸ್ಪರ್ಧಿಗಳು ಭಾಗವಹಿಸಿದ್ದಾರೆ. ಎರಡನೇ ವಾರದ ವೇಳೆಗೆ ಪೈಪೋಟಿ ಇನ್ನಷ್ಟು ಹೆಚ್ಚಲಿದೆ.
ಐಶ್ವರ್ಯಾ ಪಿಸ್ಸೆ ಅವರು ಸಿನಿಮಾ ಅಥವಾ ಕಿರುತೆರೆ ಕ್ಷೇತ್ರದಿಂದ ಬಂದವರಲ್ಲ. ಹಾಗಾಗಿ ಅವರು ಬಿಗ್ ಬಾಸ್ ಮನೆಯ ಎಂಟರ್ಟೇನ್ಮೆಂಟ್ ವಿಚಾರದಲ್ಲಿ ಹಿಂದೆ ಉಳಿದುಕೊಂಡಿದ್ದರು. ‘ನೀವು ಬೈಕ್ ರೇಸರ್. ಆದರೆ ನಿಮ್ಮ ಬೈಕ್ ಯಾಕೆ ಇನ್ನೂ ನ್ಯೂಟ್ರಲ್ನಲ್ಲೇ ಇದೆ’ ಎಂದು ಸುದೀಪ್ ಅವರು ವೀಕೆಂಡ್ ಎಪಿಸೋಡ್ನಲ್ಲಿ ಪ್ರಶ್ನೆ ಮಾಡಿದ್ದರು. ವೀಕ್ಷಕರಿಂದ ಕಡಿಮೆ ವೋಟ್ ಪಡೆದ ಐಶ್ವರ್ಯಾ ಪಿಸ್ಸೆ ಅವರು ಒಂದೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಹೊರಬೀಳುವಂತೆ ಆಗಿದೆ.
ಸುಮಾರು 100 ದಿನಗಳ ಕಾಲ ಬಿಗ್ ಬಾಸ್ ಶೋ ನಡೆಯಲಿದೆ. ಫಿನಾಲೆ ತಲುಪಬೇಕು ಎಂಬುದು ಪ್ರತಿಯೊಬ್ಬ ಸ್ಪರ್ಧಿಯ ಆಶಯ ಆಗಿರುತ್ತದೆ. ಪ್ರತಿ ವಾರದ ಎಲಿಮಿನೇಷನ್ನಿಂದ ಬಜಾವ್ ಆಗುವುದು ಅಷ್ಟು ಸುಲಭ ಅಲ್ಲ. ಮೊದಲ ವಾರ ಸೇಫ್ ಆದ ಎಲ್ಲ ಸ್ಪರ್ಧಿಗಳು ನಿಟ್ಟುಸಿರು ಬಿಟ್ಟಿದ್ದಾರೆ. 17 ಜನರ ನಡುವೆ ಈಗ ಹಣಾಹಣಿ ಮುಂದುವರಿದಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:26 pm, Sun, 2 October 22