‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಆದಿ ಮದುವೆ ಆಗಲು ಬಂದ ಮೇಘಾಶ್ರೀ; ಹೊಸ ತಿರುವಿಗೆ ವೇದಿಕೆ

ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ 'ಭಾಗ್ಯಲಕ್ಷ್ಮೀ' ಹೊಸ ತಿರುವು ಪಡೆದಿದೆ. ನಟಿ ಮೇಘಾಶ್ರೀ ವಿಶೇಷ ಅತಿಥಿ ಪಾತ್ರದಲ್ಲಿ ಎಂಟ್ರಿ ನೀಡಿದ್ದು, ಆದಿ ಮದುವೆಯ ಪ್ರಸ್ತಾಪದೊಂದಿಗೆ ದೊಡ್ಡ ಸವಾಲು ಎದುರಿಸಿದ್ದಾನೆ. ಆದಿ ಮತ್ತು ಭಾಗ್ಯಾ ನಡುವಿನ ಬಾಂಧವ್ಯ ಬೆಳೆಯುತ್ತಿರುವಾಗ, ಮೇಘಾಶ್ರೀ ಪ್ರವೇಶವು ಆದಿಯ ಬದುಕಿನಲ್ಲಿ ಅನಿರೀಕ್ಷಿತ ಘಟನೆಗಳನ್ನು ತರಲಿದೆ.

‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಆದಿ ಮದುವೆ ಆಗಲು ಬಂದ ಮೇಘಾಶ್ರೀ; ಹೊಸ ತಿರುವಿಗೆ ವೇದಿಕೆ
ಭಾಗ್ಯಲಕ್ಷ್ಮೀ ಧಾರಾವಾಹಿ
Edited By:

Updated on: Nov 18, 2025 | 7:41 AM

ಕಲರ್ಸ್ ಕನ್ನಡದಲ್ಲಿ ‘ಭಾಗ್ಯಲಕ್ಷ್ಮೀ’ (Bhagyalakshmi) ಧಾರಾವಾಹಿ ಪ್ರಸಾರ ಕಾಣುತ್ತಿದೆ. ಹೊಸ ಹೊಸ ತಿರುವುಗಳನ್ನು ಪಡೆದುಕೊಂಡು ಧಾರಾವಾಹಿ ಈಗ ಬೇರೆಯದೇ ಹಂತಕ್ಕೆ ಹೋಗಿದೆ ಎಂದರೂ ತಪ್ಪಾಗಲಾರದು. ಆದಿ ಹಾಗೂ ಭಾಗ್ಯಾ ನಡುವೆ ಬಾಂಧವ್ಯ ಬೆಳೆಯುತ್ತಿದೆ. ಹೀಗಿರುವಾಗಲೇ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ದೊಡ್ಡ ತಿರುವೊಂದು ಬಂದಿದೆ. ಕಿರುತೆರೆ ನಟಿ ಮೇಘಾಶ್ರೀ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಸಾಕಷ್ಟು ಕುತೂಹಲ ಮೂಡಿಸಿದೆ. ಅವರು ಧಾರಾವಾಹಿಗೆ ದೊಡ್ಡ ತಿರುವು ನೀಡುವ ಸಾಧ್ಯತೆ ಇದೆ.

ಬರಲಿರುವ ಎಪಿಸೋಡ್‌ಗಳಲ್ಲಿ ಆದಿಯ ಕುಟುಂಬವು ಅವನ ಮೇಲೆ ಮದುವೆಯ ಒತ್ತಡ ಹೇರುತ್ತದೆ. ಈ ದಿಸೆಯಲ್ಲಿ ಕುಟುಂಬದವರು ಹುಡುಗಿಯನ್ನು ನೋಡಲು ತೆರಳುತ್ತಾರೆ. ಆದಿಗೆ ಹುಡುಗಿ ನೋಡಲು ಮನಸ್ಸಿರುವುದೇ ಇಲ್ಲ. ಈ ರೀತಿ ಬರುವ ಹುಡುಗಿಯೇ ಮೇಘಾಶ್ರೀ.

