ಬಿಗ್​ಬಾಸ್ ವೀಕ್ಷಕರೇ ಈಗ ಬಾಸ್: ಸಮರ್ಥರು ಯಾರೆಂದು ನಿರ್ಧರಿಸಬಹುದು ಜನ

|

Updated on: Oct 13, 2023 | 9:56 PM

Bigg Boss 10: ಬಿಗ್‌ಬಾಸ್‌ ಸೀಸನ್‌10 ನಲ್ಲಿ ಪ್ರೇಕ್ಷರ ಭಾಗವಹಿಸುವಿಕೆಗೂ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಬರೀ ಭಾಗವಹಿಸುವುದಷ್ಟೆ ಅಲ್ಲ, ಬಿಗ್‌ಬಾಸ್‌ ತೆಗೆದುಕೊಳ್ಳುವ ಹಲವು ಬಹುಮುಖ್ಯ ನಿರ್ಧಾರಗಳನ್ನು ಪ್ರಭಾವಿಸುವ, ನಿರ್ಣಯಿಸುವ ಪವರ್‍‌ಫುಲ್‌ ಅಧಿಕಾರವೂ ಪ್ರೇಕ್ಷಕರಿಗೆ ನೀಡಿದೆ.

ಬಿಗ್​ಬಾಸ್ ವೀಕ್ಷಕರೇ ಈಗ ಬಾಸ್: ಸಮರ್ಥರು ಯಾರೆಂದು ನಿರ್ಧರಿಸಬಹುದು ಜನ
ಬಿಗ್​ಬಾಸ್
Follow us on

ಬಿಗ್​ಬಾಸ್ (Bigg Boss) ಆರಂಭವಾಗಿ ವಾರ ವಾಗಲು ಇನ್ನೆರಡು ದಿನಗಳಷ್ಟೆ ಬಾಕಿ ಇದೆ. ಪ್ರತಿ ಸೀಸನ್​ನಲ್ಲೂ ಭಿನ್ನತೆಯನ್ನು ತರುವ ಪ್ರಯತ್ನವನ್ನು ಬಿಗ್​ಬಾಸ್ ಆಯೋಜಕರು ಮಾಡುತ್ತಲೇ ಬಂದಿದ್ದಾರೆ. ಈ ಬಾರಿ ಶೋನ ಆರಂಭದಲ್ಲಿಯೇ ಜನರಿಗೆ, ಸ್ಪರ್ಧಿಗಳನ್ನು ಮನೆಯ ಒಳಗೆ ಕಳಿಸುವ ಅಥವಾ ಹೊರಗೆ ಕಳಿಸುವ ಅವಕಾಶ ನೀಡಲಾಗಿತ್ತು. ಅಂತೆಯೇ ಇಬ್ಬರು ಸ್ಪರ್ಧಿಗಳನ್ನು ಹೊರಗೆ ಕಳಿಸಿ, 11 ಜನರನ್ನು ಒಳಗೆ ಕಳಿಸಿ, ಆರು ಜನರನ್ನು ಅಸಮರ್ಥರೆಂಬ ತೀರ್ಪು ನೀಡಿದ್ದರು. ಈಗ ಬಿಗ್​ಬಾಸ್ ಮತ್ತೊಮ್ಮೆ ಜನರಿಗೆ ಬಾಸ್ ಅವಕಾಶ ನೀಡಿದ್ದಾರೆ.

ಬಿಗ್‌ಬಾಸ್‌ ಸೀಸನ್‌10 ನಲ್ಲಿ ಪ್ರೇಕ್ಷರ ಭಾಗವಹಿಸುವಿಕೆಗೂ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಬರೀ ಭಾಗವಹಿಸುವುದಷ್ಟೆ ಅಲ್ಲ, ಬಿಗ್‌ಬಾಸ್‌ ತೆಗೆದುಕೊಳ್ಳುವ ಹಲವು ಬಹುಮುಖ್ಯ ನಿರ್ಧಾರಗಳನ್ನು ಪ್ರಭಾವಿಸುವ, ನಿರ್ಣಯಿಸುವ ಪವರ್‍‌ಫುಲ್‌ ಅಧಿಕಾರವೂ ಪ್ರೇಕ್ಷಕರಿಗೆ ನೀಡಿದೆ.

ಜಿಯೋ ಸಿನಿಮಾದಲ್ಲಿ ಬಿಗ್‌ಬಾಸ್‌ ಕನ್ನಡ 24ಗಂಟೆ ಉಚಿತ ಪ್ರಸಾರ ಆಗುತ್ತಿದ್ದು ‘ನೀವೀಗ ಬಾಸ್‌’ ಹೆಸರಿನ ಸೆಗ್ಮೆಂಟ್‌ ಪರಿಚಯಿಸಿದೆ. ಪ್ರೇಕ್ಷಕರಿಗೆ ಪವರ್‍‌ಪುಲ್‌ ಅಧಿಕಾರವನ್ನು ನೀಡುತ್ತಿದೆ. ಜಿಯೋ ಸಿನಿಮಾಸ್​ನಲ್ಲಿ ಕೇಳಲಾಗುವ ಪ್ರಶ್ನೆಗೆ ಜನರು ವೋಟ್‌ ಮಾಡುವ ಮೂಲಕ ಮನೆಯೊಳಗಿನ ಹಲವು ಮುಖ್ಯ ಸಂಗತಿಗಳನ್ನು ನಿರ್ಣಯಿಸಬಹುದಾಗಿದೆ. ಈಗ ‘ನೀವೀಗ ಬಾಸ್‌’ ಸೆಗ್ಮೆಂಟ್‌ನಲ್ಲಿ ಪ್ರಶ್ನೆಯೊಂದನ್ನು ಜನಮತಕ್ಕಾಗಿ ಇಡಲಾಗಿದೆ. ಇದರ ಮೂಲಕ ಬಿಗ್‌ಬಾಸ್‌ ಮನೆಯೊಳಗಿನ ‘ಅಸಮರ್ಥ’ರ ಭವಿಷ್ಯ ನಿರ್ಧರಿಸುವ ಅಧಿಕಾರವನ್ನು ವೀಕ್ಷಕರಿಗೆ ನೀಡಲಾಗಿದೆ.

