‘ಅಮೃತಧಾರೆ’ಯಲ್ಲಿ ಛಾಯಾ ಸಿಂಗ್ ಕಣ್ಣೀರಿಗೆ ಕರಗಿತು ವೀಕ್ಷಕರ ಮನ; ನಟಿಯನ್ನು ಕೊಂಡಾಡಿದ ಅಭಿಮಾನಿಗಳು
ಮದುವೆ ಆಗದೇ ಇರುವ ಹೆಣ್ಣನ್ನು ಅನೇಕರು ದೂಷಿಸುತ್ತಾರೆ. ಆ ರೀತಿ ದೂಷಿಸಬಾರದು ಎಂಬ ಥೀಮ್ ಇಟ್ಟುಕೊಂಡು ‘ಅಮೃತಧಾರೆ’ ಎಪಿಸೋಡ್ ಮೂಡಿಬಂದಿತ್ತು. ಇದಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
ನಟಿ ಛಾಯಾ ಸಿಂಗ್ (Chaya Singh) ಅವರು ಹಲವು ವರ್ಷಗಳಿಂದ ಬಣ್ಣದ ಲೋಕದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಅವರು ಬಣ್ಣದ ಬದುಕು ಆರಂಭಿಸಿದ್ದು ಕಿರುತೆರೆ ಮೂಲಕ. ಈಗಲೂ ಕಿರುತೆರೆ ಜೊತೆ ನಂಟು ಇಟ್ಟುಕೊಂಡಿದ್ದಾರೆ. ಕನ್ನಡದ ‘ಅಮೃತಧಾರೆ’ (Amruthadhare Serial) ಧಾರಾವಾಹಿಯಲ್ಲಿ ಅವರು ನಟಿಸುತ್ತಿದ್ದಾರೆ. ಜೂನ್ 23ರ ಎಪಿಸೋಡ್ ವೀಕ್ಷಕರ ಗಮನ ಸೆಳೆದಿದೆ. ಮದುವೆ ಆಗದೇ ಇರುವ ಹೆಣ್ಣನ್ನು ಅನೇಕರು ದೂಷಿಸುತ್ತಾರೆ. ಆ ರೀತಿ ದೂಷಿಸಬಾರದು ಎಂಬ ಥೀಮ್ ಇಟ್ಟುಕೊಂಡು ಶುಕ್ರವಾರದ ಎಪಿಸೋಡ್ ಮೂಡಿಬಂದಿತ್ತು. ಇದಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಛಾಯಾ ಸಿಂಗ್ ನಟನೆಯನ್ನು ಫ್ಯಾನ್ಸ್ ಕೊಂಡಾಡಿದ್ದಾರೆ.
ಭೂಮಿಕಾಗೆ (ಛಾಯಾ ಸಿಂಗ್) ಈಗ ವಯಸ್ಸು 35 ವರ್ಷ. ಎಷ್ಟೇ ಪ್ರಯತ್ನ ಮಾಡಿದರೂ ಆಕೆಗೆ ಮದುವೆ ಆಗಿರುವುದಿಲ್ಲ. ಕೊನೆಗೂ ಒಂದು ಹುಡಗನನ್ನು ಗೌತಮ್ ದಿವಾನ್ (ರಾಜೇಶ್ ನಟರಂಗ) ಕರೆದು ತರುತ್ತಾನೆ. ಎಂಗೇಜ್ಮೆಂಟ್ ದಿನ ಆ ಹುಡುಗ ಫ್ರಾಡ್ ಅನ್ನೋದು ಗೊತ್ತಾಗುತ್ತದೆ. ಮದುವೆಯ ಕನಸು ಕಂಡ ಭೂಮಿಕಾಗೆ ಮತ್ತದೇ ನೋವು. ಆ ನೋವಿನಲ್ಲಿ ಆಕೆ ಆಡುವ ಮಾತುಗಳು ಎಲ್ಲರ ಗಮನ ಸೆಳೆದಿದೆ.
ಅನೇಕ ಹೆಣ್ಣುಮಕ್ಕಳು ಗಂಡನ ಮನೆಗೆ ತೆರಳಿ ಕಷ್ಟ ಪಟ್ಟವರಿದ್ದಾರೆ. ಅಲ್ಲಿ ಟಾರ್ಚರ್ ಪಡೆದು ವಿಚ್ಛೇದನ ಪಡೆದವರಿದ್ದಾರೆ. ಮದುವೆ ಆಗದೇ ಇದ್ದವರಿಗೆ ಮದುವೆ ಆಗಿಲ್ಲ ಎನ್ನುವ ಚಿಂತೆ. ಮದುವೆ ಆಗಿ ಗಂಡನ ಮನೆಗೆ ತೆರಳಿದವರಿಗೆ ಬೇರೆಯದೇ ಚಿಂತೆ. ಈ ಎಲ್ಲಾ ವಿಚಾರಗಳನ್ನು ಕಣ್ಣೀರು ಹಾಕುತ್ತಲೇ ಹೇಳುತ್ತಾರೆ ಛಾಯಾ ಸಿಂಗ್. ಅವರ ಕಣ್ಣೀರಿಗೆ ಪ್ರೇಕ್ಷಕರ ಮನ ಕರಗಿದೆ. ಈ ಕ್ಲಿಪ್ನ ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ.
View this post on Instagram
ಇದನ್ನೂ ಓದಿ: ತಗ್ಗಿತು ‘ಲಕ್ಷ್ಮೀ ಬಾರಮ್ಮ’ ಟಿಆರ್ಪಿ; ಹೆಚ್ಚಿತು ‘ಅಮೃತಧಾರೆ’ ವೀಕ್ಷಣೆ, ಪುಟ್ಟಕ್ಕನಿಗೆ ಮೊದಲ ಸ್ಥಾನ
‘ಇಷ್ಟು ದಿನ ಧಾರಾವಾಹಿ ನೋಡಿ ನಗುತ್ತಿದೆ. ಆದರೆ, ಈ ಧಾರಾವಾಹಿಯ ದೃಶ್ಯ ನೋಡಿ ನಿಜಕ್ಕೂ ಕಣ್ಣೀರು ಇಟ್ಟೆ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಛಾಯಾ ಸಿಂಗ್ ಹೇಳುವ ‘ನಾವು ಪೂಜೆ ಮಾಡೋ ಯಾವ್ ದೇವ್ರೂಗೂ ಹೆಣ್ಣುಮಕ್ಕಳೇ ಹುಟ್ಟಿಲ್ಲ’ ಎಂಬ ಮಾತು ಎಲ್ಲರ ಗಮನ ಸೆಳೆದಿದೆ. ಛಾಯಾ ಸಿಂಗ್ ಮಾತ್ರವಲ್ಲದೆ, ರಾಜೇಶ್ ನಟರಂಗ, ಸಿಹಿ ಕಹಿ ಚಂದ್ರು, ಸಾರಾ ಅಣ್ಣಯ್ಯ ಮೊದಲಾದವರ ನಟನೆ ಗಮನ ಸೆಳೆಯುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:46 am, Sat, 24 June 23