ವಿವಾಹದ ವಿಡಿಯೋ ಹಂಚಿಕೊಂಡು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಅಮೃತವರ್ಷಿಣಿ ರಜಿನಿ
'ಅಮೃತವರ್ಷಿಣಿ' ಧಾರಾವಾಹಿ ಖ್ಯಾತಿಯ ನಟಿ ರಜಿನಿ ಅವರು ಜಿಮ್ ಟ್ರೇನರ್ ಅರುಣ್ ವೆಂಕಟೇಶ್ ಅವರನ್ನು ವರಿಸಿದ್ದಾರೆ. ನವೆಂಬರ್ 10ರಂದು ನಡೆದ ಈ ಮದುವೆಯ ವಿಡಿಯೋವನ್ನು ರಜಿನಿ ಹಂಚಿಕೊಂಡು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಏಳು ವರ್ಷಗಳ ಪರಿಚಯ ಪ್ರೀತಿಯಾಗಿ, ಈಗ ದಾಂಪತ್ಯಕ್ಕೆ ಕಾಲಿಟ್ಟಿದೆ.

‘ಅಮೃತವರ್ಷಿಣಿ’ ಧಾರಾವಾಹಿ ಖ್ಯಾತಿಯ ರಜಿನಿ ಅವರು ಜಿಮ್ ಟ್ರೇನರ್ ಅರುಣ್ ವೆಂಕಟೇಶ್ ಜೊತೆ ವಿವಾಹ ಆಗಿದ್ದಾರೆ. ನವೆಂಬರ್ 10ರಂದು ಈ ಮದುವೆ ನಡೆದಿದೆ. ಈ ವಿವಾಹಕ್ಕೆ ಆಪ್ತರು ಹಾಗೂ ಕುಟುಂಬದವರು ಬಂದು ಹಾರೈಸಿದ್ದಾರೆ. ರಜಿನಿ ಅವರ ಆಪ್ತರು ಹಂಚಿಕೊಂಡ ಮದುವೆಯ ಕೆಲ ಫೋಟೋಗಳು ವೈರಲ್ ಆಗಿದ್ದವು. ಈಗ ರಜಿನಿ ಅವರೇ ವಿವಾಹ ಕ್ಷಣದ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಗಮನ ಸೆಳೆಯುವ ರೀತಿಯಲ್ಲಿ ಇದೆ.
ರಜಿನಿ ಹಾಗೂ ಅರುಣ್ ಮಧ್ಯೆ ಏಳು ವರ್ಷಗಳ ಪರಿಚಯ ಇದೆ. ಇಬ್ಬರೂ ಒಂದೇ ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದರಂತೆ. ಇಬ್ಬರ ಮಧ್ಯೆ ಫ್ರೆಂಡ್ಶಿಪ್ ಬೆಳೆಯಿತು. ಆ ಬಳಿಕ ಪ್ರೀತಿ ಮೂಡಿದೆ. ಈಗ ಇವರು ಸಪ್ತಪದಿ ತುಳಿದಿದ್ದಾರೆ. ಅರುಣ್ ವೃತ್ತಿಯಲ್ಲಿ ಜಿಮ್ ಟ್ರೇನರ್. ರಜಿನಿ ಅವರು ನಟಿ. ಇಬ್ಬರೂ ರೀಲ್ಸ್ಗಳನ್ನು ಒಟ್ಟಾಗಿ ಮಾಡುತ್ತಿದ್ದರು. ಈಗ ಇವರು ಪತಿ-ಪತ್ನಿ ಆಗಿದ್ದಾರೆ.
ರಜಿನಿ ಅವರು ವಿವಾಹದ ಕ್ಷಣದ ವಿಡಿಯೋನ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ‘ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಹಾರೈಕೆಗಳೊಂದಿಗೆ ನಾವು ಹೊಸ ಜೀವನಕ್ಕೆ ಕಾಲಿರಿಸಿದ್ದೆವೇ. ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು’ ಎಂದಿದ್ದಾರೆ ರಜಿನಿ. ಅಭಿಮಾನಿಗಳು ಈ ವಿಡಿಯೋಗೆ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅನೇಕರು ಅರುಣ್ ಅವರು ಬಾಡಿಗೆ ಫಿದಾ ಆಗಿದ್ದಾರೆ.
View this post on Instagram
ಅರುಣ್ ಜಿಮ್ ಟ್ರೇನರ್. ಹೀಗಾಗಿ, ಕಟ್ಟುಮಸ್ತಾದ ದೇಹ ಮಾಡಿಕೊಂಡಿದ್ದಾರೆ. ವಿಡಿಯೋ ಉದ್ದಕ್ಕೂ ಅವರ ಫಿಸಿಕ್ ಹೈಲೈಟ್ ಆಗುವ ರೀತಿಯಲ್ಲಿ ಇದೆ. ಅವರು ದೇಹವನ್ನು ಇಷ್ಟು ಉತ್ತಮವಾಗಿ ಇಟ್ಟುಕೊಂಡಿದ್ದಕ್ಕೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ‘ಅಮೃತವರ್ಷಿಣಿ’ ರಜಿನಿ ವಿವಾಹ; ಇಲ್ಲಿದೆ ಸುಂದರ ಫೋಟೋಗಳು
ರಜಿನಿ ಅವರನ್ನು ಅರುಣ್ ಅವರು ಮಮ್ಮಿ ಎಂದು ಕರೆಯುತ್ತಾರಂತೆ. ರೀಲ್ಸ್ಗಳಲ್ಲಿ ಅನೇಕ ಕಡೆಗಳಲ್ಲಿ ರಜನಿ ಅವರನ್ನು ಅರುಣ್ ಮಮ್ಮಿ ಎಂದು ಸಂಬೋಧಿಸಿದ್ದನ್ನು ನೀವು ಕಾಣಬಹುದು. ಈ ವಿಚಾರ ಅವರ ಅಭಿಮಾನಿಗಳಿಗೆ ಅಚ್ಚರಿ ತರಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




