ನೀನು ಏನೂ ಕಿತ್ತುಕೊಳ್ಳೋಕೆ ಆಗಲ್ಲ: ಗಿಲ್ಲಿ ಎದುರು ಉಗ್ರ ರೂಪ ತಾಳಿದ ಅಶ್ವಿನಿ ಗೌಡ

ಗಿಲ್ಲಿ ನಟ ಅವರು ಕ್ಯಾಪ್ಟನ್ ಆದರೆ ಬಿಗ್ ಬಾಸ್ ಮನೆ ಹೇಗಿರುತ್ತದೆ ಎಂಬುದನ್ನು ನೋಡಲು ವೀಕ್ಷಕರು ಕಾದಿದ್ದರು. ಈಗ ಗಿಲ್ಲಿ ಕ್ಯಾಪ್ಟನ್ ಆಗಿದ್ದು, ಅಶ್ವಿನಿ ಗೌಡ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ. ಇಬ್ಬರ ನಡುವೆ ಜಗಳ ಆಗಿದೆ. ಜಗಳ ಮಾಡುವಾಗ ಏಕವಚನದಲ್ಲಿ ಮಾತನಾಡಿಸಿದ್ದಕ್ಕೆ ಗಿಲ್ಲಿ ಮೇಲೆ ಅಶ್ವಿನಿ ಗೌಡ ಅವರು ಕೋಪಗೊಂಡಿದ್ದಾರೆ.

ನೀನು ಏನೂ ಕಿತ್ತುಕೊಳ್ಳೋಕೆ ಆಗಲ್ಲ: ಗಿಲ್ಲಿ ಎದುರು ಉಗ್ರ ರೂಪ ತಾಳಿದ ಅಶ್ವಿನಿ ಗೌಡ
Gilli Nata, Ashwini Gowda

Updated on: Dec 29, 2025 | 10:55 PM

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋನಲ್ಲಿ ಈ ವಾರ ಗಿಲ್ಲಿ ನಟ ಅವರು ಕ್ಯಾಪ್ಟನ್ ಆಗಿದ್ದಾರೆ. ಈ ಮೊದಲು ಬೇರೆ ಸ್ಪರ್ಧಿಗಳು ಕ್ಯಾಪ್ಟನ್ ಆದಾಗ ಗಿಲ್ಲಿ ನಟ (Gilli Nata) ಅವರು ಕೆಲಸ ಮಾಡಲು ಸೋಮಾರಿತನ ತೋರಿದ್ದರು. ಆದರೆ ಈಗ ಅವರೇ ಕ್ಯಾಪ್ಟನ್ ಆಗಿದ್ದು, ಬೇರೆಯವರು ಅಸಹಕಾರ ತೋರಿದ್ದಕ್ಕೆ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಅದೇ ವಿಚಾರಕ್ಕೆ ಸಂಬಂಧಿಸಿದಂತೆ ಅಶ್ವಿನಿ ಗೌಡ ಮತ್ತು ಗಿಲ್ಲಿ ನಡುವೆ ಜಗಳ ಆಗಿದೆ. ಅಶ್ವಿನಿ ಗೌಡ (Ashwini Gowda) ಅವರನ್ನು ಗಿಲ್ಲಿ ನಟ ಏಕವಚನದಲ್ಲಿ ಮಾತನಾಡಿಸಿದ್ದಾರೆ. ಇದರಿಂದ ಅಶ್ವಿನಿ ಗೌಡ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ.

ಕ್ಯಾಪ್ಟನ್ ಆಗಿರುವ ಗಿಲ್ಲಿ ನಟ ಅವರಿಗೆ ಬಿಗ್ ಬಾಸ್ ಒಂದು ವಿಶೇಷ ಅಧಿಕಾರ ನೀಡಿದರು. ಈ ವಾರ ನಾಮಿನೇಟ್ ಮಾಡುವ ಅವಕಾಶವನ್ನು ಒಬ್ಬರಿಂದ ಕಿತ್ತುಕೊಳ್ಳಬೇಕು ಮತ್ತು ಅದಕ್ಕೆ ಸೂಕ್ತ ಕಾರಣಗಳನ್ನು ನೀಡಬೇಕು ಎಂದು ಬಿಗ್ ಬಾಸ್ ಸೂಚಿಸಿದರು. ಆಗ ಗಿಲ್ಲಿ ನಟ ಅವರು ಈ ಅಧಿಕಾರವನ್ನು ಬಳಸಿ ಅಶ್ವಿನಿ ಗೌಡ ಅವರ ಅವಕಾಶವನ್ನು ಕಿತ್ತುಕೊಂಡರು.

