ದರ್ಶನ್ ಸಿನಿಮಾ ಹಾಡು ಹೇಳಿ ನಾನು ಫೇಮಸ್ ಆದೆ: ನೇಪಾಳದ ಹುಡುಗ ಪ್ರೇಮ್ ತಾಪ
ನೇಪಾಳ ಮೂಲದ ಪ್ರೇಮ್ ತಾಪ ಅವರು ಕರ್ನಾಟಕಕ್ಕೆ ಬಂದು 16 ವರ್ಷ ಆಗಿದೆ. ಮೊದಲಿಗೆ ಅವರಿಗೆ ಕನ್ನಡ ಬರುತ್ತಿರಲಿಲ್ಲ. ಇಲ್ಲಿಯೇ ಅವರು ಶಾಲೆಗೆ ಸೇರಿದರು. ಬಳಿಕ ಕನ್ನಡ ಕಲಿತುಕೊಂಡರು. ಟಿವಿ ರಿಯಾಲಿಟಿ ಶೋಗಳಲ್ಲಿ ಕೂಡ ಕಾಣಿಸಿಕೊಂಡು ಜನರಿಗೆ ಪರಿಚಯ ಆದರು. ಈಗ ‘ಭರ್ಜರಿ ಬ್ಯಾಚುಲರ್’ ಶೋನಿಂದ ಅವರಿಗೆ ಆಫರ್ ಬಂದಿದೆ. ‘ಟಿವಿ9’ ಜೊತೆ ಅವರು ಕೆಲವು ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಪ್ರೇಮ್ ತಾಪ ಅವರು ಮೂಲತಃ ನೇಪಾಳದವರು. ಆದರೂ ಕನ್ನಡವನ್ನು ಅವರು ತುಂಬ ಚೆನ್ನಾಗಿ ಮಾತನಾಡುತ್ತಾರೆ. ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಸಿನಿಮಾದ ಸಾಂಗ್ಸ್ ಹಾಡಿಯೇ ತಾವು ಫೇಮಸ್ ಆಗಿದ್ದು ಎಂದು ಅವರು ಹೇಳಿದ್ದಾರೆ. ಅದಕ್ಕಾಗಿ ಡಿ ಬಾಸ್ ಫ್ಯಾನ್ಸ್ಗೆ ಅವರು ಧನ್ಯವಾದ ಅರ್ಪಿಸಿದ್ದಾರೆ. ಈಗ ‘ಭರ್ಜರಿ ಬ್ಯಾಚುಲರ್ಸ್’ ಶೋನಲ್ಲಿ ಪ್ರೇಮ್ ತಾಪ ಕಾಣಿಸಿಕೊಳ್ಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos