ಮೊದಲ ಸಿನಿಮಾ ಒಪ್ಪಿಕೊಂಡ ಭವ್ಯಾ ಗೌಡ; ಯಾವುದು ಅದು?

‘ಲ್ಯಾಂಡ್​ಲಾರ್ಡ್’ ಸಿನಿಮಾಗೆ ದುನಿಯಾ ವಿಜಯ್ ಅವರೇ ನಿರ್ದೇಶನ ಮಾಡಿರೋದನ್ನು ಕಾಣಬಹುದು. ಈ ಸಿನಿಮಾದ ರಿಲೀಸ್ ಡೇಟ್ ಇತ್ತೀಚೆಗೆ ರಿವೀಲ್ ಆಗಿದೆ. ಈ ಚಿತ್ರ ಜನವರಿ 23ರಂದು ರಿಲೀಸ್ ಆಗಲಿದೆ. ಈ ವಿಷಯ ಅಭಿಮಾನಿಗಳಿಗೆ ಖುಷಿ ಇದೆ. ಇದರಲ್ಲಿ ದುನಿಯಾ ವಿಜಯ್ ಮಗಳು ರಿತನ್ಯ ಕೂಡ ನಟಿಸಿದ್ದಾರೆ. 

ಮೊದಲ ಸಿನಿಮಾ ಒಪ್ಪಿಕೊಂಡ ಭವ್ಯಾ ಗೌಡ; ಯಾವುದು ಅದು?
ಭವ್ಯಾ ಗೌಡ
Edited By:

Updated on: Nov 19, 2025 | 7:56 AM

ಭವ್ಯಾ ಗೌಡ (Bhavya Gowda) ಅವರು ಕಿರುತೆರೆ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿದವರು. ಅವರು ಈಗ ಹಿರಿತೆರೆಗೆ ಕಾಲಿಟ್ಟಿದ್ದಾರೆ ಎಂದರೆ ನೀವು ನಂಬಲೇಬೇಕು. ಈ ವಿಚಾರವನ್ನು ಅವರು ಸ್ವತಃ ಹೇಳಿಕೊಂಡಿದ್ದಾರೆ. ಈ ವಿಷಯ ಕೇಳಿ ಅಭಿಮಾನಿಗಳಿಗೆ ಖುಷಿ ಆಗಿದೆ. ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 5’ರ ವೇದಿಕೆ ಮೇಲೆ ಭವ್ಯಾ ಗೌಡ ಅವರು ಈ ವಿಷಯವನ್ನು ರಿವೀಲ್ ಮಾಡಿದರು. ಅವರು ಸ್ಪರ್ಧಿಯಾಗಿ ಈ ರಿಯಾಲಿಟಿ ಶೋಗೆ ಕಾಲಿಟ್ಟಿದ್ದಾರೆ.

ಭವ್ಯಾ ಗೌಡ ಅವರು ‘ಗೀತಾ’ ಧಾರಾವಾಹಿ ಮಾಡಿದರು. ಕಲರ್ಸ್ ಕನ್ನಡದಲ್ಲಿ ಧಾರಾವಾಹಿ ಪ್ರಸಾರ ಕಂಡಿತು. ಆ ಬಳಿಕ ಭವ್ಯಾ ಗೌಡ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಸ್ಪರ್ಧಿ ಆದರು. ಈಗ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ‘ಕರ್ಣ’ ಧಾರಾವಾಹಿಯ ಭಾಗವಾಗಿ ಅವರು ಇದ್ದಾರೆ. ನಿಧಿ ಹೆಸರಿನ ಪಾತ್ರವನ್ನು ಮಾಡುತ್ತಿದ್ದಾರೆ. ಅವರು ಒಂದು ವಿಶೇಷ ಮಾಹಿತಿ ಹಂಚಿಕೊಂಡಿದ್ದಾರೆ. ತಾವು ಸಿನಿಮಾ ಮಾಡುತ್ತಿರುವುದಾಗಿ ವಿವರಣೆ ನೀಡಿದ್ದಾರೆ.

‘ನಾನು ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಲ್ಯಾಂಡ್​ಲಾರ್ಡ್ ಅನ್ನೋದು ಸಿನಿಮಾದ ಹೆಸರು. ಸಿನಿಮಾ ಮಾಡಿಲ್ಲ. ಇದು ಮೊದಲ ಸಿನಿಮಾ. ನಾನು ನರ್ವಸ್ ಆಗಿದ್ದೆ. ರಚಿತಾ ರಾಮ್, ದುನಿಯಾ ವಿಜಯ್ ಎದುರು ನಿಂತಿದ್ದಾರೆ. ಶಾಟ್ ಮುಗಿದ ಬಳಿಕ ರಚಿತಾ ಪಕ್ಕದಲ್ಲಿ ಕರೆದು ಕೂರಿಸಿದರು. ಎಲ್ಲರೂ ಆರ್ಟಿಸ್ಟ್ ಸರಿ ಸಮಾನರು ಎಂದರು. ಅವರು ಲೇಡಿ ಸೂಪರ್​ಸ್ಟಾರ್’ ಎಂದು ಭವ್ಯಾ ಗೌಡ ಅವರು ರಚಿತಾ ರಾಮ್​ನ ಹೊಗಳಿದ್ದಾರೆ.

‘ಲ್ಯಾಂಡ್​ಲಾರ್ಡ್’ ಸಿನಿಮಾಗೆ ದುನಿಯಾ ವಿಜಯ್ ಅವರೇ ನಿರ್ದೇಶನ ಮಾಡಿರೋದನ್ನು ಕಾಣಬಹುದು. ಈ ಸಿನಿಮಾದ ರಿಲೀಸ್ ಡೇಟ್ ಇತ್ತೀಚೆಗೆ ರಿವೀಲ್ ಆಗಿದೆ. ಈ ಚಿತ್ರ ಜನವರಿ 23ರಂದು ರಿಲೀಸ್ ಆಗಲಿದೆ. ಈ ವಿಷಯ ಅಭಿಮಾನಿಗಳಿಗೆ ಖುಷಿ ಇದೆ. ಇದರಲ್ಲಿ ದುನಿಯಾ ವಿಜಯ್ ಮಗಳು ರಿತನ್ಯ ಕೂಡ ನಟಿಸಿದ್ದಾರೆ.

ಇದನ್ನೂ ಓದಿ: ಒಂದೇ ದಿನ ಎರಡು ದೊಡ್ಡ ಸುದ್ದಿ ಕೊಟ್ಟ ಭವ್ಯಾ ಗೌಡ; ಕಾರು ಖರೀದಿ, ಉದ್ಯಮ ಶುರು

ಭವ್ಯಾ ಗೌಡ ನಟನೆಯ ‘ಕರ್ಣ’ ಧಾರಾವಾಹಿ ಬಗ್ಗೆ ಹೇಳಬೇಕು ಎಂದರೆ ಇದು ಒಳ್ಳೆಯ ಟಿಆರ್​ಪಿ ಪಡೆದು ಸಾಗುತ್ತಿದೆ. ಎಲ್ಲರ ಮೆಚ್ಚುಗೆಗೆ ಈ ಧಾರವಾಹಿ ಪಾತ್ರವಾಗಿದೆ. ಭವ್ಯಾ ಗೌಡ ಪಾತ್ರ ಎಲ್ಲರಿಗೂ ಇಷ್ಟ ಆಗುವ ರೀತಿಯಲ್ಲಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:48 am, Wed, 19 November 25