Seetha Raama Serial: ಸಿಹಿಯ ಊರು ಸುತ್ತುವ ಕಾರ್ಯಕ್ರಮ ರಾಮ್ ಮತ್ತು ಸೀತಾ ಮಧ್ಯೆ ಪ್ರೀತಿ ಅಂಕುರವಾಗುವಂತೆ ಮಾಡುತ್ತಾ?

Seetha Raama Serial: ರಾಮ್ ಮತ್ತು ಅಶೋಕ್ ಮಾಡಿರುವ ಐಡಿಯಾ ಬಗ್ಗೆ ಗೊತ್ತಿಲ್ಲದ ರಾಮನ ಚಿಕ್ಕಿ ಅವನು ಆಫೀಸ್ನಲ್ಲಿಯೇ ಇದ್ದಾನೆ ಎಂದು ನಂಬಿಕೊಳ್ಳುತ್ತಾಳೆ. ಜೊತೆಗೆ ಬಾಸ್ ಹಿಂದೆ ಯಾರೋ ಬಿದ್ದಿದ್ದಾರೆ ಅದನ್ನು ಪತ್ತೆ ಹಚ್ಚಿ ಎಂದು ಚರಣ್ ಗೆ ವಿಷಯ ತಿಳಿಸುತ್ತಾಳೆ. ಹೇಳದೆ ಕೇಳದೆ ಆಫೀಸಿಗೆ ಬಂದಿರುವ ಮ್ಯಾನೇಜರ್ ನಡೆ ಅಶೋಕ್ ಗೆ ಅನುಮಾನ ತರಿಸುತ್ತದೆ. ಮುಂದೆ ಏನಾಗಬಹುದು? ಕಾದು ನೋಡೋಣ.

Seetha Raama Serial: ಸಿಹಿಯ ಊರು ಸುತ್ತುವ ಕಾರ್ಯಕ್ರಮ ರಾಮ್ ಮತ್ತು ಸೀತಾ ಮಧ್ಯೆ ಪ್ರೀತಿ ಅಂಕುರವಾಗುವಂತೆ ಮಾಡುತ್ತಾ?
ಸೀತಾ ರಾಮ
Edited By:

Updated on: Aug 29, 2023 | 10:30 PM

ಸೀತಾ ರಾಮ’ (Seetha Raama Serial) ಧಾರಾವಾಹಿ ಸಂಚಿಕೆ 32: ರುದ್ರ ಪ್ರತಾಪನ ಮೋಸ ಅರಿಯದ ಸೀತಾ ಅವನ ಮಾತು ಕೇಳಿ ಆಫೀಸ್ ಗೆ ಹೋಗುತ್ತಾಳೆ. ಅವಳಿಗಾಗಿ ರಾಮ್ ಮತ್ತು ಸಿಹಿ ಹೊರಗಡೆಯೇ ಕಾದು ಕುಳಿತುಕೊಳ್ಳುತ್ತಾರೆ. ಒಳಗೆ ಹೋದ ಸೀತಾ ಆರ್ ಪಿಯ ಮೋಸದ ತೆಕ್ಕೆಗೆ ಬೀಳುವ ಮೊದಲು ಹೊರಗಡೆ ಕಾದು ಕುಳಿತ ಸಿಹಿ, ಅಮ್ಮ ಬರದಿರುವುದನ್ನು ನೋಡಿ ಒಳಗಡೆ ಬರುತ್ತಾಳೆ. ಆರ್ ಪಿ ಸೀತಾಳಿಗೆ ಕೊಡುವ ಜ್ಯೂಸ್ ನಲ್ಲಿ ಮದ್ದು ಬೆರೆಸಿರುತ್ತಾನೆ ಇನ್ನೇನು ಸೀತಾ ಕುಡಿಯಬೇಕು ಎನ್ನುವಷ್ಟರಲ್ಲಿ ಸಿಹಿ ಬಂದ ವೇಗಕ್ಕೆ ಅವಳ ಕೈ ಜಾರಿ ಆ ಗ್ಲಾಸ್ ಕೆಳಗೆ ಬೀಳುತ್ತದೆ. ಅವಳ ಹಿಂದೆ ರಾಮನು ಓಡಿ ಬರುತ್ತಾನೆ. ಅದನ್ನು ನೋಡಿದ ರುದ್ರ ಪ್ರತಾಪನಿಗೆ ಕೋಪ ಉಕ್ಕರಿಸಿ ಬರುತ್ತದೆ. ಆದರೆ ಏನು ಹೇಳಲಾಗದ ಅವನ ಪರಿಸ್ಥಿತಿ ಬಳಸಿಕೊಂಡ ಸೀತಾ ಅಲ್ಲಿಂದ ಹೊರಡುತ್ತಾಳೆ.

