ಕುತಂತ್ರದಿಂದ ಜಗಳ ಮಾಡಲು ಬಂದ ಅಶ್ವಿನಿ ಗೌಡ, ಜಾಹ್ನವಿ ಬಾಯಿ ಮುಚ್ಚಿಸಿದ ರಕ್ಷಿತಾ ಶೆಟ್ಟಿ

ಚಿಕ್ಕ ಹುಡುಗಿ ಎಂಬ ಕಾರಣಕ್ಕೆ ರಕ್ಷಿತಾ ಶೆಟ್ಟಿ ಮೇಲೆ ಜಾಹ್ನವಿ, ಅಶ್ವಿನಿ ಗೌಡ ಮುಗಿ ಬಿದ್ದಿದ್ದಾರೆ. ಸುಳ್ಳು ಆರೋಪ ಮಾಡಿ ಜಗಳಕ್ಕೆ ಮುಂದಾಗಿದ್ದಾರೆ. ಆದರೆ ರಕ್ಷಿತಾ ಶೆಟ್ಟಿ ಅವರು ಸ್ವಲ್ಪವೂ ಜಗ್ಗಿಲ್ಲ. ರಕ್ಷಿತಾ ಅವರು ಕಿಂಚಿತ್ತೂ ಹೆದರದೇ ಮಾತಿಗೆ ಮಾತು ಕೊಟ್ಟಿದ್ದಾರೆ. ಅವರ ಧೈರ್ಯಕ್ಕೆ ಇನ್ನುಳಿದವರು ಭೇಷ್ ಎಂದಿದ್ದಾರೆ.

ಕುತಂತ್ರದಿಂದ ಜಗಳ ಮಾಡಲು ಬಂದ ಅಶ್ವಿನಿ ಗೌಡ, ಜಾಹ್ನವಿ ಬಾಯಿ ಮುಚ್ಚಿಸಿದ ರಕ್ಷಿತಾ ಶೆಟ್ಟಿ
Ashwini Gowda, Janhavi, Rakshitha Shetty

Updated on: Oct 17, 2025 | 10:51 PM

ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ (Ashwini Gowda) ಮತ್ತು ಜಾಹ್ನವಿ ಅವರು ನಡೆದುಕೊಳ್ಳುತ್ತಿರುವ ರೀತಿ ಅನೇಕರಿಗೆ ಇಷ್ಟ ಆಗುತ್ತಿಲ್ಲ. ಇಬ್ಬರೂ ಸೇರಿ ರಕ್ಷಿತಾ ಶೆಟ್ಟಿಯನ್ನು ಟಾರ್ಗೆಟ್ ಮಾಡಿದ್ದಾರೆ. ಅದಕ್ಕಾಗಿ ಅವರು ಸುಳ್ಳಿನ ದಾರಿ ತುಳಿದಿದ್ದಾರೆ. ತಾವೇ ಮಧ್ಯರಾತ್ರಿಯಲ್ಲಿ ಗೆಜ್ಜೆ ಶಬ್ದ ಮಾಡಿ ಅದನ್ನು ರಕ್ಷಿತಾ ಶೆಟ್ಟಿ (Rakshitha Shetty) ಮೇಲೆ ಹಾಕಲು ಅವರು ಪ್ರಯತ್ನಿಸಿದ್ದಾರೆ. ಆದರೆ ಅದನ್ನು ರಕ್ಷಿತಾ ಶೆಟ್ಟಿ ಒಪ್ಪಿಕೊಂಡಿಲ್ಲ. ತಮ್ಮ ಮೇಲೆ ಬಂದಿರುವ ಆರೋಪವನ್ನು ತಳ್ಳಿ ಹಾಕಿದ್ದಾರೆ. ಅಲ್ಲದೇ, ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಗ್ ಬಾಸ್ (Bigg Boss Kannada Season 12) ಮನೆಯ ಬಹುತೇಕರು ರಕ್ಷಿತಾ ಶೆಟ್ಟಿಯ ಪರ ವಹಿಸಿದ್ದಾರೆ.

ರಕ್ಷಿತಾ ಶೆಟ್ಟಿ ಅವರಿಗೆ ಸರಿಯಾಗಿ ಕನ್ನಡ ಮಾತನಾಡಲು ಬರುವುದಿಲ್ಲ. ಆದರೆ ಕನ್ನಡದ ವಿಚಾರದಲ್ಲಿ ಅಶ್ವಿನಿ ಗೌಡ, ಜಾಹ್ನವಿ ಮೇಲುಗೈ ಹೊಂದಿದ್ದಾರೆ. ಹಾಗಿದ್ದರೂ ಕೂಡ ಜಗಳ ಮಾಡುವಾಗ ರಕ್ಷಿತಾ ಶೆಟ್ಟಿ ಅವರು ಕಿಂಚಿತ್ತೂ ಜಗ್ಗಲಿಲ್ಲ. ತಮ್ಮ ಮೇಲೆ ಒಟ್ಟಿಗೆ ಮುಗಿಬಿದ್ದ ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರಿಗೆ ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ.

