ಟಿಆರ್​ಪಿಯಲ್ಲಿ ‘ಸೀತಾ ರಾಮ’ ಹಾಗೂ ‘ಗಟ್ಟಿಮೇಳ’ ಧಾರಾವಾಹಿ ಮಧ್ಯೆ ಟಫ್ ಕಾಂಪಿಟೇಷನ್

|

Updated on: Oct 13, 2023 | 9:37 AM

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಉಮಾಶ್ರೀ ಮೊದಲಾದವರು ನಟಿಸುತ್ತಿದ್ದಾರೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಈ ವಾರ ಧಾರಾವಾಹಿಯ ಟಿಆರ್​ಪಿ ಹೆಚ್ಚಿದೆ. ಈ ಮೂಲಕ ಮೊದಲಿನ ಚಾರ್ಮ್​​ಗೆ ಧಾರಾವಾಹಿ ಮರಳಿದೆ.

ಟಿಆರ್​ಪಿಯಲ್ಲಿ ‘ಸೀತಾ ರಾಮ’ ಹಾಗೂ ‘ಗಟ್ಟಿಮೇಳ’ ಧಾರಾವಾಹಿ ಮಧ್ಯೆ ಟಫ್ ಕಾಂಪಿಟೇಷನ್
ಗಟ್ಟಿಮೇಳ-ಸೀತಾ ರಾಮ
Follow us on

40ನೇ ವಾರದ ಟಿಆರ್​ಪಿ ಲಿಸ್ಟ್​ ಹೊರ ಬಿದ್ದಿದೆ. ಈ ಮೊದಲಿನಿಂದಲೂ ‘ಸೀತಾ ರಾಮ’ (Seetha Raama) ಹಾಗೂ ‘ಗಟ್ಟಿಮೇಳ’ ಧಾರಾವಾಹಿ ಮಧ್ಯೆ ಸಖತ್ ಟಫ್ ಕಾಂಪಿಟೇಷನ್ ನಡೆಯುತ್ತಲೇ ಇತ್ತು. ಈ ಬಾರಿ ಎರಡೂ ಧಾರಾವಾಹಿಗಳು ಒಂದೇ ಸ್ಥಾನ ಪಡೆದಿವೆ. ಈ ಮೂಲಕ ಎರಡೂ ಧಾರಾವಾಹಿಗಳ ಮಧ್ಯೆ ಮೂಡಿರುವ ಕಾಂಪಿಟೇಷನ್ ಹೆಚ್ಚುತ್ತಲೇ ಇದೆ. ಯಾವ ಧಾರಾವಾಹಿಗೆ ಎಷ್ಟನೇ ಸ್ಥಾನ ಸಿಕ್ಕಿದೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

‘ಪುಟ್ಟಕ್ಕನ ಮಕ್ಕಳು’

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಉಮಾಶ್ರೀ ಮೊದಲಾದವರು ನಟಿಸುತ್ತಿದ್ದಾರೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಈ ವಾರ ಧಾರಾವಾಹಿಯ ಟಿಆರ್​ಪಿ ಹೆಚ್ಚಿದೆ. ಈ ಮೂಲಕ ಮೊದಲಿನ ಚಾರ್ಮ್​​ಗೆ ಧಾರಾವಾಹಿ ಮರಳಿದೆ. ಪಕ್ಕಾ ಹಳ್ಳಿ ಸೊಗಡಿನಲ್ಲಿ ಈ ಧಾರಾವಾಹಿ ಮೂಡಿ ಬರುತ್ತಿದೆ.

ಗಟ್ಟಿಮೇಳ-ಸೀತಾ ರಾಮ

‘ಗಟ್ಟಿಮೇಳ’ ಹಾಗೂ ‘ಸೀತಾ ರಾಮ’ ಧಾರಾವಾಹಿಗಳು ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿವೆ. ಈ ಧಾರಾವಾಹಿಗಳಿಗೆ ಭರ್ಜರಿ ಟಿಆರ್​ಪಿ ಸಿಗುತ್ತಿದೆ. ‘ಸೀತಾ ರಾಮ’ ಧಾರಾವಾಹಿಯಲ್ಲಿ ಗಗನ್ ಚಿನ್ನಪ್ಪ, ವೈಷ್ಣವಿ ಗೌಡ ಮೊದಲಾದವರು ನಟಿಸಿದ್ದಾರೆ. ಇನ್ನು, ‘ಗಟ್ಟಿಮೇಳ’ ಧಾರಾವಾಹಿಯಲ್ಲಿ ರಕ್ಷ್ ಮೊದಲಾದವರು ನಟಿಸಿದ್ದಾರೆ.

ಶ್ರೀರಸ್ತು ಶುಭಮಸ್ತು

‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ಸುಧಾರಾಣಿ ಮೊದಲಾದವರು ನಟಿಸಿದ್ದಾರೆ. ಈ ಧಾರಾವಾಹಿ ಕಾಂಪಿಟೇನಷ್​ನಲ್ಲಿ ಮೂರನೇ ಸ್ಥಾನದಲ್ಲಿದೆ.

ಸತ್ಯ

‘ಸತ್ಯ’ ಧಾರಾವಾಹಿ ಕಥೆಯಲ್ಲಿ ಹಲವು ಟ್ವಿಸ್ಟ್​ಗಳನ್ನು ಪಡೆದು ಸಾಗುತ್ತಿದೆ. ಈ ಧಾರಾವಾಹಿ ಮೆಚ್ಚುಗೆ ಪಡೆಯುತ್ತಿದೆ. ಈ ಸೀರಿಯಲ್​ಗೆ ನಾಲ್ಕನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಕಿರುತೆರೆ ಇತಿಹಾಸದಲ್ಲಿ ‘ಅಮೃತಧಾರೆ’ ಹೊಸ ದಾಖಲೆ; ಧಾರಾವಾಹಿ ಹಾಡುಗಳಿಗೊಂದು ಜೂಕ್ ​ಬಾಕ್ಸ್

‘ಅಮೃತಧಾರೆ’

ಅಮೃತಧಾರೆ ಧಾರಾವಾಹಿ ಕಳೆದ ವಾರ ಐದನೇ ಸ್ಥಾನದಲ್ಲಿ ಇತ್ತು. ಈ ಧಾರಾವಾಹಿ ಈ ವಾರವೂ ಐದನೇ ಸ್ಥಾನ ಕಾಪಾಡಿಕೊಂಡಿದೆ. ಈ ಧಾರಾವಾಹಿಯಲ್ಲಿ ರಾಜೇಶ್ ನಟರಂಗ್, ಛಾಯಾ ಸಿಂಗ್ ಮೊದಲಾದವರು ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