ಮಗಳನ್ನು ಹೊರಗಡೆ ಕರೆದುಕೊಂಡು ಹೋಗುತ್ತೀನಿ ಎಂದಿದ್ದ ಸೀತಮ್ಮ ಅವಳ ಮಾತನ್ನು ಉಳಿಸಿಕೊಂಡು, ಬಂದಿದ್ದರಿಂದ ರಾಮ್, ಸೀತಾ, ಸಿಹಿ ಮೂರು ಜನ ಸೇರಿಕೊಂಡು ಸುತ್ತಾಡಲು ಆರಂಭಿಸುತ್ತಾರೆ. ಮೂವರು ಸೇರಿ ಪಾನಿಪುರಿ ತಿನ್ನುವುದಕ್ಕೆ ಶುರು ಮಾಡುತ್ತಾರೆ. ಅವರಿಬ್ಬರು ಅಷ್ಟೆಲ್ಲಾ ಖಾರ ತಿನ್ನುವುದನ್ನು ನೋಡಿ ಶ್ರೀರಾಮನಿಗೆ ಸಂಕಟವಾಗುತ್ತದೆ. ಅವನನ್ನು ಇಬ್ಬರು ಸಮಾಧಾನ ಮಾಡಿ ನೀರು ಕೊಟ್ಟು ಬಾಯಿ ಒರೆಸುತ್ತಾರೆ. ಜೊತೆಗೆ ದುಡ್ಡು ಸರಿ ಇಟ್ಟುಕೊಳ್ಳುವ ಬಗ್ಗೆ ಸೀತಾಳ ಪಾಠವು ಆಗುತ್ತದೆ.

ಇದನ್ನೂ ಓದಿ: ಎರಡನೇ ಸ್ಥಾನದಲ್ಲಿ ‘ಸೀತಾ ರಾಮ’ ಧಾರಾವಾಹಿ; ಹೆಚ್ಚಿತು ‘ಗೀತಾ’ ಸೀರಿಯಲ್ ಟಿಆರ್​ಪಿ

ರಜೆ ಇದ್ದರೂ ಆಫೀಸ್ ಗೆ ಬಂದ ರಾಮ್ ಬಗ್ಗೆ ವಿಚಾರಿಸಲು ಭಾರ್ಗವಿ ಮ್ಯಾನೇಜರ್ ಗೆ ಕಾಲ್ ಮಾಡುತ್ತಾಳೆ. ಅಶೋಕ್ ಬಾಸ್ ಅಲ್ಲ ಎನ್ನುವುದು ಗೊತ್ತಿಲ್ಲದೇ ಭಾರ್ಗವಿಗೆ ಬಾಸ್ ಆಫೀಸ್ನಲ್ಲಿಯೇ ಇದ್ದಾರೆ ಎನ್ನುತ್ತಾನೆ. ರಾಮ್ ಮತ್ತು ಅಶೋಕ್ ಮಾಡಿರುವ ಐಡಿಯಾ ಬಗ್ಗೆ ಗೊತ್ತಿಲ್ಲದ ರಾಮನ ಚಿಕ್ಕಿ ಅವನು ಆಫೀಸ್ನಲ್ಲಿಯೇ ಇದ್ದಾನೆ ಎಂದು ನಂಬಿಕೊಳ್ಳುತ್ತಾಳೆ. ಜೊತೆಗೆ ಬಾಸ್ ಹಿಂದೆ ಯಾರೋ ಬಿದ್ದಿದ್ದಾರೆ ಅದನ್ನು ಪತ್ತೆ ಹಚ್ಚಿ ಎಂದು ಚರಣ್ ಗೆ ವಿಷಯ ತಿಳಿಸುತ್ತಾಳೆ. ಹೇಳದೆ ಕೇಳದೆ ಆಫೀಸಿಗೆ ಬಂದಿರುವ ಮ್ಯಾನೇಜರ್ ನಡೆ ಅಶೋಕ್ ಗೆ ಅನುಮಾನ ತರಿಸುತ್ತದೆ. ಮುಂದೆ ಏನಾಗಬಹುದು? ಅಶೋಕ್ ಗೆ ಭಾರ್ಗವಿಯ ಮೋಸ ಮಾಡುತ್ತಿರುವ ವಿಷಯ ತಿಳಿಯುತ್ತಾ? ಸಿಹಿಯ ಊರು ಸುತ್ತುವ ಕಾರ್ಯದಿಂದ ರಾಮ್ ಮತ್ತೆ ಸೀತಾ ಮಧ್ಯೆ ಪ್ರೀತಿ ಹುಟ್ಟುತ್ತಾ? ಕಾದು ನೋಡೋಣ.

Published On - 10:27 pm, Tue, 29 August 23

Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Follow Us