Amruthadhare Serial: ಏನೋ ಮಾಡಲು ಹೋಗಿ ಇನ್ನೇನೋ ಆಯ್ತು; ಮಾಧ್ಯಮದವರ ಕಣ್ಣಿಗೆ ಬಿದ್ದ ಭೂಮಿಕಾ-ಗೌತಮ್

ಗೌತಮ್ ಹಾಗೂ ಭೂಮಿಕಾಗೆ ಮದುವೆ ಮಾಡಬೇಕು ಎಂದು ಎರಡೂ ಕುಟುಂಬದವರು ಪ್ರಯತ್ನಿಸಿದ್ದರು. ಆದರೆ, ಇದು ಸಾಧ್ಯವಾಗಿಲ್ಲರಲಿಲ್ಲ. ಈ ಕಾರಣಕ್ಕೆ ಇವರು ಮತ್ತೊಮ್ಮೆ ಭೇಟಿ ಆಗಿದ್ದಾರೆ.

Amruthadhare Serial: ಏನೋ ಮಾಡಲು ಹೋಗಿ ಇನ್ನೇನೋ ಆಯ್ತು; ಮಾಧ್ಯಮದವರ ಕಣ್ಣಿಗೆ ಬಿದ್ದ ಭೂಮಿಕಾ-ಗೌತಮ್
ಭೂಮಿಕಾ-ಗೌತಮ್

Updated on: Jun 29, 2023 | 11:37 AM

ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ಅಮೃತಧಾರೆ’ (Amruthadhare Serial)ಧಾರಾವಾಹಿ ಗಮನ ಸೆಳೆಯುತ್ತಿದೆ. ರಾಜೇಶ್ ನಟರಂಗ ಅವರು ಗೌತಮ್ ದೀವಾನ್ ಪಾತ್ರದಲ್ಲಿ ಗಮನ ಸೆಳೆಯುತ್ತಿದ್ದಾರೆ. ಛಾಯಾ ಸಿಂಗ್ ಅವರದ್ದು ಭೂಮಿಕಾ ಪಾತ್ರದಲ್ಲಿ ಪ್ರಬುದ್ಧ ನಟನೆ. ದಿನ ಕಳೆದಂತೆ ಈ ಧಾರಾವಾಹಿ ಎಲ್ಲರ ಗಮನ ಸೆಳೆಯುತ್ತಿದೆ. ಭೂಮಿಕಾ-ಗೌತಮ್​ನ ಒಂದು ಮಾಡೋಕೆ ಮನೆಯವರೇ ಪ್ರಯತ್ನ ಮಾಡುತ್ತಿದ್ದಾರೆ. ಈ ಪ್ರಯತ್ನ ಯಶಸ್ವಿ ಆಗುವ ಸೂಚನೆ ಸಿಕ್ಕಿದೆ. ಇತ್ತ ಗೌತಮ್ ಹಾಗೂ ಭೂಮಿಕಾ (Bhoomika) ಏನೋ ಮಾಡಲು ಹೋಗಿ ಮತ್ತಿನ್ನೇನೋ ಮಾಡಿದ್ದಾರೆ.

ಗೌತಮ್ ಹಾಗೂ ಭೂಮಿಕಾ ಅವರ ಮನಸ್ಥಿತಿ ಒಂದೇ ರೀತಿ ಇದೆ. ಗೌತಮ್ ವಯಸ್ಸು 45. ಇನ್ನೂ ಮದುವೆ ಆಗಿಲ್ಲ. ಭೂಮಿಕಾ ವಯಸ್ಸು ಕೂಡ 35 ವರ್ಷ. ಅವಳಿಗೂ ಕಂಕಣ ಭಾಗ್ಯ ಕೂಡಿ ಬಂದಿಲ್ಲ. ಇಬ್ಬರಿಗೂ ಕುಟುಂಬದ ಮೇಲೆ ಪ್ರೀತಿ. ಇವರಿಬ್ಬರಿಗೂ ಮದುವೆ ಮಾಡಬೇಕು ಎಂದು ಎರಡೂ ಕುಟುಂಬದವರು ಪ್ರಯತ್ನಿಸಿದ್ದರು. ಆದರೆ, ಇದು ಸಾಧ್ಯವಾಗಿಲ್ಲ. ಮತ್ತೊಂದು ಕಡೆ ಇವರಿಬ್ಬರನ್ನು ಹೇಗಾದರೂ ಮಾಡಿ ಒಂದು ಮಾಡಬೇಕು ಎಂದು ಮನೆಯವರು ಪ್ರಯತ್ನಿಸುತ್ತಿದ್ದಾರೆ. ಈ ಕಾರಣಕ್ಕೆ ಇವರು ಮತ್ತೊಮ್ಮೆ ಭೇಟಿ ಆಗಿದ್ದಾರೆ.

ಗೌತಮ್ ಹಾಗೂ ಭೂಮಿಕಾಗೆ ಭೇಟಿ ಆಗೋಕೆ ಮನಸ್ಸು ಇರಲಿಲ್ಲ. ಆದರೂ ಇವರು ಒಂದು ಕಡೆ ಸೇರಿದ್ದಾರೆ. ‘ನಮ್ಮ ಮನೆಯಲ್ಲಿ ನೀವು ಬೇಡ ಎಂದಿರಿ ಎಂದು ಹೇಳುತ್ತೇನೆ. ನಿಮ್ಮ ಮನೆಯಲ್ಲಿ ನಾನು ಬೇಡ ಎಂದೆ ಎಂದು ಹೇಳಿ’ ಎಂದಳು ಭೂಮಿಕಾ. ಇದಕ್ಕೆ ಗೌತಮ್ ಕೂಡ ಒಪ್ಪಿದರು. ಆದರೆ ವಿಧಿಯಾಟ ಬೇರೆಯೇ ಇತ್ತು.

ಇದನ್ನೂ ಓದಿ: ‘ಅಮೃತಧಾರೆ’ಯಲ್ಲಿ ಛಾಯಾ ಸಿಂಗ್ ಕಣ್ಣೀರಿಗೆ ಕರಗಿತು ವೀಕ್ಷಕರ ಮನ; ನಟಿಯನ್ನು ಕೊಂಡಾಡಿದ ಅಭಿಮಾನಿಗಳು

ಗೌತಮ್ ಹಾಗೂ ಭೂಮಿಕಾ ಹೊರಡುವವರಿದ್ದರು. ಆ ಸಂದರ್ಭಕ್ಕೆ ಸರಿಯಾಗಿ ಭೂಮಿಕಾ ಉಂಗುರ ಬೀಳುತ್ತದೆ. ಇದನ್ನು ಗೌತಮ್ ಹೆಕ್ಕಿ ಕೊಡುತ್ತಾನೆ. ಆಗ ಮಾಧ್ಯಮದವರು ಮುತ್ತಿಕೊಳ್ಳುತ್ತಾರೆ. ಇದು ದೊಡ್ಡ ಸುದ್ದಿ ಆಗಿ ಬಿಡುತ್ತದೆ. ಹೀಗಾಗಿ, ಇವರು ಅಂದುಕೊಂಡಿದ್ದೇ ಒಂದು, ಆಗಿದ್ದೇ ಮತ್ತೊಂದು ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