
ಸಾಮಾನ್ಯವಾಗಿ ಪ್ರೀತಿಯಲ್ಲಿ ಇದ್ದಾಗ ಚಿನ್ನು, ಮುದ್ದು, ಬಂಗಾರ, ಡಾರ್ಲಿಂಗ್ ಎಂದು ಕರೆದುಕೊಳ್ಳೋದು ಸಾಮಾನ್ಯ. ಆದರೆ, ಪತ್ನಿಯನ್ನು ಅಥವಾ ಪ್ರೇಯಸಿಯನ್ನು ಮಮ್ಮಿ ಎಂದು ಕರೆಯೋದು ಎಲ್ಲಾದರೂ ಕೇಳಿದ್ದೀರಾ? ‘ಅಮೃತವರ್ಷಿಣಿ’ ಧಾರಾವಾಹಿಯಲ್ಲಿ ನಟಿಸಿ ಫೇಮಸ್ ಆದ ರಜಿನಿಗೆ ಅವರ ಪತಿ ಅರುಣ್ ಮಮ್ಮಿ ಅಂತಲೇ ಕರೆಯೋದು. ಈ ಬಗ್ಗೆ ಸಂದರ್ಶನ ಒಂದರಲ್ಲಿ ಇವರು ವಿವರಿಸಿದ್ದರು.
ಅರುಣ್ ಹಾಗೂ ರಜಿನಿ ನವೆಂಬರ್ 10ರಂದು ವಿವಾಹ ಆಗಿದ್ದಾರೆ. ಇವರ ಮದುವೆ ಅದ್ದೂರಿಯಾಗಿ ನಡೆದಿದೆ. ಆಪ್ತರು ಹಾಗೂ ಕುಟುಂಬದವರು ಈ ಮದುವೆಯಲ್ಲಿ ಭಾಗವಹಿಸಿದ್ದರು. ಈ ವಿವಾಹದ ಬಳಿಕ ಅವರ ಮದುವೆಯ ಫೋಟೋಗಳು ವೈರಲ್ ಆಗಿವೆ. ಅದೇ ರೀತಿ ಅರುಣ್ ಹಾಗೂ ರಜಿನಿ ಹಳೆಯ ಸಂದರ್ಶನ ಕೂಡ ಗಮನ ಸೆಳೆದಿದೆ. ಇದರಲ್ಲಿ ಒಂದು ಅಚ್ಚರಿಯ ಮಾಹಿತಿ ರಿವೀಲ್ ಆಗಿದೆ.
‘ನ್ಯೂಸೋ ನ್ಯೂಸು’ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ, ಅರುಣ್ ಹಾಗೂ ಅಮೃತಾ, ‘ಅವನು ಹೊರಗೂ ನನ್ನ ಮಮ್ಮಿ ಎಂದೇ ಕರೆಯೋದು. ಜ್ಯೂಸ್ ಅಂಗಡಿಯಲ್ಲಿ ಜ್ಯೂಸ್ ಕುಡಿತಾ ಇದ್ವಿ. ಆಗ ಮಮ್ಮಿ ಎಂದು ಕರೆದ. ಅಲ್ಲಿದ್ದವರು ನನ್ನ ನೋಡೋಕೆ ಆರಂಭಿಸಿದರು. ನಿಜವಾಗಲೂ ನೀವು ಅಮ್ಮ-ಮಗನ ಎಂದು ಕೇಳ್ತಾರೆ’ ಎಂದಿದ್ದರು ಅಮೃತಾ.
ಇದನ್ನೂ ಓದಿ: ‘ಅಮೃತವರ್ಷಿಣಿ’ ರಜಿನಿ ವಿವಾಹ; ಇಲ್ಲಿದೆ ಸುಂದರ ಫೋಟೋಗಳು
ಅರುಣ್ ಅವರು ಈಗ ಜಿಮ್ ಟ್ರೇನರ್. ಇವರ ಭೇಟಿ ಆಗಿದ್ದು ಜಿಮ್ ಅಲ್ಲಿಯೇ. ಮಲ್ಲೇಶ್ವರದ ಜಿಮ್ ಒಂದರಲ್ಲಿ ಅರುಣ್ ವರ್ಕೌಟ್ ಮಾಡುತ್ತಿದ್ದರಂತೆ. ಇದೇ ಜಿಮ್ಗೆ ಅಮೃತಾ ಸೇರಿಕೊಂಡರು. ಆಗ ಇಬ್ಬರ ಮಧ್ಯೆ ಪರಿಚಯ ಬೆಳೆಯಿತು. ಈಗ ಇವರು ಮದುವೆ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:08 am, Tue, 11 November 25