‘ಅರ್ಜುನ್ ಜನ್ಯಗೆ ಹೆಣ್ಣುಮಕ್ಕಳನ್ನು ಮಾತ್ರ ಪಿಕ್​ಅಪ್ ಮಾಡಿ ಅಭ್ಯಾಸ’; ಕಾಲೆಳೆದ ಅನುಶ್ರೀ

| Updated By: ಮಂಜುನಾಥ ಸಿ.

Updated on: Feb 28, 2025 | 5:35 PM

Anchor Anushree: ಕನ್ನಡ ಟಿವಿ ಲೋಕದ ಜನಪ್ರಿಯ ನಿರೂಪಕಿ ಅನುಶ್ರೀ ಆಂಕರ್ ಅನುಶ್ರೀ ಎಂದೇ ಖ್ಯಾತರು. ಹರಳು ಹುರಿದಂತೆ ಮಾತನಾಡುವ ಅನುಶ್ರೀ, ರಿಯಾಲಿಟಿ ಶೋಗಳಲ್ಲಿ ಜಡ್ಜ್​ಗಳನ್ನು, ಕಂಟೆಸ್ಟ್​ಗಳನ್ನು, ನೋಡುವ ಪ್ರೇಕ್ಷಕರನ್ನು ತಮ್ಮ ಮಾತಿನ ಮೂಲಕ ನಗಿಸುತ್ತಾ ಇರುತ್ತಾರೆ. ಅದರಲ್ಲೂ ಅರ್ಜುನ್ ಜನ್ಯರ ಕಾಲೆಳೆಯುವುದೆಂದರೆ ಅವರಿಗೆ ಬಲು ಪ್ರೀತಿ.

‘ಅರ್ಜುನ್ ಜನ್ಯಗೆ ಹೆಣ್ಣುಮಕ್ಕಳನ್ನು ಮಾತ್ರ ಪಿಕ್​ಅಪ್ ಮಾಡಿ ಅಭ್ಯಾಸ’; ಕಾಲೆಳೆದ ಅನುಶ್ರೀ
Anushree Arjun Janya
Follow us on

ಆ್ಯಂಕರ್ ಅನುಶ್ರೀ ಅವರು ಜೀ ಕನ್ನಡದ ವೇದಿಕೆಯ ಮೇಲೆ ಗಮನ ಸೆಳೆಯುತ್ತಾರೆ. ಅವರು ಆ್ಯಂಕರಿಂಗ್​ನ ಸಾಕಷ್ಟು ಗಂಭೀರವಾಗಿ ನಡೆಸಿಕೊಡುತ್ತಾರೆ. ಇದರ ಜೊತೆಗೆ ಕೆಲವೊಮ್ಮೆ ಹಾಸ್ಯವನ್ನು ಮಾಡಿದ ಉದಾಹರಣೆಯೂ ಇದೆ. ಈಗ ಅವರು ‘ಸರಿಗಮಪ’ ವೇದಿಕೆ ಮೇಲೆ ಅರ್ಜುನ್ ಜನ್ಯ ಅವರ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ಈ ಸಂದರ್ಭದ ವಿಡಿಯೋಗಳು ಟ್ರೋಲ್ ಪೇಜ್​ಗಳಲ್ಲಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ವೇದಿಕೆ ಮೇಲೆ ಆಗಿದ್ದು ಏನು ಎಂಬುದನ್ನು ನೋಡೋಣ ಬನ್ನಿ.

ಅರ್ಜುನ್ ಜನ್ಯ ಅವರಿಗೆ ದೊಡ್ಡ ಮಟ್ಟದಲ್ಲಿ ಬೇಡಿಕೆ ಇದೆ. ಸಂಗೀತ ಸಂಯೋಜಕರಾಗಿ ಗಮನ ಸೆಳೆದಿದ್ದಾರೆ. ಅವರು ‘ಸರಿಗಮಪ’ ವೇದಿಕೆ ಮೇಲೆ ಜಡ್ಜ್ ಆಗಿದ್ದಾರೆ. ಈ ವೇದಿಕೆ ಮೇಲೆ ಅರ್ಜುನ್ ಜನ್ಯ ಹಾಗೂ ಅನುಶ್ರೀ ಅವರು ಪರಸ್ಪರ ಕಾಲೆಳೆದುಕೊಳ್ಳುತ್ತಾ ಇರುತ್ತಾರೆ. ಈಗ ಅನುಶ್ರೀ ಅವರು ನೇರವಾಗಿ ಅರ್ಜುನ್ ಜನ್ಯಾಗೆ ಟಾಂಗ್ ಕೊಟ್ಟಿದ್ದಾರೆ.

