AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲಿಮಿನೇಷನ್​ನಿಂದ ಉ.ಕರ್ನಾಟಕ ಅಳ್ತಿದೆ ಎಂದ ಮಾಳುಗೆ ಅವರದ್ದೇ ಭಾಷೆಯಲ್ಲಿ ಬಂತು ಖಡಕ್ ಉತ್ತರ

ಬಿಗ್ ಬಾಸ್ ಕನ್ನಡ 12ರಿಂದ ಮಾಳು ಎಲಿಮಿನೇಟ್ ಆಗಿದ್ದಾರೆ. ಫಿನಾಲೆ ಸಮೀಪವಿದ್ದರೂ, ಅವರು ಹೊರಬಿದ್ದಿದ್ದಾರೆ. ಆದರೆ, ಅವರು ತಮ್ಮ ಸೋಲನ್ನು ಒಪ್ಪದೆ, 'ನನ್ನ ಎಲಿಮಿನೇಷನ್‌ಗೆ ಇಡೀ ಉತ್ತರ ಕರ್ನಾಟಕ ಅಳುತ್ತಿದೆ' ಎಂದು ಹೇಳಿ ವಿವಾದಕ್ಕೆ ಸಿಲುಕಿದ್ದಾರೆ. ಮನೆಯೊಳಗೆ ಅವರ ಕೊಡುಗೆ ಕಡಿಮೆ ಎಂದು ಟೀಕಿಸಿದ ನೆಟ್ಟಿಗರು, ಮಾಳು ಅವರ ಈ ಹೇಳಿಕೆಯನ್ನು ಕಟುವಾಗಿ ಟ್ರೋಲ್ ಮಾಡುತ್ತಿದ್ದಾರೆ. ಇದು ಅವರ ಅಹಂಕಾರದ ಪ್ರತೀಕ ಎಂದಿದ್ದಾರೆ.

ಎಲಿಮಿನೇಷನ್​ನಿಂದ ಉ.ಕರ್ನಾಟಕ ಅಳ್ತಿದೆ ಎಂದ ಮಾಳುಗೆ ಅವರದ್ದೇ ಭಾಷೆಯಲ್ಲಿ ಬಂತು ಖಡಕ್ ಉತ್ತರ
ಮಾಳು
ರಾಜೇಶ್ ದುಗ್ಗುಮನೆ
|

Updated on: Dec 30, 2025 | 7:32 AM

Share

ಮಾಳು (Malu Nipanal) ಅವರು ಬಿಗ್ ಬಾಸ್ ಕನ್ನಡ ಸೀಸನ್ 12ರಿಂದ ಎಲಿಮಿನೇಟ್ ಆಗಿದ್ದಾರೆ. ಬರೋಬ್ಬರಿ 90 ದಿನಗಳ ಕಾಲ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದರು. ಆದರೆ, ಫಿನಾಲೆ ತಲುಪಲು ಅವರ ಬಳಿ ಸಾಧ್ಯವಾಗಿಲ್ಲ. ಫಿನಾಲೆಗೆ ಕೆಲವೇ ವಾರ ಇರುವಾಗ ಅವರು ಎಡವಿದ್ದಾರೆ. ಬಿಗ್ ಬಾಸ್​​ನಿಂದ ಹೊರ ಬಂದ ಅವರು ಹೇಳಿರೋ ಮಾತು ವೈರಲ್ ಆಗಿದೆ. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎಂಬಂತೆ ಅವರ ಮಾತಿಗೆ ಖಡಕ್ ಉತ್ತರ ಬಂದಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ಕ್ಕೆ ಮಾಳು ಅವರ ಕೊಡುಗೆ ಹೆಚ್ಚೇನು ಇಲ್ಲ. ಅವರು ಎಪಿಸೋಡ್​​ಗಳಲ್ಲಿ ಕಾಣಿಸಿಕೊಂಡಿದ್ದು ತುಂಬಾನೇ ಕಡಿಮೆ. ಅವರು ಮಾತನ್ನು ಆಡುತ್ತಲೇ ಇರಲಿಲ್ಲ. ವೀಕೆಂಡ್​ನಲ್ಲೂ ಅವರು ಹೆಚ್ಚು ಚರ್ಚೆಗೆ ಬರುತ್ತಿರಲಿಲ್ಲ. ಆದರೂ ಅವರು 90 ದಿನ ಬಿಗ್ ಬಾಸ್ ಮನೆಯಲ್ಲಿ ಉಳಿದರು. ಉತ್ತರ ಕರ್ನಾಟಕ ಮಂದಿಯ ಬೆಂಬಲ ಅವರಿಗೆ ಸಿಗುತ್ತಿತ್ತು. ಆದರೆ, ಇದನ್ನು ಅವರು ತಪ್ಪಾಗಿ ಭಾವಿಸಿದಂತೆ ಇದೆ.

