
‘ಅಮೃತವರ್ಷಿಣಿ’ ಧಾರಾವಾಹಿ ಖ್ಯಾತಿಯ ನಟಿ ರಜಿನಿ (Rajini) ಅವರು ಇತ್ತೀಚೆಗೆ ವಿವಾಹ ಆಗಿದ್ದಾರೆ. ಬಹುಕಾಲದ ಗೆಳೆಯ ಅರುಣ್ ಅವರನ್ನು ಮದುವೆ ಆಗಿದ್ದಾರೆ. ಈ ಫೋಟೋ ಹಾಗೂ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅವರು ಹಂಚಿಕೊಂಡಿದ್ದಾರೆ. ಮದುವೆ ಆದರೂ ಪತಿ ಅರುಣ್ ಅವರನ್ನು ಭೇಟಿ ಮಾಡಲು ಸಾಧ್ಯವಾಗಿದ್ದು ಬೆರಳೆಣಿಕೆ ಬಾರಿ ಮಾತ್ರ. ಇದಕ್ಕೆ ಕಾರಣ ಏನು ಎಂಬುದನ್ನು ರಜಿನಿ ಅವರು ವಿವರಿಸಿದ್ದಾರೆ. ಇದು ಸಾಕಷ್ಟು ಅಚ್ಚರಿ ಮೂಡಿಸಿದೆ.
ಅರುಣ್ ಅವರು ಜಿಮ್ ಟ್ರೇನರ್ ಹಾಗೂ ಬಾಡಿ ಬಿಲ್ಡರ್. ಅವರು ಸಾಕಷ್ಟು ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ. ಇದಕ್ಕಾಗಿ ಸಾಕಷ್ಟು ಡಯಟ್ ಮಾಡಬೇಕಾಗುತ್ತದೆ. ಇನ್ನು, ರಜಿನಿ ಅವರು ನಟಿ. ಅವರು ಕೂಡ ಶೂಟ್ನಲ್ಲಿ ಬ್ಯುಸಿ ಇರುತ್ತಾರೆ. ಈ ಎಲ್ಲಾ ಕಾರಣದಿಂದ ಮದುವೆ ಆದ ಬಳಿಕ ಇವರಿಗೆ ಭೇಟಿ ಮಾಡಲು ಸಾಧ್ಯವಾಗಿಲ್ಲ. ಈ ಬಗ್ಗೆ ಅವರು ವಿಡಿಯೋ ಹಂಚಿಕೊಂಡಿದ್ದಾರೆ.
‘ಇಂದು ವಿಶೇಷ ದಿನ. ಮಧ್ಯಾಹ್ನ ಎರಡು ಗಂಟೆಯಿಂದ ರಾತ್ರಿ 2 ಗಂಟೆವರೆಗೆ ಶೂಟ್ ಇತ್ತು. ನನ್ನ ಪಯಣ ಅರುಣ್ ಮನೆ ಕಡೆ. ಅರುಣ್ ಹಾಗೂ ನಾನು ಮದುವೆ ಆದ ಬಳಿಕ ಭೇಟಿ ಆಗಿದ್ದು ಬೆರಳೆಣಿಕಯಷ್ಟು ಬಾರಿ ಮಾತ್ರ. ಅವರು ಅಥ್ಲೆಟ್. ಅವರು ಹೊಸ ಕಾಂಪಿಟೇಷನ್ಗೆ ರೆಡಿ ಆಗ್ತಿದಾರೆ. ಇದಕ್ಕೆ ಅವರದ್ದೇ ಆದ ಕ್ರಮ ಪಾಲಿಸಲೇಬೇಕು. ನಾನು ಶೂಟ್ ಅಲ್ಲಿ ಬ್ಯುಸಿ ಇದ್ದೆ. ಹೀಗಾಗಿ, ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ’ ಎಂದು ರಜಿನಿ ಹೇಳಿದ್ದಾರೆ.
ಇದನ್ನೂ ಓದಿ: ವಿವಾಹದ ವಿಡಿಯೋ ಹಂಚಿಕೊಂಡು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಅಮೃತವರ್ಷಿಣಿ ರಜಿನಿ
‘ನನ್ನ ಬೇಬೋ ಬಾಡಿ ಬಗ್ಗೆ ಅನೇಕರು ನೆಗೆಟಿವ್ ಕಮೆಂಟ್ ಮಾಡುತ್ತಾರೆ. ಅದರ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ. ಆ ಬಾಡಿ ಮಾಡೋಕೆ ಅವನು ಸಾಕಷ್ಟು ಶ್ರಮ ಹಾಕಿದ್ದಾನೆ. ಅವನನ್ನು ಕಳುಹಿಸೋಕೆ ಬೇಸರ ಆಗ್ತಿದೆ. ನನ್ನ ಕಡೆಯಿಂದ ಆಲ್ ದಿ ಬೆಸ್ಟ್ ಹೇಳಿದೆ. ಬದುಕನ್ನು ಬೇರೆಯವರ ಇಚ್ಛೆಯಂತೆ ಬದುಕಬಾರದು’ ಎಂದು ರಜಿನಿ ಹೇಳಿದ್ದಾರೆ. ಅರುಣ್ ಅವರು ಕಾಂಪಿಟೇಷನ್ ಒಂದಕ್ಕಾಗಿ ತೆರಳುತ್ತಿದ್ದಾರೆ. ಹೀಗಾಗಿ, ಅವರನ್ನು ವಿಮಾನ ನಿಲ್ದಾಣಕ್ಕೆ ಬಿಟ್ಟು ಬಂದಿದ್ದಾರೆ ರಜಿನಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.