ಇದನ್ನೂ ಓದಿ:ಲಾರ್ಡ್ ಆಗಿ ಬಿಗ್​ಬಾಸ್ ಮನೆಗೆ ಹೋಗಿಬಂದ ಅನುಭವ ಹಂಚಿಕೊಂಡ ಪ್ರಥಮ್

ಮನೆಯೊಳಗೆ ಎರಡು ಗುಂಪುಗಳಾಗಿರುವುದು ಗೊತ್ತೇ ಇದೆ. ಜನರ ವೋಟ್‌ನಿಂದ ನೇರವಾಗಿ ಮನೆಯೊಳಗೆ ಪ್ರವೇಶಿಸಿದ ಹತ್ತು ‘ಸಮರ್ಥ’ ಸ್ಪರ್ಧಿಗಳ ಗುಂಪು ಒಂದೆಡೆಯಿದೆ. ಜನರು ಹೋಲ್ಡ್‌ನಲ್ಲಿ ಇಟ್ಟಿರುವ ಏಳು ‘ಅಸಮರ್ಥ’ ಸ್ಪರ್ಧಿಗಳ ಗುಂಪು ಇನ್ನೊಂದೆಡೆ ಇದೆ. ಈ ಏಳು ಸ್ಪರ್ಧಿಗಳಿಗೆ ಮನೆಯೊಳಗಿನ ಕೆಲವು ಸೌಲಭ್ಯಗಳನ್ನು ಮೊಟಕುಗೊಳಿಸಲಾಗಿದೆ. ಈಗ ಅವರಲ್ಲಿ ಸಮರ್ಥರು ಯಾರು ಎಂಬುದನ್ನು ತೀರ್ಮಾನಿಸುವ ಸಂದರ್ಭ ಬಂದಿದೆ. ಅದರ ಅಧಿಕಾರವನ್ನು ಜನರಿಗೆ ನೀಡಲಾಗಿದೆ.

ಪ್ರಶ್ನೆ ಹೀಗಿದೆ, ಈ ಏಳು ಮಂದಿ ಅಸಮರ್ಥರಲ್ಲಿ ಯಾರೆಲ್ಲ ಸಮರ್ಥರಾಗಲು ಅರ್ಹರು?
ಈ ಪ್ರಶ್ನೆಯನ್ನು ‘ನೀವೀಗ ಬಾಸ್‌’ ಸೆಗ್ಮೆಂಟ್‌ನಲ್ಲಿ ಜನಮತಕ್ಕಾಗಿ ಇಡಲಾಗಿದೆ. ಇಂದು (ಅ.13)ರಾತ್ರಿ ಹನ್ನೊಂದು ಗಂಟೆಯವರೆಗೆ ಪ್ರೇಕ್ಷಕರು ತಮ್ಮ ನೆಚ್ಚಿನ ಸ್ಪರ್ಧಿಗಳಿಗೆ ಮತ ಹಾಕಬಹುದು. ಅತಿಹೆಚ್ಚು ಮತ ಪಡೆದ ಸ್ಪರ್ಧಿ ಎಲ್ಲರಿಗಿಂತ ಮೊದಲು ‘ಸಮರ್ಥ’ರ ಗುಂಪಿಗೆ ಸೇರಿಕೊಳ್ಳುತ್ತಾರೆ.

ಬಿಗ್​ಬಾಸ್ ಆರಂಭವಾದ ದಿನ ಡ್ರೋನ್ ಪ್ರತಾಪ್, ಬುಲೆಟ್ ರಕ್ಷಕ್, ಸಂಗೀತ ಶೃಂಗೇರಿ, ತನಿಷಾ, ಕಾರ್ತಿಕ್, ಹಳ್ಳಿಕಾರ್ ಸಂತೋಶ್ ಅವರು ಕಡಿಮೆ ಮತ ತೆಗೆದುಕೊಂಡು ಅಸಮರ್ಥರು ಎಂದು ಗುರುತಿಸಿಕೊಂಡಿದ್ದಾರೆ. ಅದಾದ ಬಳಿಕ 10 ಮಂದಿ ಸಮರ್ಥರು ಸೇರಿ ಸ್ನೇಕ್ ಶ್ಯಾಮ್ ಅವರನ್ನು ಅಸಮರ್ಥರು ಎಂದು ನಿರ್ಣಯಿಸಿ ಅವರನ್ನು ಅಸಮರ್ಥರ ತಂಡಕ್ಕೆ ಸೇರಿಸಿದ್ದಾರೆ. ಪ್ರಸ್ತುತ ಏಳು ಮಂದಿ ಅಸಮರ್ಥರು ಇದ್ದು ಜನರು ಮತ ಹಾಕಿ ಒಬ್ಬರನ್ನು ಸಮರ್ಥರ ಸ್ಥಾನಕ್ಕೆ ಸೇರಿಸಬಹುದಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