ಅಶ್ವಿನಿ ಗೌಡಗೆ ಇರೋ ಎರಡೆರಡು ಮುಖವನ್ನು ಬಿಚ್ಚಿಟ್ಟ ಗಿಲ್ಲಿ ನಟ

ಗಿಲ್ಲಿ ನಟ ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡರ ಎರಡೂ ಮುಖಗಳನ್ನು ಬಯಲು ಮಾಡಿದ್ದಾರೆ. ಅಶ್ವಿನಿ ಅವರ ಮೂಡ್ ಸ್ವಿಂಗ್ಸ್, ಜನರನ್ನು ನಿಯಂತ್ರಿಸುವ ಮನೋಭಾವ ಮತ್ತು ಪರಿಸ್ಥಿತಿಗೆ ತಕ್ಕಂತೆ ವರ್ತಿಸುವ ರೀತಿ ಬಗ್ಗೆ ಗಿಲ್ಲಿ ವಿವರಿಸಿದ್ದಾರೆ. ಸುದೀಪ್ ಅವರ ಸಲಹೆಯ ನಂತರ ಅಶ್ವಿನಿ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿದೆ.

ಅಶ್ವಿನಿ ಗೌಡಗೆ ಇರೋ ಎರಡೆರಡು ಮುಖವನ್ನು ಬಿಚ್ಚಿಟ್ಟ ಗಿಲ್ಲಿ ನಟ
ಅಶ್ವಿನಿ-ಗಿಲ್ಲಿ

Updated on: Dec 11, 2025 | 7:37 AM

ಬಿಗ್ ಬಾಸ್ ಮನೆಯಲ್ಲಿರೋ ಗಿಲ್ಲಿ ನಟ ಅವರು ಎಲ್ಲರನ್ನೂ ಎಕ್ಸ್​​ಪೋಸ್ ಮಾಡುತ್ತಿದ್ದಾರೆ. ಹಾಸ್ಯದ ಮೂಲಕ ಎಲ್ಲವನ್ನೂ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ. ಇತ್ತೀಚೆಗೆ ಅಶ್ವಿನಿ ಸೈಲೆಂಟ್ ಆದ ಬಳಿಕ ಗಿಲ್ಲಿಗೆ ಅವರ ಜೊತೆ ಜಗಳ ಮಾಡುವ ಅವಕಾಶವೇ ಸಿಗಲಿಲ್ಲ. ಅಶ್ವಿನಿ ಗೌಡ ಅವರು ಹೇಗೆ ಎಂಬುದನ್ನು ಗಿಲ್ಲಿ ನಟ ವಿವರಿಸಿದ್ದಾರೆ. ಡಿಸೆಂಬರ್ 10ರ ಎಪಿಸೋಡ್​ನಲ್ಲಿ ಈ ಬಗ್ಗೆ ಅವರು ಸವಿವರವಾಗಿ ಹೇಳಿದ್ದಾರೆ.

ಗಿಲ್ಲಿ ಹಾಗೂ ರಜತ್​ಗೆ ದೊಡ್ಮನೆಯಲ್ಲಿ ಒಳ್ಳೆಯ ಬಾಂಡಿಂಗ್ ಬೆಳೆದಿದೆ. ಇಬ್ಬರೂ ಸಮಯ ಸಿಕ್ಕಾಗ ಮಾತನಾಡುತ್ತಾ ಇರುತ್ತಾರೆ. ಗಿಲ್ಲಿಗೆ ಸೀಕ್ರೆಟ್ ಟಾಸ್ಕ್ ನೀಡಲಾಗಿತ್ತು. ಈ ಬಗ್ಗೆ ರಜತ್​ಗೆ ಅನುಮಾನ ಬಂದಿದೆ. ಅವರು ಗಿಲ್ಲಿ ಬಳಿ ಪ್ರಶ್ನೆ ಮಾಡಿದ್ದಾರೆ. ‘ಯಾಕೋ ನೀನು ಡಿಫರೆಂಟ್ ಆಗಿ ಕಾಣಿಸ್ತಾ ಇದೀಯಾ, ಭಿನ್ನವಾಗಿ ನಡೆದುಕೊಳ್ತಾ ಇದೀಯಾ’ ಎಂದು ಹೇಳಿದ್ದಾರೆ. ಆ ವೇಳೆ ಅಶ್ವಿನಿ ಗೌಡ ವಿಷಯ ಚರ್ಚೆಗೆ ಬಂದಿದೆ.

‘ಅಶ್ವಿನಿ ಗೌಡ ನಿನ್ನ ಆ ರೀತಿ ಜಗಳ ಆಡಿದರು. ಈಗ ಅವರು ಇಷ್ಟು ಶಾಂತವಾಗಿರುವುದು ಏಕೆ’ ಎಂದು ಗಿಲ್ಲಿಗೆ ಪ್ರಶ್ನೆ ಮಾಡಿದರು ರಜತ್. ಇದರ ಹಿಂದಿನ ರಹಸ್ಯವನ್ನು ಗಿಲ್ಲಿ ಬಿಚ್ಚಿಟ್ಟರು. ‘ಅವರಿಗೆ ಮೂಡ್​ಸ್ವಿಂಗ್. ಒಮ್ಮೊಮ್ಮೆ ಪಾಪ ಎನಿಸಿಬಿಡುತ್ತದೆ. ಒಮ್ಮೊಮ್ಮೆ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ’ ಎಂದರು ಗಿಲ್ಲಿ.

‘ಅವರು ಒಮ್ಮೊಮ್ಮೆ ಶಾಂತವಾಗಿ ಮಾತನಾಡುತ್ತಾರೆ. ಗಿಲ್ಲಿ ನಾನು ಅದನ್ನು ಮಾಡಲ, ಇದನ್ನು ಮಾಡಲ ಎಂದು ಚೆನ್ನಾಗಿ ಕೇಳುತ್ತಾರೆ. ಅವರಲ್ಲಿ ಮತ್ತೊಂದು ವಿಷಯ ಇದೆ. ಹಿಡಿತಕ್ಕೆ ಸಿಗುತ್ತಾರೆ ಎಂದು ಕಂಡರೆ ಅರೆದೇಬಿಡ್ತಾರೆ. ದಕ್ಕಲ್ಲ ಎಂದು ಅನಿಸಿದರೆ ಸೈಲೆಂಟ್ ಆಗಿ ಬಿಡ್ತಾರೆ’ ಎಂದು ಅಶ್ವಿನಿ ಗೌಡ ಅವರ ಎರಡು ಮುಖವನ್ನು ತೋರಿಸಿದರು.

ಇದನ್ನೂ ಓದಿ: ಬಿಗ್ ಬಾಸ್ ಶೋನಿಂದ ಎಷ್ಟು ದುಡ್ಡು ಸಿಕ್ತು? ಉತ್ತರಿಸಿದ ಅಭಿಷೇಕ್

ಅಶ್ವಿನಿ ಅವರು ಬಳಕೆ ಮಾಡುವ ಪದ ಸರಿ ಇರೋದಿಲ್ಲ. ಇದನ್ನು ಸುದೀಪ್ ಅವರು ಆಡಿಯೋ ಮೂಲಕ ತೋರಿಸಿದ್ದರು. ಇದಾದ ನಂತರದಲ್ಲಿ ಅವರು ಬದಲಾಗಿಬಿಟ್ಟರು. ಅವರು ಈಗ ಸಂಪೂರ್ಣವಾಗಿ ಚೇಂಜ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.