AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್: ಅಂದು ಕಿತಾಪತಿ ಹೆಂಗಸರು, ಇಂದು ಕಿತಾಪತಿ ಗಂಡಸರು

ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಗಗನ್ ಮತ್ತು ತಾಂಡವ್ ರಾಮ್ ಜಗಳ ಹಾಗೂ ನಿಯಮ ಉಲ್ಲಂಘನೆಗಳಿಂದ ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹಿಂದಿನ ಸೀಸನ್‌ನ ಕಿತಾಪತಿ ಹೆಂಗಸರಂತೆ ಇಬ್ಬರೂ ನಡೆದುಕೊಳ್ಳುತ್ತಿದ್ದು, 'ಕಿತಾಪತಿ ಗಂಡಸರು' ಎಂಬ ಪಟ್ಟ ಪಡೆದುಕೊಂಡಿದ್ದಾರೆ. ಮೊದಲ ವಾರವೇ ಇವರ ಈ ವರ್ತನೆ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.

ಬಿಗ್ ಬಾಸ್: ಅಂದು ಕಿತಾಪತಿ ಹೆಂಗಸರು, ಇಂದು ಕಿತಾಪತಿ ಗಂಡಸರು
ತಾಂಡವ್-ಗಗನ್ Image Credit source: colors Kannada
ರಾಜೇಶ್ ದುಗ್ಗುಮನೆ
|

Updated on:Sep 12, 2026 | 7:08 AM

Share

ಮುಖ್ಯಾಂಶಗಳು

  • ಬಿಗ್ ಬಾಸ್ ಮನೆಯಲ್ಲಿ 'ಕಿತಾಪತಿ ಗಂಡಸರ' ಕಾರಬಾರು?
  • ಮೊದಲ ವಾರವೇ ನಿಯಮ ಉಲ್ಲಂಘನೆ
  • ಸುದೀಪ್ ಪಂಚಾಯತಿಯಲ್ಲಿ ಕ್ಲಾಸ್ ಖಚಿತ?

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಹೆಚ್ಚು ಚರ್ಚೆಯಾದ ವಿಷಯ ಎಂದರೆ ಕಿತಾಪತಿ ಹೆಂಗಸರು. ಈ ಟೈಟಲ್ ಕೊಟ್ಟಿದ್ದು ಗಿಲ್ಲಿ. ಈ ಟೈಟಲ್ ತೆಗೆದುಕೊಂಡಿದ್ದು ಅಶ್ವಿನಿ ಗೌಡ ಹಾಗೂ ಜಾನ್ವಿ. ಇಬ್ಬರೂ ನಡೆದುಕೊಳ್ಳುತ್ತಿದ್ದ ರೀತಿ ಆ ರೀತಿ ಇತ್ತು. ಈ ವರ್ಷ ವೀಕ್ಷಕರಿಗೆ ಕಿತಾಪತಿ ಗಂಡಸರು ಕಾಣಿಸುತ್ತಾ ಇದ್ದಾರೆ. ಇದು ಚರ್ಚೆಯ ಕೇಂದ್ರ ಬಿಂದು ಆಗಿದೆ. ಆ ಜೋಡಿ ಬೇರೆ ಯಾವುದೂ ಅಲ್ಲ ಗಗನ್ ಹಾಗೂ ತಾಂಡವ್ ರಾಮ್.

ಜಾನ್ವಿ ಹಾಗೂ ಅಶ್ವಿನಿ ಜೋಡಿ ಸದಾ ಚರ್ಚೆಯಲ್ಲಿರುತ್ತಿತ್ತು. ಇದಕ್ಕೆ ಕಾರಣ ಅವರು ಮಾಡುವ ಕೆಲಸಗಳು. ಸದಾ ಬೇರೆಯವರ ಬಗ್ಗೆ ಚರ್ಚೆ ಮಾಡುತ್ತಾ, ಯಾರನ್ನು ಹೊರಕ್ಕೆ ಕಳುಹಿಸಬೇಕು ಎಂಬುದನ್ನೆಲ್ಲ ಚರ್ಚೆ ಮಾಡುತ್ತಿದ್ದರು. ಇನ್ನು, ರಕ್ಷಿತಾ ಶೆಟ್ಟಿ ಬಗ್ಗೆ ಸುಖಾಸುಮ್ಮನೆ ಇಲ್ಲ ಸಲ್ಲದನ್ನು ಹೇಳಿ ತೊಂದರೆ ಮೈಮೇಲೆ ಎಳೆದುಕೊಂಡಿದ್ದರು. ಈ ಕಾರಣಕ್ಕೆ ಗಿಲ್ಲಿ ಅವರು ಇಬ್ಬರನ್ನೂ ‘ಕಿತಾಪತಿ ಹೆಂಗಸರು’ ಎಂದು ಕರೆದಿದ್ದರು.

ಈ ಬಾರಿ ಗಗನ್ ಹಾಗೂ ತಾಂಡವ್ ಜೋಡಿ ‘ಕಿತಾಪತಿ ಗಂಡಸರ’ ರೀತಿಯೇ ಅಭಿಮಾನಿಗಳಿಗೆ ಕಾಣುತ್ತಿದೆ. ಸದಾ ಒಬ್ಬಲ್ಲಾ ಒಬ್ಬರ ಬಗ್ಗೆ ಕೆಟ್ಟದನ್ನು ಮಾತನಾಡುತ್ತಾ ಕೂರೋದು ತಾಂಡವ್ ಹಾಗೂ ಗಗನ್ ಕೆಲಸವಾಗಿ ಬಿಟ್ಟಿದೆ. ‘ಸಂಗೀತಾ ಬಾಯಿಬಡ್ಕಿ’ ಎಂದು ತಾಂಡವ್ ವಿವರಿಸುತ್ತಾ ಇದ್ದರು. ಇನ್ನೂ ಅನೇಕರ ಬಗ್ಗೆ ಇದೇ ರೀತಿಯ ವ್ಯಕ್ತಿತ್ವ ವಿವರಣೆ ಕೊಟ್ಟಿದ್ದಾರೆ.ಇದು ಚರ್ಚೆಗೆ ಕಾರಣ ಆಗಿದೆ. ಅನೇಕರು ಇವರನ್ನು ‘ಕಿತಾಪತಿ ಗಂಡಸರು’ ಎಂದು ಕರೆದಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಈ ವಾರ ನಾಮಿನೇಟ್ ಆದವರ ಪಟ್ಟಿ ಇದು 

ಈ ಬಾರಿ ಸೀಸನ್​​ ಅಲ್ಲಿ ಮೊದಲ ವಾರವೇ ಗಗನ್ ಹಾಗೂ ತಾಂಡವ್ ರಾಮ್ ಹಲವು ತಪ್ಪುಗಳನ್ನು ಮಾಡಿದ್ದಾರೆ. ಇಬ್ಬರೂ ಸೇರಿ ಸಾಕಷ್ಟು ನಿಯಮ ಉಲ್ಲಂಘನೆ ಮಾಡಿದ್ದಾರೆ. ವೀಕೆಂಡ್​​ನಲ್ಲಿ ಈ ವಿಷಯ ಚರ್ಚೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಾ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:07 am, Sat, 12 September 26

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್