ಸುದೀಪ್ ಹಾಗೂ ಶಿವಣ್ಣ ಭೇಟಿ ಮಾಡಿ ಆಶೀರ್ವಾದ ಪಡೆದ ಗಿಲ್ಲಿ; ನಟರು ಹೇಳಿದ್ದೇನು?

ಬಿಗ್ ಬಾಸ್ ಕನ್ನಡ 12 ವಿನ್ನರ್ ಗಿಲ್ಲಿ ನಟ, ತಮ್ಮ ಗೆಲುವಿನ ನಂತರ ಸೂಪರ್‌ಸ್ಟಾರ್ ಶಿವರಾಜ್‌ಕುಮಾರ್ ಹಾಗೂ ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ಇಬ್ಬರೂ ಹಿರಿಯ ನಟರು ಗಿಲ್ಲಿ ಬದುಕಿಗೆ ದಾರಿ ದೀಪ. ಇಬ್ಬರೂ ತಾರೆಯರ ಶುಭ ಹಾರೈಕೆಯಿಂದ ಗಿಲ್ಲಿ ಖುಷಿಪಟ್ಟಿದ್ದಾರೆ.

ಸುದೀಪ್ ಹಾಗೂ ಶಿವಣ್ಣ ಭೇಟಿ ಮಾಡಿ ಆಶೀರ್ವಾದ ಪಡೆದ ಗಿಲ್ಲಿ; ನಟರು ಹೇಳಿದ್ದೇನು?
ಗಿಲ್ಲಿ ಹಾಗೂ ಶಿವಣ್ಣ

Updated on: Jan 21, 2026 | 6:54 AM

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ವಿನ್ನರ್ ಆಗಿ ಹೊರ ಹೊಮ್ಮಿರೋ ಗಿಲ್ಲಿ ನಟ ಅವರು ಇತ್ತೀಚೆಗೆ ತಮ್ಮ ಹುಟ್ಟೂರಲ್ಲಿ ದೊಡ್ಡದಾದ ರ್ಯಾಲಿ ಮಾಡಿದ್ದರು. ಆ ಬಳಿಕ ಅವರು ಮರಳಿ ಬೆಂಗಳೂರಿಗೆ ಬಂದಿದ್ದರು. ಈಗ ಅವರು ಶಿವರಾಜ್​​​ಕುಮಾರ್ ಹಾಗೂ ಸುದೀಪ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಇಬ್ಬರೂ ಗಿಲ್ಲಿ ಬದುಕಿಗೆ ದಾರಿ ದೀಪ ಆದವರು. ಹೀಗಾಗಿ, ಅವರನ್ನು ಗಿಲ್ಲಿ ಭೇಟಿ ಮಾಡಿದ್ದಾರೆ.

ಗಿಲ್ಲಿ ನಟ ಅವರಿಗೆ ಶಿವರಾಜ್​​ಕುಮಾರ್ ಮೊದಲೇ ಪರಿಚಯ. ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದ್ದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ವೇದಿಕೆ ಮೇಲೆ ಶಿವರಾಜ್​​ಕುಮಾರ್ ಜಡ್ಜ್ ಸ್ಥಾನದಲ್ಲಿ ಇದ್ದರು. ಸ್ಪರ್ಧಿಯಾಗಿ ತೆರಳಿದ್ದ ಗಿಲ್ಲಿ ಅವರು ಎಲ್ಲರನ್ನೂ ರಂಜಿಸಿದ್ದರು. ಆಗಲೇ ಶಿವರಾಜ್​​ಕುಮಾರ್​​ಗೆ ಗಿಲ್ಲಿ ಇಷ್ಟ ಆಗಿದ್ದರು. ಗಿಲ್ಲಿ ಬಿಗ್ ಬಾಸ್ ಮನೆಯಲ್ಲಿರುವಾಗ ಶಿವಣ್ಣ ಶುಭ ಹಾರೈಸಿದ್ದರು. ಗಿಲ್ಲಿನೇ ಗೆಲ್ಲೋದು ಎಂದು ಹೇಳಿದ್ದರು. ಹೊರ ಬಂದ ಬಳಿಕ ಗಿಲ್ಲಿಗೆ ಈ ವಿಷಯ ಗೊತ್ತಾಗಿದೆ. ಹೀಗಾಗಿ, ತಕ್ಷಣವೇ ಶಿವಣ್ಣ ಹಾಗೂ ಗೀತಕ್ಕನ ಭೇಟಿ ಮಾಡಿದ್ದಾರೆ.

ಸುದೀಪ್ ಅವರನ್ನೂ ಗಿಲ್ಲಿ ಭೇಟಿ ಮಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿರೋವಾಗ ಎಲ್ಲ ವಿಷಯಗಳನ್ನು ಸುದೀಪ್ ಮನಬಿಚ್ಚಿ ಮಾತನಾಡಲು ಸಾಧ್ಯವಿಲ್ಲ. ಈ ಕಾರಣದಿಂದ ಬಿಗ್ ಬಾಸ್​​ನಿಂದ ಹೊರ ಬಂದ ಬಳಿಕ ಗಿಲ್ಲಿ ಹೋಗಿ ಸುದೀಪ್​​ನ ಭೇಟಿ ಮಾಡಿದ್ದಾರೆ. ಗಿಲ್ಲಿ ಅಭಿಮಾನಿಗಳು ಸುದೀಪ್ ಅವರ ಬಗ್ಗೆ ಈ ಮೊದಲು ಅಸಮಾಧಾನ ಹೊರಹಾಕಿದ್ದು ಇದೆ. ಇದಕ್ಕೆ ಕಾರಣ ಆಗಿದ್ದು ಸೀಸನ್ ಚಪ್ಪಾಳೆ. ಈ ವಿಷಯದಲ್ಲಿ ಗಿಲ್ಲಿ ಅವರು ಅಭಿಮಾನಿಗಳ ಪರವಾಗಿ ಸುದೀಪ್ ಬಳಿ ಕ್ಷಮೆ ಕೇಳಿರಬಹುದು ಎಂದು ಊಹಿಸಲಾಗುತ್ತಿದೆ.

ಇದನ್ನೂ ಓದಿ: ಊರಿಗೆ ಬಂದರೂ ಮನೆಗೆ ಹೋಗದೇ ವಾಪಸ್ ಬೆಂಗಳೂರಿಗೆ ತೆರಳಿದ ಗಿಲ್ಲಿ ನಟ

ಸುದೀಪ್ ಹಾಗೂ ಶಿವರಾಜ್​​ಕುಮಾರ್ ಅವರು ಗಿಲ್ಲಿಗೆ ಒಳ್ಳೆಯದಾಗಲಿ ಎಂದು ಮನಸ್ಫೂರ್ತಿಯಾಗಿ ಹಾರೈಸಿದ್ದಾರೆ. ಈ ಹಾರೈಕೆಯಿಂದ ಅವರು ತುಂಬಾನೇ ಖುಷಿಪಟ್ಟಿದ್ದಾರೆ. ಇನ್ನಷ್ಟು ಸಿನಿಮಾ ಆಫರ್​​​ಗಳು ಅವರನ್ನು ಹುಡುಕಿ ಬರೋ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.