‘ನಾನು ಕ್ಯಾಪ್ಟನ್ ಆಗಿ ಕಿಚನ್ ಕೆಲಸ ಹೇಳಿದರೆ ಅಶ್ವಿನಿ ಗೌಡ ಅವರು ಪ್ರತಿಕ್ರಿಯೆ ಕೂಡ ನೀಡಿಲ್ಲ. ಇತ್ತೀಚೆಗೆ ಅವರು ಮಾತಿನಲ್ಲಿ ಬಹಳ ಶುಗರ್ ಕೋಟಿಂಗ್ ಮಾಡುತ್ತಾರೆ. ಆಣೆ ಮಾಡಿಸಿಕೊಳ್ಳುವಂತಿಲ್ಲ ಎಂಬುದು ರೂಲ್​ ಬುಕ್​​ನಲ್ಲಿ ಇದೆ. ಆದರೂ ಹಾಗೆಯೇ ಮಾಡುತ್ತಿದ್ದಾರೆ. ಹಾಗಾಗಿ ನಾಮಿನೇಷನ್ ಮಾಡುವ ಅಧಿಕಾರವನ್ನು ಅವರಿಂದ ಕಸಿದುಕೊಳ್ಳುತ್ತೇನೆ’ ಎಂದು ಗಿಲ್ಲಿ ನಟ ಹೇಳಿದರು.

ಇದಕ್ಕೆ ಅಶ್ವಿನಿ ಗೌಡ ಅವರು ಪ್ರತಿಕ್ರಿಯೆ ನೀಡುವಂತೆ ಬಿಗ್ ಬಾಸ್ ಸೂಚಿಸಿದರು. ಈ ವೇಳೆ ಮಾತಿಗೆ ಮಾತು ಬೆಳೆಯಿತು. ‘ಮೂರ್ಖರ ಜೊತೆ ಮಾತಾಡೋದಕ್ಕಿಂತ ಮೌನವೇ ಲೇಸು. ಹಾಗಾಗಿ ನಿನ್ನ ಜೊತೆ ಮಾತನಾಡಿ ನಾನು ನನ್ನ ವ್ಯಕ್ತಿತ್ವವನ್ನು ಕೆಳಗೆ ಇಡಲು ಇಷ್ಟಪಡಲ್ಲ. ಕ್ಯಾಪ್ಟನ್ ಆದವರಿಗೆ 2 ಕೊಂಬು ಇರಲ್ಲ. ಈ ಮನೆಯ ಜವಾಬ್ದಾರಿಯನ್ನು ಎಲ್ಲರೂ ಮಾಡಬೇಕು. ನೀನು ಮೊದಲು ಕೆಲಸ ಮಾಡೋದು ಕಲಿ’ ಎಂದು ಅಶ್ವಿನಿ ಗೌಡ ಕೂಗಾಡಿದರು.

ಇದನ್ನೂ ಓದಿ: ಬಿಗ್ ಬಾಸ್ ಗೆಲ್ಲೋದು ಗಿಲ್ಲಿ ನಟ: ಖಚಿತವಾಗಿ ಹೇಳಿದ ಸೂರಜ್ ಸಿಂಗ್

‘ನಿನ್ನಂತವನು ಕ್ಯಾಪ್ಟನ್ ಆದರೆ ಇದೇ ಆಗೋದು. ನಾಮಿನೇಷನ್ ಅಧಿಕಾರ ಕಿತ್ತುಕೊಂಡಿದ್ದಕ್ಕೆ ನಾನು ಉತ್ತರ ಕೊಡುತ್ತೇನೆ. ನೀನು ಅಧಿಕಾರಿಂದ ಹೀಗೆ ಮಾಡಿಲ್ಲ. ಇದು ನಿನ್ನ ದುರಹಂಕಾರ. ಇದು ವ್ಯಕ್ತಿತ್ವದ ಆಟ, ದುರಹಂಕಾರದ ಆಟ ಅಲ್ಲ. ನನ್ನನ್ನು 2.0 ರೀತಿ ಇರಲು ಬಿಡು. ನೀನು ಏನೂ ಕಿತ್ತುಕೊಳ್ಳೋಕೆ ಆಗಲ್ಲ’ ಎಂದು ಅಶ್ವಿನಿ ಗೌಡ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.