ಇದನ್ನೂ ಓದಿ: ‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು

ಟಿವಿ9 ಕನ್ನಡದ ಜೊತೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮಾಳು, ತಮ್ಮ ಸೋಲನ್ನು ಒಪ್ಪಿಕೊಂಡಿಲ್ಲ. ‘ನಾನು ಎಲಿಮಿನೇಟ್ ಆಗಿದ್ದಕ್ಕೆ ಇಡೀ ಉತ್ತರ ಕರ್ನಾಟಕ ಅಳುತ್ತಿದೆ ಎಂದು ನನಗೆ ಅನಿಸುತ್ತಿದೆ. ಯಾರೇ ವಿನ್ ಆದರೂ ಇದನ್ನು ನಾನು ಒಪ್ಪಿಕೊಳ್ಳಲ್ಲ’ ಎಂದೆಲ್ಲ ಹೇಳಿದ್ದರು. ಅವರು ಆಡಿದ ಈ ಮಾತುಗಳು ಟ್ರೋಲ್ ಆಗುತ್ತಿವೆ.

‘ಅಲ್ಲ ಲೇ ಮಾಳ್ಯ ಉತ್ತರಕರ್ನಾಟಕದಾಗ ಎಲ್ಲರೂ ಅಳಕುಂತರ ಅಂದಿ ಅಲ್ಲ.. ನೀನ್ ನಿನ್ನ ತಾಲೂಕ ಬಿಟ್ಟ ಯಾರಿಗೂ ಗೊತ್ತಿಲ್ಲ. ನೀನು ಆಟ ಆಡಿದ್ದಿ ಅಂದ್ರ ಸಪೋರ್ಟ್ ಮಾಡ್ತಿದ್ರು. ಏನು ಮಾಡ್ಲಾರ್ದ ಇಲ್ಲಿ ಬಂದ್ ಅಳ ಕುಂತ್ರ ಏನು ಆಗಲ್ಲ’ ಎಂದು ಟ್ವಿಟರ್ ಬಳಕೆದಾರರು ಟ್ವೀಟ್ ಮಾಡಿದ್ದಾರೆ. ಇನ್ನೂ ಕೆಲವರು, ‘ಬಿಗ್ ಬಾಸ್ ಮನೆಯಲ್ಲಿ ಇವ್ನನ್ನ ನೋಡ್ದಾಗ ಈತ ಒಬ್ಬ ಪ್ರಭುದ್ದ ಅನ್ಕೊಂಡಿದ್ದೆ ಆದರೆ, ತನ್ನ ಬಿಟ್ರೆ ಬಿಗ್ ಬಾಸ್ ಗೆಲ್ಲೋ ಯೋಗ್ಯತೆ ಯಾರಿಗೂ ಆ ಮನೇಲಿಲ್ಲ ಅನ್ನೋ ಮಾತು. ಮೂರ್ಖತನದ ಪರಮಾವಧಿ. ಒಳಗಡೆ ಗಳಿಸಿದ್ದು ಹೊರಗಡೆ ಬಂದು ಕಳ್ಕೊಳೋದು ಅಂತಾರಲ್ಲ. ಅದು ಇದೇ ಇರ್ಬೇಕು’ ಎಂದು ಬರೆಯಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ಕುಕ್ಕೆ ಸುಬ್ರಹ್ಮಣ್ಯ ಮತ್ತೆ ನಂಬರ್‌ 1 ಶ್ರೀಮಂತ ದೇಗುಲ
ಕುಕ್ಕೆ ಸುಬ್ರಹ್ಮಣ್ಯ ಮತ್ತೆ ನಂಬರ್‌ 1 ಶ್ರೀಮಂತ ದೇಗುಲ
ಗಿನ್ನಿಸ್ ದಾಖಲೆ ಪುಟ ಸೇರಲಿದೆಯಾ ಕಾಂಗ್ರೆಸ್​​ ಸಾಧನಾ ಸಮಾವೇಶ?
ಗಿನ್ನಿಸ್ ದಾಖಲೆ ಪುಟ ಸೇರಲಿದೆಯಾ ಕಾಂಗ್ರೆಸ್​​ ಸಾಧನಾ ಸಮಾವೇಶ?
ಇಂಡಿಗೋ ವಿಮಾನದೊಳಗೆ ಎಸಿ, ಕರೆಂಟ್ ಇಲ್ಲದೆ ಒದ್ದಾಡಿದ ಪ್ರಯಾಣಿಕರು
ಇಂಡಿಗೋ ವಿಮಾನದೊಳಗೆ ಎಸಿ, ಕರೆಂಟ್ ಇಲ್ಲದೆ ಒದ್ದಾಡಿದ ಪ್ರಯಾಣಿಕರು
ನಾರ್ವೆಯಲ್ಲಿ ಭಾರತೀಯ ವಲಸಿಗರಿಂದ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ
ನಾರ್ವೆಯಲ್ಲಿ ಭಾರತೀಯ ವಲಸಿಗರಿಂದ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ
ಯೂತ್ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ; ಬಿಂದುಗೌಡ ಹೇಳಿದ್ದಿಷ್ಟು
ಯೂತ್ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ; ಬಿಂದುಗೌಡ ಹೇಳಿದ್ದಿಷ್ಟು
ರೈತರಿಗೆ ಗುಡ್​ ನ್ಯೂಸ್: ಜೂನ್ ಮೊದಲ ವಾರದಲ್ಲೇ ಮುಂಗಾರು ಮಳೆ
ರೈತರಿಗೆ ಗುಡ್​ ನ್ಯೂಸ್: ಜೂನ್ ಮೊದಲ ವಾರದಲ್ಲೇ ಮುಂಗಾರು ಮಳೆ
ರೈತರಿಗೂ ತಟ್ಟಿದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಿಸಿ!
ರೈತರಿಗೂ ತಟ್ಟಿದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಿಸಿ!
ಉದ್ಯಮಿಗೆ ಬೆದರಿಕೆ ಹಾಕಿ 10 ಲಕ್ಷ ರೂ. ಹಫ್ತಾಗೆ ಬೇಡಿಕೆ ಇಟ್ಟ ಲೇಡಿ ಡಾನ್!
ಉದ್ಯಮಿಗೆ ಬೆದರಿಕೆ ಹಾಕಿ 10 ಲಕ್ಷ ರೂ. ಹಫ್ತಾಗೆ ಬೇಡಿಕೆ ಇಟ್ಟ ಲೇಡಿ ಡಾನ್!
ಕೆಪಿಸಿಸಿ ಕಚೇರಿಯಲ್ಲಿಯೇ ಯೂತ್​​ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ
ಕೆಪಿಸಿಸಿ ಕಚೇರಿಯಲ್ಲಿಯೇ ಯೂತ್​​ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ
ಕಲಬುರ್ಗಿಯಲ್ಲಿ ಮೃಗಾಲಯ ಉದ್ಘಾಟಿಸಿದ ಸಚಿವ ಖಂಡ್ರೆ!
ಕಲಬುರ್ಗಿಯಲ್ಲಿ ಮೃಗಾಲಯ ಉದ್ಘಾಟಿಸಿದ ಸಚಿವ ಖಂಡ್ರೆ!