ಬಿಗ್ ಬಾಸ್ ಮನೆಗೆ ಮಿಲಿಟರಿ ಡ್ರೆಸ್ ಧರಿಸಿ ಬಂದ ಪ್ರಥಮ್; ಹೇಗಿತ್ತು ನೋಡಿ ಖದರ್

|

Updated on: Oct 12, 2023 | 9:30 AM

‘ದಿ ವಿಲನ್’ ಸಿನಿಮಾದ ಹಾಡನ್ನು ಪ್ರಸಾರ ಮಾಡಲಾಗಿದೆ. ಮನೆ ಒಳಗೆ ಮಿಲಿಟಿರಿ ಡ್ರೆಸ್ ಧರಿಸಿದ ಒಂದಷ್ಟು ಮಂದಿ ಆಗಮಿಸಿದ್ದಾರೆ. ಆ ಬಳಿಕ ಪ್ರಥಮ್ ಎಂಟ್ರಿ ಆಗಿದೆ. ಬಂದವರೇ ಅವರು ಎಲ್ಲರ ಮೇಲೆ ರೇಗಾಡಿದ್ದಾರೆ. ಸಖತ್ ಸ್ಟ್ರಿಕ್ಟ್ ಆಗಿ ನಡೆದುಕೊಂಡಿದ್ದಾರೆ. ‘ತಮಾಷೆ ಮಾಡಿದ್ರೆ ಅಮಾಸೆ ತೋರಿಸೋ ಲಾರ್ಡ್ ಪ್ರಥಮ್ ಬಂದ್ರು’ ಎಂದು ಈ ವಿಡಿಯೋಗೆ ಕ್ಯಾಪ್ಶನ್ ನೀಡಲಾಗಿದೆ.

ಬಿಗ್ ಬಾಸ್ ಮನೆಗೆ ಮಿಲಿಟರಿ ಡ್ರೆಸ್ ಧರಿಸಿ ಬಂದ ಪ್ರಥಮ್; ಹೇಗಿತ್ತು ನೋಡಿ ಖದರ್
ಪ್ರಥಮ್
Follow us on

ನಟ ಪ್ರಥಮ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 4’ರ ವಿನ್ನರ್ ಆಗಿದ್ದರು. ಅವರು ಮನೆಯಲ್ಲಿ ನಡೆದುಕೊಳ್ಳುತ್ತಿದ್ದ ರೀತಿ ಬೇರೆಯದೇ ರೀತಿ ಇರುತ್ತಿತ್ತು. ಅವರ ಮಾತು, ಹಾವ-ಭಾವ ಅನೇಕರಿಗೆ ವಿಚಿತ್ರ ಎನಿಸುತ್ತಿತ್ತು. ಆದಾಗ್ಯೂ ಅವರು ಬಿಗ್ ಬಾಸ್ (Bigg Boss) ಟ್ರೋಫಿ ಗೆದ್ದರು. ‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಗ್ರ್ಯಾಂಡ್ ಓಪನಿಂಗ್​ಗೆ ಪ್ರಥಮ್ ಅವರು ಆಗಮಿಸಿದ್ದರು. ಈಗ ಅವರು ಲಾರ್ಡ್​ ಪ್ರಥಮ್ ಆಗಿ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಅವರು ಮಿಲಿಟರಿ ಜೊತೆ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಈ ಪ್ರೋಮೋ ಗಮನ ಸೆಳೆಯುತ್ತಿದೆ.

‘ದಿ ವಿಲನ್’ ಸಿನಿಮಾದ ಹಾಡನ್ನು ಪ್ರಸಾರ ಮಾಡಲಾಗಿದೆ. ಮನೆ ಒಳಗೆ ಮಿಲಿಟಿರಿ ಡ್ರೆಸ್ ಧರಿಸಿದ ಒಂದಷ್ಟು ಮಂದಿ ಆಗಮಿಸಿದ್ದಾರೆ. ಆ ಬಳಿಕ ಪ್ರಥಮ್ ಎಂಟ್ರಿ ಆಗಿದೆ. ಬಂದವರೇ ಅವರು ಎಲ್ಲರ ಮೇಲೆ ರೇಗಾಡಿದ್ದಾರೆ. ಸಖತ್ ಸ್ಟ್ರಿಕ್ಟ್ ಆಗಿ ನಡೆದುಕೊಂಡಿದ್ದಾರೆ. ‘ತಮಾಷೆ ಮಾಡಿದ್ರೆ ಅಮಾಸೆ ತೋರಿಸೋ ಲಾರ್ಡ್ ಪ್ರಥಮ್ ಬಂದ್ರು’ ಎಂದು ಈ ವಿಡಿಯೋಗೆ ಕ್ಯಾಪ್ಶನ್ ನೀಡಲಾಗಿದೆ.

ಸದ್ಯ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿರುವ ಪ್ರೋಮೋ ಗಮನ ಸೆಳೆಯುತ್ತಿದೆ. ಮನೆ ಒಳಗೆ ಬಂದಿರೋ ಪ್ರಥಮ್ ಅವರ ಪೂರ್ಣ ಎಪಿಸೋಡ್​ ನೋಡುವ ಕುತೂಹಲ ಅಭಿಮಾನಿಗಳಿಗೆ ಮೂಡಿದೆ. ದೊಡ್ಮನೆಯಲ್ಲಿ ಸೀಸನ್ 10ರ ಮೊದಲ ಕ್ಯಾಪ್ಟನ್ ಸ್ನೇಹಿತ್ ಆಗಿದ್ದಾರೆ. ಟಾಸ್ಕ್ ಗೆದ್ದು ಅವರು ಮುಂದಿನ ವಾರದ ನಾಮಿನೇಷನ್​ನಿಂದ ಬಚಾವ್ ಆಗಿದ್ದಾರೆ.

ಇದನ್ನೂ ಓದಿ: ಡ್ರೋನ್​ ಪ್ರತಾಪ್​ಗೆ ಡೋಂಗಿ ಎಂದು ಕರೆದ ಸ್ಪರ್ಧಿಗಳು; ಬಿಗ್ ಬಾಸ್ ಮನೆಯಲ್ಲಿ ಕಾವೇರಿತು ಚರ್ಚೆ

‘ಬಿಗ್ ಬಾಸ್ ಕನ್ನಡ ಸೀಸನ್ 10’ಕ್ಕೆ 17 ಸ್ಪರ್ಧಿಗಳ ಆಗಮನ ಆಗಿದೆ. ‘777 ಚಾರ್ಲಿ’ ಶ್ವಾನ ಕೂಡ ಬರುತ್ತದೆ ಎಂದು ಹೇಳಲಾಗಿತ್ತು. ಆದರೆ, ಇನ್ನೂ ಅದನ್ನು ಮನೆ ಒಳಗೆ ಕರೆಸಿಲ್ಲ. ಅದರ ಎಂಟ್ರಿ ಯಾವಾಗ ಆಗುತ್ತದೆ ಎಂದು ಫ್ಯಾನ್ಸ್ ಕಾದಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಎಪಿಸೋಡ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಪ್ರಸಾರ ಕಾಣುತ್ತದೆ. ‘ಜಿಯೋ ಸಿನಿಮಾ’ದಲ್ಲಿ 24 ಗಂಟೆ ಲೈವ್ ನೋಡಲು ಅವಕಾಶ ಇದೆ, ಜೊತೆಗೆ ಹಳೆಯ ಎಪಿಸೋಡ್​ಗಳನ್ನೂ ನೋಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:56 am, Thu, 12 October 23