
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಈ ವಾರ ಕಿಚ್ಚ ಸುದೀಪ್ ಇರಲಿಲ್ಲ. ಈ ಬೇಸರದ ಮಧ್ಯೆಯೇ ಶನಿವಾರದ ಎಪಿಸೋಡ್ನಲ್ಲಿ ಒಬ್ಬರನ್ನು ಹೊರಕ್ಕೆ ಕಳುಹಿಸಲಾಗಿದೆ. ಈ ವಾರ ಡಬಲ್ ಎಲಿಮಿನೇಷನ್ ನಡೆಯಲಿದೆ ಎಂದು ಬಿಗ್ ಬಾಸ್ ಮೊದಲೇ ಘೋಷಣೆ ಮಾಡಿದ್ದರು. ಎಲ್ಲರೂ ಭಾನುವಾರ ಈ ಎಲಿಮಿನೇಷನ್ ನಡೆಯುತ್ತದೆ ಎಂದುಕೊಂಡಿದ್ದರು. ಆದರೆ ಶನಿವಾರವೇ ಒಂದು ಎಲಿಮಿನೇಷನ್ ನಡೆದಿದೆ. ಸೂರಜ್ ಅವರು ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಈ ವಿಷಯ ಮನೆಯವರಿಗೆ ಶಾಕಿಂಗ್ ಎನಿಸಿದೆ.
ಬಿಗ್ ಬಾಸ್ನಲ್ಲಿ ಈ ವಾರ ಕಾವ್ಯಾ ಹೊರತುಪಡಿಸಿ ಉಳಿದ 10 ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಈ ಪೈಕಿ ಹಂತ ಹಂತವಾಗಿ ಒಬ್ಬೊಬ್ಬರನ್ನು ಸೇವ್ ಮಾಡುತ್ತಾ ಬರಲಾಯಿತು. ಮೊದಲು ಭಾಗ್ಯಲಕ್ಷ್ಮೀ ತಂಡದವರು ಬಂದು ಗಿಲ್ಲಿಯನ್ನು ಸೇವ್ ಮಾಡಿದರು. ಆ ಬಳಿಕ ಪ್ರೇಮ್ ಅವರು ಬಂದು, ಅಶ್ವಿನಿ ಅವರನ್ನು ಸೇವ್ ಮಾಡಿದರು. ನಂತರ ಚಟುವಟಿಕೆ ನೀಡಲಾಗಿತ್ತು. ಇದರಲ್ಲಿ ರಘು ಸೇವ್ ಆದರು.
ಇನ್ನು, ಬೆಳಿಗ್ಗೆ ಏಳ್ಳುತ್ತಿದ್ದಂತೆ ಮನೆಯವರಿಗೆ ಒಂದು ಶಾಕ್ ಇತ್ತು. ಎಲ್ಲರಿಗೂ ಗಾರ್ಡನ್ ಏರಿಯಾಗೆ ಬರುವಂತೆ ಬಿಗ್ ಬಾಸ್ ಸೂಚನೆ ನೀಡಿದರು. ಅದರಂತೆಯೇ ಎಲ್ಲರೂ ಬಂದರು. ಈ ವೇಳೆ ಮುಖ್ಯದ್ವಾರದ ಬಳಿ ಒಂದು ತಿರುಗುವ ವಸ್ತುವನ್ನು ಇಡಲಾಗಿತ್ತು. ಇದರ ಮೇಲೆ ನಾಲ್ಕು ಜನರನ್ನು ನಿಲ್ಲಿಸಲಾಯಿತು. ಈ ವೇಳೆ ಕಡಿಮೆ ಮತ ಪಡೆದ ಸೂರಜ್ ಅವರನ್ನು ಹೊರಕ್ಕೆ ಕಳುಹಿಸಲಾಗಿದೆ. ಇದು ಶಾಕಿಂಗ್ ಎನಿಸಿದೆ.
ಇದನ್ನೂ ಓದಿ: ಬಿಗ್ ಬಾಸ್ ಆದೇಶಕ್ಕೆ ನಲುಗಿ ಹೋದ ಗಿಲ್ಲಿ ನಟ; ಇದಕ್ಕೆ ಕಾರಣ ರಘು-ಸೂರಜ್?
ಸೂರಜ್ ಅವರು ಇತ್ತೀಚೆಗೆ ಡಲ್ ಆಗಿದ್ದರು. ಅವರಿಂದ ಎಲ್ಲರೂ ಹೆಚ್ಚಿನದ್ದನ್ನು ನಿರೀಕ್ಷೆ ಮಾಡಿದ್ದರು. ಆದರೆ, ಇದರಲ್ಲಿ ಅವರು ಯಶಸ್ಸು ಕಂಡಿಲ್ಲ. ಅಲ್ಲದೆ, ರಾಶಿಕಾ ಹಾಗೂ ಅವರ ನಡುವಿನ ಗೆಳೆತನ ಮುಳುವಾಗಬಹುದು ಎಂದು ಸುದೀಪ್ ಮೊದಲೇ ಎಚ್ಚರಿಕೆ ನೀಡಿದ್ದರೂ ಅದನ್ನು ಅವರು ನಿರ್ಲಕ್ಷಿಸಿದ್ದರು. ಈಗ ಅವರು ದೊಡ್ಡ ದಂಡ ತೆತ್ತಬೇಕಾದ ಪರಿಸ್ಥಿತಿ ಬಂದಿದೆ. ಭಾನುವಾರದ ಎಪಿಸೋಡ್ನಲ್ಲಿ ಇನ್ನೂ ಒಬ್ಬರು ಎಲಿಮಿನೇಟ್ ಆಗುತ್ತಿದ್ದು, ಅದು ಸ್ಪಂದನಾ ಎಂದು ಹೇಳಲಾಗುತ್ತಾ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.