‘ಕೌನ್ ಬನೇಗಾ ಕರೋಡ್​ಪತಿ’ ಶೋ ಪ್ರತಿ ಎಪಿಸೋಡ್​ಗೆ ಅಮಿತಾಭ್ ಪಡೆಯೋ ಸಂಭಾವನೆ ಎಷ್ಟು ಕೋಟಿ ರೂಪಾಯಿ?

| Updated By: ಮದನ್​ ಕುಮಾರ್​

Updated on: Aug 27, 2023 | 11:04 AM

ಅಮಿತಾಭ್ ಬಚ್ಚನ್​ ಅವರು 80ರ ವಯಸ್ಸಿನಲ್ಲಿ ‘ಕೌನ್ ಬನೇಗಾ ಕರೋಡ್​ಪತಿ’ ಶೋ ನಡೆಸಿಕೊಡುತ್ತಿರುವುದು ಸುಲಭದ ಮಾತಲ್ಲ. ಸಿನಿಮಾಗಳ ಜೊತೆಗೆ ಇದಕ್ಕೂ ಸಮಯ ಮೀಸಲಿಡಬೇಕು. ಜೊತೆಗೆ ಆರೋಗ್ಯದ ಕಡೆ ಗಮನ ಹರಿಸಬೇಕು. ಈ ಕಾರಣಕ್ಕೆ ವಾಹಿನಿಯವರು ದೊಡ್ಡ ಮೊತ್ತದ ಹಣವನ್ನು ಅಮಿತಾಭ್ ಬಚ್ಚನ್​ಗೆ ಪಾವತಿ ಮಾಡುತ್ತಿದ್ದಾರೆ.

‘ಕೌನ್ ಬನೇಗಾ ಕರೋಡ್​ಪತಿ’ ಶೋ ಪ್ರತಿ ಎಪಿಸೋಡ್​ಗೆ ಅಮಿತಾಭ್ ಪಡೆಯೋ ಸಂಭಾವನೆ ಎಷ್ಟು ಕೋಟಿ ರೂಪಾಯಿ?
ಅಮಿತಾಭ್​ ಬಚ್ಚನ್​
Follow us on

ನಟ ಅಮಿತಾಭ್ ಬಚ್ಚನ್ (Amitabh Bachchan) ಅವರಿಗೆ ಈಗ 80 ವರ್ಷ. ಈ ವಯಸ್ಸಿನಲ್ಲೂ ಅವರು ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ತಮಗೆ ಒಪ್ಪುವಂಥ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಅವರು ನಟಿಸುತ್ತಿದ್ದಾರೆ. ಇದರ ಜೊತೆಗೆ ಅವರು ಕಿರುತೆರೆಯಲ್ಲೂ ಬ್ಯುಸಿ ಇದ್ದಾರೆ. ಹಿಂದಿ ವಾಹಿನಿಯಲ್ಲಿ ಪ್ರಸಾರ ಆಗುವ ‘ಕೌನ್ ಬನೇಗಾ ಕರೋಡ್​ಪತಿ’ (Kaun Banega Crorepati) ಶೋ ಅನ್ನು ಅವರು ನಡೆಸಿಕೊಡುತ್ತಾರೆ. ಕಳೆದ ಒಂದೂವರೆ ದಶಕಗಳಿಂದ ಈ ಶೋನ ಅವರು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಈ ಕಾರ್ಯಕ್ರಮ ನಡೆಸಿಕೊಡಲು ಪ್ರತಿ ಎಪಿಸೋಡ್​ಗೆ ಖರ್ಚಾಗುವ ಮೊತ್ತ ಹಾಗೂ ಅಮಿತಾಭ್ ಬಚ್ಚನ್ ಸಂಭಾವನೆ (Amitabh Bachchan Remuneration) ಕೇಳಿ ಅನೇಕರಿಗೆ ಅಚ್ಚರಿ ಆಗಿದೆ.

