‘ಸುದೀಪ್ ಸರ್ ಅದ್ನ ಹೇಳ್ತಿರ್ತಾನೆ’ ಎಂಬ ಹೇಳಿಕೆ; ವಿಡಿಯೋ ಹಾಕಿ ರಜತ್ಗೆ ಪ್ರಶ್ನೆ ಮಾಡಿದ ಕಿಚ್ಚ
ರಜತ್ ಅವರಿಗೆ ಸುದೀಪ್ ಬಗ್ಗೆ ಅಪಾರ ಗೌರವ ಇದೆ. ಅವರು ಕಳೆದ ಸೀಸನ್ ಇಂದ ಸುದೀಪ್ ಅವರನ್ನು ಹತ್ತಿರದಿಂದ ನೋಡುತ್ತಾ ಬಂದಿದ್ದಾರೆ. ಸುದೀಪ್ ಅವರು ಕಳೆದ ಸೀಸನ್ ಅಲ್ಲಿ ರಜತ್ ಅವರಿಗೆ ಜಾಕೆಟ್ ನೀಡಿದ್ದನ್ನು ನೀವು ಕಾಣಬಹುದು. ಆದರೆ, ಸುದೀಪ್ ಅವರಿಗೆ ಅವರು ಏಕವಚನದಲ್ಲಿ ಮಾತನಾಡಿದರು ಎಂಬ ವಿಡಿಯೋ ವೈರಲ್ ಆಗಿತ್ತು. ಇದನ್ನು ಸುದೀಪ್ ಅವರು ತೋರಿಸಿದರು.

ಕಿಚ್ಚ ಸುದೀಪ್ ಅವರನ್ನು ಕಂಡರೆ ಅವರ ಅಭಿಮಾನಿಗಳಿಗೆ ಅಪಾರ ಗೌರವ. ಅದರಲ್ಲೂ ಬಿಗ್ ಬಾಸ್ ಸ್ಪರ್ಧಿಗಳಿಗೆ ಅಪಾರ ಗೌರವ ಇರುತ್ತದೆ. ಪ್ರತಿ ಎಪಿಸೋಡ್ನಲ್ಲೂ ಎಲ್ಲಾ ಸ್ಪರ್ಧಿಗಳು ಕಿಚ್ಚ ಸುದೀಪ್ (Sudeep) ಅವರಿಗೆ ಸಾಕಷ್ಟು ಗೌರವ ತೋರಿಸೋದನ್ನು ಕಾಣಬಹುದು. ಈಗ ಕಿಚ್ಚ ಸುದೀಪ್ ಬಗ್ಗೆ ರಜತ್ ಅವರು ಮಾತನಾಡಿದ್ದಾರೆ ಎಂಬ ವಿಡಿಯೋ ಒಂದು ವೈರಲ್ ಆಗಿತ್ತು. ಈ ವಿಡಿಯೋ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗಿತ್ತು. ಇದನ್ನು ಸುದೀಪ್ ಅವರು ರಜತ್ ಅವರ ಗಮನಕ್ಕೆ ತಂದರು. ಆ ಬಳಿಕ ರಜತ್ ಅವರು ಅದಕ್ಕೆ ಸ್ಪಷ್ಟನೆ ಕೊಟ್ಟರು. ಆ ಬಗ್ಗೆ ಇಲ್ಲಿದೆ ವಿವರ.
ರಜತ್ ಅವರಿಗೆ ಸುದೀಪ್ ಬಗ್ಗೆ ಅಪಾರ ಗೌರವ ಇದೆ. ರಜತ್ ಕಳೆದ ಸೀಸನ್ ಇಂದ ಸುದೀಪ್ ಅವರನ್ನು ಹತ್ತಿರದಿಂದ ಕಂಡಿದ್ದಾರೆ. ಸುದೀಪ್ ಅವರು ಕಳೆದ ಸೀಸನ್ ಅಲ್ಲಿ ರಜತ್ ಅವರಿಗೆ ಜಾಕೆಟ್ ನೀಡಿದ್ದನ್ನು ನೀವು ಕಾಣಬಹುದು. ಆದರೆ, ಸುದೀಪ್ ಅವರಿಗೆ ಅವರು ಏಕವಚನದಲ್ಲಿ ಮಾತನಾಡಿದರು ಎಂಬ ವಿಡಿಯೋ ವೈರಲ್ ಆಗಿತ್ತು. ಇದನ್ನು ಸುದೀಪ್ ಅವರು ತೋರಿಸಿದರು.
‘ಸುದೀಪ್ ಸರ್ ಅದನ್ನೇ ಹೇಳ್ತಾ ಇರ್ತಾನೆ’ ಎಂದು ಕಾವ್ಯಾ ಬಳಿ ಮಾತನಾಡುವಾಗ ಹೇಳಿದ್ದರು. ಸುದೀಪ್ಗೆ ರಜತ್ ಅವರು ಏಕವಚನದಲ್ಲಿ ಮಾತನಾಡಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿದಾಡಿತ್ತು. ಇದಕ್ಕೆ ರಜತ್ ಸ್ಪಷ್ಟನೆ ನೀಡಿದರು. ‘ಇರ್ತಾನೆ ಎಂದು ಹೇಳಿಲ್ಲ, ಸುದೀಪ್ ಸರ್ ಅದನ್ನೇ ಹೇಳ್ತಾರ್ ತಾನೆ ಎಂದು ನಾನು ಹೇಳಿದ್ದು’ ಎಂದರು.
ಇದನ್ನೂ ಓದಿ: ಗಿಲ್ಲಿ ತಿಳಿದೂ ಮಾಡಿದ ತಪ್ಪಿಗೆ ಸಿಟ್ಟಿನಿಂದ ಕ್ಯಾಪ್ಟನ್ ರೂಂಗೆ ಬೀಗ ಹಾಕಿಸಿದ ಸುದೀಪ್
ಎಷ್ಟೇ ಹೊತ್ತಾದರೂ ರಜತ್ ಅವರು ಇದರಿಂದ ಹೊರಕ್ಕೆ ಬರಲೇ ಇಲ್ಲ. ನಂತರ ಸುದೀಪ್ ಈ ಬಗ್ಗೆ ಮತ್ತೆ ಪ್ರಶ್ನೆ ಮಾಡಿದರು. ಆ ಬಳಿಕ ಸುದೀಪ್ ಅವರು ‘ಅದರಿಂದ ಹೊರಕ್ಕೆ ಬನ್ನಿ’ ಎಂದು ರಜತ್ಗೆ ಹೇಳಿದರು. ‘ಹತ್ತಿರದಿಂದ ನಿಮ್ಮ ಅಬ್ಸರ್ವ್ ಮಾಡಿ ನೋಡಿದ್ದೇನೆ. ನಾನು ನಿಮಗೆ ಸಾರಿ ಕೇಳಲ್ಲ. ಏಕೆಂದರೆ ನಾನು ಆ ರೀತಿ ಹೇಳಿಲ್ಲ. ಐ ಲವ್ ಯೂ ಫ್ರಮ್ ಬಾಟಮ್ ಆಫ್ ಮೈ ಹಾರ್ಟ್’ ಎಂದು ರಜತ್ ಸ್ಪಷ್ಟನೆ ಕೊಟ್ಟರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