ಜಗಳ ಆಡುವಾಗ ರಕ್ಷಿತಾ ಶೆಟ್ಟಿ ಅವರು ಸರಿಯಾದ ರೀತಿಯಲ್ಲಿ ವಾದ ಮಾಡಿದ್ದಾರೆ. ಆದರೆ ಜಾಹ್ನವಿ ಮತ್ತು ಅಶ್ವಿನಿ ಗೌಡ ಅವರು ತಲೆ ಬುಡ ಇಲ್ಲದೇ ಜಗಳ ಮಾಡಿದ್ದಾರೆ. ಈ ವಿಚಾರದಲ್ಲಿ ಯಾರು ಸರಿ, ಯಾರು ತಪ್ಪು ಎಂಬುದನ್ನು ತೀರ್ಮಾನ ಮಾಡಲು ಬಂದ ಕಾವ್ಯಾ ಶೈವ ಅವರನ್ನು ವಾಪಸ್ ಕಳಿಸಿದರು. ಹಾಗಾಗಿ ಜಗಳದ ಸಂದರ್ಭದಲ್ಲಿ ರಕ್ಷಿತಾ ಪರವಾಗಿ ಯಾರೂ ಮಾತನಾಡಲು ಸಾಧ್ಯವಾಗಲಿಲ್ಲ. ಒಬ್ಬಂಟಿ ಆದರೂ ಕೂಡ ರಕ್ಷಿತಾ ಶೆಟ್ಟಿ ಅವರು ಖಡಕ್ ಆಗಿಯೇ ಜಗಳ ಮಾಡಿದ್ದಾರೆ.

ಜಾಹ್ನವಿ ಮತ್ತು ಅಶ್ವಿನಿ ಗೌಡ ಅವರು ಕುತಂತ್ರ ನಡೆಸಿ ಗೆಜ್ಜೆ ಸದ್ದು ಮಾಡಿದ್ದು ಗುಟ್ಟಾಗಿ ಉಳಿದಿಲ್ಲ. ಗಿಲ್ಲಿ ನಟ ಮತ್ತು ಚಂದ್ರಪ್ರಭ ಮುಂತಾದವರಿಗೆ ಸತ್ಯ ಗೊತ್ತಾಗಿದೆ. ಅಲ್ಲದೇ ಕ್ಯಾಮೆರಾದಲ್ಲಿ ಕೂಡ ಸೆರೆಯಾಗಿದೆ. ತಮಗಿಂತ ತುಂಬ ಚಿಕ್ಕವಳಾದ ರಕ್ಷಿತಾ ಶೆಟ್ಟಿಯನ್ನು ಟಾರ್ಗೆಟ್ ಮಾಡಿದ್ದು ಅನೇಕರು ಸರಿ ಎನಿಸಿಲ್ಲ. ಗಿಲ್ಲಿ ನಟ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸುದೀಪ್ ಎದುರಲ್ಲಿ ಅಶ್ವಿನಿ ಗೌಡಗೆ ಡವ್ ರಾಣಿ ಎಂದ ಬಿಗ್ ಬಾಸ್ ಸ್ಪರ್ಧಿಗಳು

ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರು ಕಂಟೆಂಟ್ ಕೊಡಬೇಕು ಎಂಬ ಕಾರಣಕ್ಕೆ ಹೀಗೆಲ್ಲ ಮಾಡುತ್ತಿದ್ದಾರೆ. ಆದರೆ ಅವರು ಆಯ್ಕೆ ಮಾಡಿಕೊಂಡಿರುವ ದಾರಿ ಸರಿ ಎನಿಸುತ್ತಿಲ್ಲ. ‘ಇನ್ಮೇಲೆ ನಾನು ಅಶ್ವಿನಿ ಗೌಡಗೆ ಗೌರವ ಕೊಡಲ್ಲ’ ಎಂದು ಗಿಲ್ಲ ನಟ ಹೇಳಿದ್ದಾರೆ. ಅಲ್ಲದೇ, ವಾರಾಂತ್ಯದ ಸಂಚಿಕೆಯಲ್ಲಿ ಈ ಬಗ್ಗೆ ಚರ್ಚೆ ಆಗುವ ಸಾಧ್ಯತೆ ಇದೆ. ಸುದೀಪ್ ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡಲು ವೀಕ್ಷಕರು ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.