‘ಕೌನ್ ಬನೇಗಾ ಕರೋಡ್​ಪತಿ’ ಅನ್ನೋದು ಕ್ವಿಜ್ ಕಾರ್ಯಕ್ರಮ. ಈ ಶೋಗೆ ಬರೋ ಸ್ಪರ್ಧಿಗಳಿಗೆ ನಿರೂಪಕನ ಸ್ಥಾನದಲ್ಲಿ ಕುಳಿತಿರುವ ಅಮಿತಾಭ್ ಪ್ರಶ್ನೆ ಕೇಳುತ್ತಾ ಹೋಗುತ್ತಾರೆ. ಸರಿ ಉತ್ತರ ಕೊಟ್ಟಂತೆ ಸಿಗುವ ಬಹುಮಾನದ ಮೊತ್ತ ಹೆಚ್ಚುತ್ತಾ ಹೋಗುತ್ತದೆ. ಸದ್ಯ ಬಹುಮಾನ ಮೊತ್ತವನ್ನು 7.5 ಕೋಟಿ ರೂಪಾಯಿಗೆ ನಿಗದಿ ಮಾಡಲಾಗಿದೆ. ಇದರ ಮೊದಲ ಎಪಿಸೋಡ್ ಆರಂಭ ಆಗಿದ್ದು 2000ರಲ್ಲಿ. ಮೊದಲೆರಡು ಸೀಸನ್​ನ ಅಮಿತಾಭ್ ನಡೆಸಿಕೊಟ್ಟರು. ಮೂರನೇ ಸೀಸನ್ (2007) ಶಾರುಖ್ ಖಾನ್ ಅವರು ಹೋಸ್ಟ್ ಮಾಡಿದರು. ನಾಲ್ಕನೇ ಸೀಸನ್​ಗೆ ಅಮಿತಾಭ್ ಕಂಬ್ಯಾಕ್ ಮಾಡಿದರು. ಅಲ್ಲಿಂದ ಇಲ್ಲಿಯವರೆಗೆ ಅವರೇ ಈ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ.

ಪ್ರತಿ ಎಪಿಸೋಡ್​ಗೆ ಎಷ್ಟು ಖರ್ಚಾಗುತ್ತದೆ?

ಸದ್ಯ ‘ಕೌನ್ ಬನೇಗಾ ಕರೋಡ್​ಪತಿ’ ಶೋನ 15ನೇ ಸೀಸನ್ ನಡೆಯುತ್ತಿದೆ. ಅಮಿತಾಭ್ ಅವರು ಎಂದಿನ ಜೋಶ್​ನಲ್ಲಿ ಈ ಎಪಿಸೋಡ್​ನ ನಡೆಸಿಕೊಡುತ್ತಿದ್ದಾರೆ. ಅಚ್ಚರಿಯ ವಿಚಾರ ಎಂದರೆ ಅಮಿತಾಭ್ ಅವರನ್ನು ರೆಡಿ ಮಾಡಲು ಅಂದರೆ ಬಟ್ಟೆ ಮತ್ತಿತ್ಯಾದಿ ವಸ್ತುಗಳಿಗೆ 10 ಲಕ್ಷ ರೂಪಾಯಿ ಖರ್ಚು ಆಗುತ್ತಿದೆ ಎಂದು ವರದಿ ಆಗಿದೆ. ಅಮಿತಾಭ್ ಈ ಶೋಗಾಗಿ ತಮ್ಮದೇ ಶೈಲಿಯಲ್ಲಿ ಡ್ರೆಸ್ ತೊಡುತ್ತಾರೆ. ಅವರು ತೊಡುವ ಉಡುಗೆಯನ್ನು ವಿದೇಶದಿಂದ ತರಿಸಲಾಗುತ್ತದೆ. ಪ್ರತಿ ಎಪಿಸೋಡ್​ಗೆ ಅವರು ಬೇರೆಬೇರೆ ರೀತಿಯ ಬಟ್ಟೆ ಧರಿಸುತ್ತಾರೆ.

ಇದನ್ನೂ ಓದಿ: ಮಹಿಳೆಯರ ಒಳ ಉಡುಪಿನ ಬಗ್ಗೆ ಪ್ರಶ್ನೆ ಮಾಡಿದ್ದ ಅಮಿತಾಭ್ ಬಚ್ಚನ್; ಸಖತ್ ಟ್ರೋಲ್ ಆದ ನಟ

ನಟನ ಸಂಭಾವನೆ ಎಷ್ಟು?

