ಪರಿಪರಿಯಾಗಿ ಬೇಡಿದ್ರೂ ಕೊಟ್ಟಿಲ್ಲ; ಗಿಲ್ಲಿ ಜೊತೆ ರಘು ನಡೆದುಕೊಂಡ ರೀತಿ ಬಗ್ಗೆ ಶುರುವಾಗಿದೆ ಚರ್ಚೆ

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ರಘು ಮತ್ತು ಗಿಲ್ಲಿ ನಡುವಿನ ಉತ್ತಮ ಗೆಳೆತನ ಈಗ ಮುರಿದು ಬೀಳುವ ಹಂತದಲ್ಲಿದೆ. ರಘು ಅವರ ವಿಚಿತ್ರ ವರ್ತನೆ ಚರ್ಚೆ ಹುಟ್ಟುಹಾಕಿದೆ. ಅವರು ಗಿಲ್ಲಿ ಕಳಪೆ ಟ್ಯಾಗ್ ನೀಡಿದ್ದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ. ರಘು ಅವರ ಗೆಳೆತನ ನಕಲಿಯಾಗಿತ್ತಾ ಎಂಬ ಪ್ರಶ್ನೆ ಈಗ ಮೂಡಿದೆ.

ಪರಿಪರಿಯಾಗಿ ಬೇಡಿದ್ರೂ ಕೊಟ್ಟಿಲ್ಲ; ಗಿಲ್ಲಿ ಜೊತೆ ರಘು ನಡೆದುಕೊಂಡ ರೀತಿ ಬಗ್ಗೆ ಶುರುವಾಗಿದೆ ಚರ್ಚೆ
ಬಿಗ್ ಬಾಸ್

Updated on: Dec 06, 2025 | 11:51 AM

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ರಘು ಮತ್ತು ಗಿಲ್ಲಿ (Gilli) ಮಧ್ಯೆ ಒಳ್ಳೆಯ ಗೆಳೆತನ ಇತ್ತು. ಆದರೆ, ಅದು ಈಗ ಬ್ರೇಕ್ ಆಗುವ ಹಂತದಲ್ಲಿ ಇದೆ. ರಘು ಅವರು ಗಿಲ್ಲಿ ಬಗ್ಗೆ ಸಾಕಷ್ಟು ದ್ವೇಷ ಬೆಳೆಸಿಕೊಂಡಿದ್ದಾರೆ. ಈಗ ರಘು ಅವರು ಗಿಲ್ಲಿ ಜೊತೆ ನಡೆದುಕೊಂಡ ರೀತಿಯನ್ನು ಅನೇಕರು ಪ್ರಶ್ನೆ ಮಾಡಿದ್ದಾರೆ. ರಘು ಇಷ್ಟು ದಿನ ನಡೆದುಕೊಂಡ ರೀತಿ ಫೇಕ್ ಆಗಿತ್ತಾ ಎಂಬ ಚರ್ಚೆ ಹುಟ್ಟುವಂತೆ ಆಗಿದೆ.

ಬಿಗ್ ಬಾಸ್ ಮನೆಯಲ್ಲಿನ ಒಂದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ರಘು ಅವರು ಪ್ಲೇಟ್​ನಲ್ಲಿ ಚಪಾತಿ ತಿನ್ನುತ್ತಾ ಇರುತ್ತಾರೆ. ಅಲ್ಲಿಗೆ ತೆರಳುವ ಗಿಲ್ಲಿ ನಟ ತಮಗೆ ಒಂದು ಪೀಸ್ ಕೊಡುವಂತೆ ಕೇಳುತ್ತಾರೆ. ಹಲವು ನಿಮಿಷಗಳ ಕಾಲ ಇವರ ಮಧ್ಯೆ ಚರ್ಚೆ ಆಗುತ್ತದೆ. ಏನೇ ಮಾಡಿದರೂ ಇದಕ್ಕೆ ರಘು ಒಪ್ಪುವುದೇ ಇಲ್ಲ. ಆ ಬಳಿಕ ಬೇಸರದಲ್ಲಿ ಗಿಲ್ಲಿ ಅಲ್ಲಿಂದ ತೆರಳುತ್ತಾರೆ.

ಆ ಬಳಿಕ ರಘು ಬಳಿ ಬರೋ ರಾಶಿಕಾ ಅವರು, ಯಾವುದೇ ಒಪ್ಪಿಗೆ ಇಲ್ಲದೆ ರಘು ಪ್ಲೇಟ್​ನಿಂದ ಆ ತಿಂಡಿಯನ್ನು ಸವಿಯುತ್ತಾರೆ. ಗಿಲ್ಲಿ ಹಾಗೂ ರಘು ಒಳ್ಳೆಯ ಗೆಳೆಯರಾಗಿದ್ದರು. ಗಿಲ್ಲಿಯನ್ನು ರಘು ಅಷ್ಟು ಕೀಳಾಗಿ ಕಂಡಿದ್ದು ಏಕೆ ಎಂಬ ಚರ್ಚೆ ಆಗುತ್ತಿದೆ.

ಗಿಲ್ಲಿ ನನ್ನ ಬಳಿ ಅತಿಯಾಗಿ ನಡೆದುಕೊಂಡ ಎಂದು ರಘು ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಗಿಲ್ಲಿ ತಮಗೆ ಅನಾರೋಗ್ಯ ಆಗಿದೆ ಎಂದು ಹೇಳಿದರೂ ಕೇಳದೆ ಅವರನ್ನು ತೆಗೆದು ಸ್ವಮಿಂಗ್ ಪೂಲ್​ಗೆ ತಳ್ಳಿದ್ದರು ರಘು.ಇದು ಎಷ್ಟು ಸರಿ ಎಂಬ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: ಗಿಲ್ಲಿ ಕಂಡರೆ ರಘುಗೆ ಏಕೆ ಅಷ್ಟು ದ್ವೇಷ? ಅವರಿಂದಲೇ ಸಿಕ್ಕಿತು ವಿವರಣೆ

ಇನ್ನು, ಗಿಲ್ಲಿಗೆ ಕಳಪೆ ಕೊಟ್ಟ ವಿಷಯ ಕೂಡ ಚರ್ಚೆ ಆಗುತ್ತಿದೆ. ಇಡೀ ವಾರ ಮನೆಯಲ್ಲಿ ಎಲ್ಲರನ್ನೂ ನಗಿಸುವ ಕೆಲಸವನ್ನು ಗಿಲ್ಲಿ ಮಾಡಿದ್ದಾರೆ. ಆದರೆ, ವಾರಾಂತ್ಯದಲ್ಲಿ ಅವರಿಗೆ ಸಿಲ್ಲಿ ಕಾರಣಗಳನ್ನು ನೀಡಿ ಕಳಪೆ ಕೊಟ್ಟಿದ್ದಾರೆ. ಈ ರೀತಿ ಮಾಡಿದ್ದು ತಪ್ಪು ಎಂಬ ಮಾತು ಕೇಳಿ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.