ಮೇಘಾಶ್ರೀಯನ್ನು ಕರೆದು ಆದಿ ಮಾತನಾಡುತ್ತಾನೆ. ‘ಈ ಮದುವೆ ಬಗ್ಗೆ ನಿರೀಕ್ಷೆ ಬೇಡ. ನನ್ನ ಜೀವನದಲ್ಲೂ ಒಂದು ಕಹಿ ಘಟನೆ ಇದೆ’ ಎಂದು ಆದಿ ವಿವರಣೆ ನೀಡುತ್ತಾನೆ. ಇದನ್ನು ಭಾಗ್ಯಾ ಹಾಗೂ ಆಕೆಯ ಅತ್ತೆ ಕೇಳಿಸಿಕೊಳ್ಳುತ್ತಾರೆ. ಇದರಿಂದ ಆದಿ ಮುಂದೇನು ಮಾಡುತ್ತಾನೆ ಎಂಬ ಪ್ರಶ್ನೆಗಳನ್ನು ಎಬ್ಬಿಸುತ್ತದೆ. ಈ ಭೇಟಿಯು ಅವನ ಬದುಕಿನಲ್ಲಿ ಹೊಸ ತಿರುವು ತರುತ್ತದೆಯೇ?ಕುಟುಂಬದೊಳಗಿನ ಹೊಸ ಸಂಘರ್ಷಗಳಿಗೆ ಕಾರಣವಾಗುತ್ತದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ.

ಇದನ್ನೂ ಓದಿ: ಭರ್ಜರಿ ಟಿಆರ್​ಪಿ ಪಡೆದ ‘ಭಾಗ್ಯಲಕ್ಷ್ಮೀ’; ಬಿಗ್ ಬಾಸ್ ಟಿಆರ್​ಪಿ ಎಷ್ಟು?

ಈ ಸಂದರ್ಭದಲ್ಲಿ ಮೇಘಾಶ್ರೀ ಬಳಿ ಆದಿ ಒಂದು ಮನವಿ ಮಾಡಿಕೊಳ್ಳುತ್ತಾನೆ. ನಾನು ಇಷ್ಟ ಆಗಿಲ್ಲ ಎಂದು ಹೇಳಿಕೊಳ್ಳಿ. ಇದರಿಂದ ಇಬ್ಬರ ಜೀವನವೂ ಉಳಿಯುತ್ತದೆ ಎಂಬುದು ಆದಿ ಕೋರಿಕೆ ಆಗಿದೆ. ಆದರೆ, ಇದಕ್ಕೆ ಮೇಘಾಶ್ರೀ ಒಪ್ಪುತ್ತಾರಾ ಎಂಬುದೇ ಸದ್ಯದ ಪ್ರಶ್ನೆ. ಆದಿಗೆ ಭಾಗ್ಯಾಳ ಮೇಲೆ ಪ್ರೀತಿ ಮೂಡುತ್ತಿದೆ. ಆದರೆ, ಭಾಗ್ಯಾ ಈ ಭಾವನೆಯಲ್ಲಿ ಆತನನ್ನು ನೋಡುತ್ತಿಲ್ಲ ಎನ್ನಬಹುದು. ಮತ್ತೊಂದು ಭಾಗ್ಯಾಳ ಪತಿ ತಾಂಡವ್​ಗೆ ಎಲ್ಲ ಕಡೆಗಳಲ್ಲೂ ಹಿನ್ನಡೆಯೇ ಆಗುತ್ತಿದೆ. ಕಲರ್ಸ್ ಕನ್ನಡದಲ್ಲಿ ಪ್ರತಿದಿನ ಸಂಜೆ 7 ಗಂಟೆಗೆ ‘ಭಾಗ್ಯಲಕ್ಷ್ಮೀ ಪ್ರಸಾರ ಕಾಣುತ್ತಿದೆ. ಈಗ ಈ ಎಪಿಸೋಡ್​ನಿಂದ ಮತ್ತಷ್ಟು ಕುತೂಹಲ ಹೆಚ್ಚುವ ಸೂಚನೆ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:41 am, Tue, 18 November 25