80ರ ವಯಸ್ಸಲ್ಲೂ ಈ ಶೋ ನಡೆಸಿಕೊಡಬೇಕು ಎಂದರೆ ಅದು ಸುಲಭದ ಮಾತಲ್ಲ. ಸಿನಿಮಾಗಳ ಜೊತೆಗೆ ಇದಕ್ಕೂ ಸಮಯ ಮೀಸಲಿಡಬೇಕು. ಜೊತೆಗೆ ಆರೋಗ್ಯದ ಕಡೆ ಗಮನ ಹರಿಸಬೇಕು. ಈ ಕಾರಣಕ್ಕೆ ವಾಹಿನಿಯವರು ದೊಡ್ಡ ಮೊತ್ತದ ಹಣವನ್ನು ಅಮಿತಾಭ್ ಬಚ್ಚನ್​ಗೆ ಪಾವತಿ ಮಾಡುತ್ತಿದ್ದಾರೆ. ಅವರು ಪ್ರತಿ ಎಪಿಸೋಡ್​ಗೆ ಪಡೆಯೋ ಸಂಭಾವನೆ 5-6 ಕೋಟಿ ರೂಪಾಯಿ ಎಂದು ಇಂಗ್ಲಿಷ್ ಸುದ್ದಿ ವೆಬ್​ಸೈಟ್​​ಗಳಲ್ಲಿ ವರದಿ ಆಗಿದೆ.

ಮೊದಲ ಸಂಭಾವನೆ ಎಷ್ಟು?

ಅಮಿತಾಭ್ ಬಚ್ಚನ್ ಅವರು ಮೊದಲ ಶೋ ನಡೆಸಿಕೊಟ್ಟಿದ್ದು 2000-2001ನೇ ಇಸವಿಯಲ್ಲಿ. ಈ ಸಂದರ್ಭದಲ್ಲಿ ಅವರು ಪ್ರತಿ ಎಪಿಸೋಡ್​ಗೆ ಪಡೆಯುತ್ತಿದ್ದ ಸಂಭಾವನೆ 25 ಲಕ್ಷ ರೂಪಾಯಿ. ಬಳಿಕ ಈ ಸಂಭಾವನೆ 2 ಕೋಟಿ ರೂಪಾಯಿಗೆ ಏರಿಕೆ ಆಯಿತು. 6,7,8ನೇ ಸೀಸನ್​ಗೆ ಅವರ ಸಂಭಾವನೆ 2-2.5 ಕೋಟಿ ರೂಪಾಯಿ ಇತ್ತು. ಹೀಗೆ ಸೀಸನ್ ಕಳೆದಂತೆ ಅವರ ಸಂಭಾವನೆ ಏರಿಕೆ ಆಗುತ್ತಾ ಹೋಯಿತು. ಕಳೆದ ಸೀಸನ್​ನಲ್ಲಿ ಅವರು 4-5 ಕೋಟಿ ರೂಪಾಯಿ ಪಡೆಯುತ್ತಿದ್ದರು.

ಇದನ್ನೂ ಓದಿ: ‘ನೀವು ನಮ್ಮೆಲ್ಲರಿಗಿಂತ ದೊಡ್ಡವರು’; ಕಮಲ್ ಹಾಸನ್ ಅವರ ನಟನೆ ಹಾಡಿ ಹೊಗಳಿದ ಅಮಿತಾಭ್ ಬಚ್ಚನ್

ಸಿನಿಮಾ ಬಗ್ಗೆ

ಅಮಿತಾಭ್ ವಯಸ್ಸು 80 ಆದರೂ ಅವರ ಜೀವನೋತ್ಸಾಹ ಕಡಿಮೆ ಆಗಿಲ್ಲ. ಕಳೆದ ವರ್ಷ ಅವರ ನಟನೆಯ ‘ಬ್ರಹ್ಮಾಸ್ತ್ರ’ ಸೇರಿ ಎಂಟು ಸಿನಿಮಾಗಳು ರಿಲೀಸ್ ಆದವು. ಈಗ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ‘ಗಣಪತ್’ ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಪ್ರಭಾಸ್ ನಟನೆಯ, ನಾಗ್ ಅಶ್ವಿನ್ ನಿರ್ದೇಶನದ ‘ಕಲ್ಕಿ 2898 ಎಡಿ’ ಚಿತ್ರದಲ್ಲೂ ಅವರು ಬಣ್ಣ ಹಚ್ಚುತ್ತಿದ್ದಾರೆ. ಅವರಿಗೆ ನಿತ್ಯ ಹೊಸ ಹೊಸ ಆಫರ್​ಗಳು ಬರುತ್ತವೆ. ತಮಗೆ ಹೊಂದಿಕೆ ಆಗುವಂಥ ಪಾತ್ರಗಳನ್ನು ಅವರು ಒಪ್ಪಿಕೊಳ್ಳುತ್ತಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.