ವಿಜಯ್ ಪ್ರಕಾಶ್ ಅವರು ನಾಗರಹಾವು ಚಿತ್ರದಲ್ಲಿನ ವಿಷ್ಣುವರ್ಧನ್ ಗೆಟಪ್​ನಲ್ಲಿ ಬಂದರು. ಅವರು ಆಗಮಿಸುವಾಗ ನಾಗರಹಾವು ಚಿತ್ರದ ಮ್ಯೂಸಿಕ್​ನ ಕೊಡಲಾಯಿತು. ಅವರು ವೇದಿಕೆ ಮೇಲೆ ಬರುತ್ತಿದ್ದಂತೆ ಅರ್ಜುನ್ ಜನ್ಯ ಬಗ್ಗೆ ಮಾತನಾಡಿದರು. ‘ಎಂಟೂವರೆಗೆ ಪಿಕಪ್​ ಮಾಡ್ತೀನಿ ಎಂದು ಮೆಸೇಜ್ ಮಾಡಿದ್ದರು ಅರ್ಜುನ್ ಜನ್ಯ’ ಎಂದು ವಿಜಯ್ ಪ್ರಕಾಶ್ ಹೇಳಿದರು.

ಇದನ್ನೂ ಓದಿ:ನಿರ್ಮಾಪಕರ ಜೊತೆ ಕುಂಭಮೇಳದಲ್ಲಿ ಪವಿತ್ರಾ ಸ್ನಾನ ಮಾಡಿದ ಅರ್ಜುನ್ ಜನ್ಯ

‘ಅರ್ಜುನ್ ಜನ್ಯಗೆ ಹೆಣ್ಣುಮಕ್ಕಳನ್ನು ಪಿಕಪ್ ಮಾಡಿ ಮಾತ್ರ ಅಭ್ಯಾಸ ಇರೋದು. ಗಂಡುಮಕ್ಕಳನ್ನು ಅವರು ಪಿಕಪ್ ಮಾಡಲ್ಲ’ ಎಂದರು ಅನುಶ್ರೀ ಅವರು. ಆ ಬಳಿಕ ವಿಜಯ್ ಪ್ರಕಾಶ್ ಅವರು, ‘ಗಂಡುಮಕ್ಕಳನ್ನು ಅವರು ಡ್ರಾಪ್ ಮಾಡ್ತಾರೇ ಅಷ್ಟೇ’ ಎಂದು ಕಾಲೆಳೆಯುವ ಪ್ರಯತ್ನ ಮಾಡಿದರು. ಇದು ಸಖತ್ ಫನ್ ಆಗಿದೆ.

ರಿಯಾಲಿಟಿ ಶೋಗಳಲ್ಲಿ ಅರ್ಜುನ್ ಜನ್ಯಾ ಹಾಗೂ ಅನುಶ್ರೀ ಅವರ ಕೆಮಿಸ್ಟ್ರಿ ಸಖತ್ ಆಗಿ ವರ್ಕೌಟ್ ಆಗುತ್ತದೆ. ಇದು ಪದೇ ಪದೇ ಸಾಬೀತಾಗುತ್ತಲೇ ಇದೆ. ಈಗ ‘ಸರಿಗಮಪ’ ವೇದಿಕೆ ಮೇಲೆ ಒಂದಷ್ಟು ವಿಚಾರಗಳು ಗಮನ ಸೆಳೆದಿವೆ.

ಅರ್ಜುನ್ ಜನ್ಯ ಜಡ್ಜ್ ಆಗುವುದರ ಜೊತೆಗೆ ಸಾಕಷ್ಟು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡುತ್ತಾ ಇದ್ದಾರೆ. ಅರ್ಜುನ್ ಜನ್ಯ ಅವರು ‘45’ ಹೆಸರಿನ ಸಿನಿಮಾ ಕೂಡ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಶಿವರಾಜ್​ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ. ಶೆಟ್ಟಿ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