- Kannada News Photo gallery Rajini And Arun Gowda Wedding Photos Amruthavarshni Serial Fame Rajini marriage
‘ಅಮೃತವರ್ಷಿಣಿ’ ರಜಿನಿ ವಿವಾಹ; ಇಲ್ಲಿದೆ ಸುಂದರ ಫೋಟೋಗಳು
‘ಅಮೃತವರ್ಷಿಣಿ’ ಧಾರಾವಾಹಿಯ ರಜಿನಿ ಕಿರುತೆರೆ ವೀಕ್ಷಕರಿಗೆ ಚಿರಪರಿಚಿತರು. ಅವರು ಈಗ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಅರುಣ್ ಅವರ ಜೊತೆ ವಿವಾಹ ಆಗಿದ್ದಾರೆ. ಆಪ್ತರು ಬಂದು ಅವರಿಗೆ ಹಾರೈಸಿದ್ದಾರೆ. ಆ ಸಂದರ್ಭದ ಫೋಟೋಗಳು ಇಲ್ಲಿವೆ. ಈ ದಂಪತಿಗೆ ಸದ್ಯ ಎಲ್ಲರೂ ಶುಭ ಹಾರೈಸುತ್ತಿದ್ದಾರೆ.
Updated on: Nov 10, 2025 | 1:34 PM

‘ಅಮೃತವರ್ಷಿಣಿ’ ಧಾರಾವಾಹಿಯ ನಟಿ ರಜಿನಿ ಅವರು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಜಿಮ್ ಟ್ರೇನರ್ ಅರುಣ್ ವೆಂಕಟೇಶ್ ಜೊತೆ ವಿವಾಹ ಆಗಿದ್ದಾರೆ. ಇಂದು (ನವೆಂಬರ್ 10) ಈ ಮದುವೆ ನಡೆದಿದೆ. ನವ ದಂಪತಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ.

ಅರುಣ್ ಹಾಗೂ ರಜಿನಿ ಮಧ್ಯೆ ತುಂಬಾನೇ ಹಳೆಯ ಪರಿಚಯ ಇದೆ. ಇವರು ಕಳೆದ ಎರಡು ವರ್ಷಗಳಿಂದ ಒಟ್ಟಾಗಿ ರೀಲ್ಸ್ ಮಾಡುತ್ತಿದ್ದರು. ಅವರ ರೀಲ್ಸ್ಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದವು.

ಈ ಮೊದಲು ‘ನಿಮ್ಮಿಬ್ಬರ ಮಧ್ಯೆ ಪ್ರೀತಿ ಇದೆಯೇ’ ಎಂದು ಕೇಳಿದಾಗ ರಜಿನಿ ಅವರು ಅಡ್ಡಗೋಡೆಯ ಮೇಲೆ ದೀಪ ಇಟ್ಟಿದ್ದರು. ‘ನಾವಿಬ್ಬರೂ ಫ್ರೆಂಡ್ಸ್ ಅಷ್ಟೇ. ಗೆಳೆಯರನ್ನೇ ಮದುವೆ ಆದರೂ ಬೆಸ್ಟ್. ಅವರಿಗೆ ನಮ್ಮ ಕಷ್ಟ ಸುಖ ಗೊತ್ತಿರುತ್ತದೆ’ ಎಂದು ರಜಿನಿ ಹೇಳಿದ್ದರು.

ಇಂದು ನಡೆದ ಮದುವೆಯಲ್ಲಿ ಆಪ್ತರು, ಗೆಳೆಯರು, ಕುಟುಂಬದವರು ಹಾಜರಿ ಹಾಕಿದ್ದರು. ಅರುಣ್ ಹಾಗೂ ರಜಿನಿ ವಿವಾಹದ ಫೋಟೋಗಳನ್ನು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಈ ಫೋಟೋಗಳು ಗಮನ ಸೆಳೆಯುವ ರೀತಿಯಲ್ಲಿ ಇದೆ.

ರಜಿನಿ ಹಾಗೂ ಅರುಣ್ ಅವರದ್ದು ಪ್ರೇಮ ವಿವಾಹ. ಮನೆಯವರ ಒಪ್ಪಿಗೆ ಪಡೆದ ಬಳಿಕವೇ ಮದುವೆ ಆಗಿದ್ದಾರೆ. ರಜಿನಿ ಕೆಲವು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅರುಣ್ ಅವರು, ಜಿಮ್ ಟ್ರೇನರ್ ಆಗಿದ್ದಾರೆ. ಇವರು ಇನ್ನಷ್ಟೇ ತಮ್ಮ ಲವ್ಸ್ಟೋರಿ ರಿವೀಲ್ ಮಾಡಬೇಕಿದೆ.




