ವಾಶ್ರೂಂನಲ್ಲಿ ಕುಳಿತು ಅತ್ತ ಪ್ರತಾಪ್; ಇದನ್ನು ನೋಡಿ ಕಣ್ಣೀರು ಹಾಕಿದ ಸಂಗೀತಾ, ನಮ್ರತಾ
ವಿನಯ್ ಹಾಗೂ ಪ್ರತಾಪ್ ಮಧ್ಯೆ ಕಿತ್ತಾಟ ನಡೆಯಿತು. ಈ ವಿಚಾರ ಹಲವು ಬಾರಿ ಚರ್ಚೆಗೆ ಬಂತು. ಇದರಿಂದ ಪ್ರತಾಪ್ ಬೇಸರಗೊಂಡರು. ವರ್ತೂರ್ ಸಂತೋಷ್ ಹಾಗೂ ತುಕಾಲಿ ಸಂತೋಷ್ ಪದೇ ಪದೇ ಪ್ರತಾಪ್ ಅವರನ್ನು ಟಾರ್ಗೆಟ್ ಮಾಡಿದರು. ಇದರಿಂದ ಅವರಿಗೆ ಬೇಸರ ಆಯಿತು.
ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ (Drone Prathap) ಟಾರ್ಗೆಟ್ ಆಗುತ್ತಿದ್ದಾರೆ. ಡ್ರೋನ್ ವಿಚಾರ ಇಟ್ಟುಕೊಂಡು ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ‘ಹೊರಗಿನ ವಿಷಯವನ್ನು ದೊಡ್ಮನೆ ಒಳಗೆ ತರಬೇಡಿ’ ಎಂದು ಪ್ರತಾಪ್ ಅವರು ಅನೇಕ ಬಾರಿ ಹೇಳಿಕೊಂಡರು. ಆದರೆ, ಯಾರೂ ಇದನ್ನು ಕೇಳಿಲ್ಲ. ಅವರನ್ನು ಪದೇ ಪದೇ ಟಾರ್ಗೆಟ್ ಮಾಡಲಾಗುತ್ತಿದೆ. ಇದು ಅವರಿಗೆ ಬೇಸರ ತಂದಿದೆ. ವಾಶ್ರೂಂ ಒಳಗೆ ಕುಳಿತು ಕಣ್ಣೀರು ಹಾಕಿದ್ದಾರೆ ಪ್ರತಾಪ್. ತುಕಾಲಿ ಸಂತೋಷ್ ಅವರು ಈ ವಿಚಾರವನ್ನು ಇಟ್ಟುಕೊಂಡು ಪದೇ ಪದೇ ಅಣಕಿಸುತ್ತಿದ್ದಾರೆ. ಇದು ಪ್ರತಾಪ್ ನೋವು ಹೆಚ್ಚಲು ಕಾರಣ.
ವಿನಯ್ ಹಾಗೂ ಪ್ರತಾಪ್ ಮಧ್ಯೆ ಕಿತ್ತಾಟ ನಡೆಯಿತು. ಈ ವಿಚಾರ ಹಲವು ಬಾರಿ ಚರ್ಚೆಗೆ ಬಂತು. ಇದರಿಂದ ಪ್ರತಾಪ್ ಬೇಸರಗೊಂಡರು. ವರ್ತೂರ್ ಸಂತೋಷ್ ಹಾಗೂ ತುಕಾಲಿ ಸಂತೋಷ್ ಪದೇ ಪದೇ ಪ್ರತಾಪ್ ಅವರನ್ನು ಟಾರ್ಗೆಟ್ ಮಾಡಿದರು. ಇದರಿಂದ ಅವರಿಗೆ ಬೇಸರ ಆಯಿತು. ಈ ವಿಚಾರವನ್ನು ಯಾರ ಜೊತೆಯೂ ಹೇಳದೇ ವಾಶ್ರೂಂ ಏರಿಯಾದಲ್ಲಿ ಒಬ್ಬನೇ ಕುಳಿತಿದ್ದರು.
ಸ್ನೇಹಿತ್, ಪ್ರತಾಪ್ ಮೊದಲಾದವರು ಅವರ ಬಳಿ ಹೋಗಿ ಏನಾಯಿತು ಎಂದು ಕೇಳಿದರು. ದುಃಖ ತಡೆಯಲಾರದೆ ವಾಶ್ರೂಂ ಒಳಗೆ ತೆರಳಿ ಕಣ್ಣೀರು ಹಾಕಿದರು ಪ್ರತಾಪ್. ಅಲ್ಲಿಗೆ ಬಂದ ಸಂಗೀತಾ ಶೃಂಗೇರಿ ಹಾಗೂ ನಮ್ರತಾ ಗೌಡ ಅವರು ಪ್ರತಾಪ್ ಅವರನ್ನು ಸಮಾಧಾನ ಮಾಡಲು ಪ್ರಯತ್ನಿಸಿದರು. ಅವರು ಅಳುವುದನ್ನು ನೋಡಿ ಸಂಗೀತಾ ಕಣ್ಣಲ್ಲಿ, ನಮ್ರತಾ ಕಣ್ಣಲ್ಲಿ ನೀರು ಬಂತು.
ನಮ್ರತಾ ಅವರು ಕೂಡ ಈ ಮೊದಲು ಕುಟುಂಬದವರಿಂದಲೇ ಟಾರ್ಗೆಟ್ ಆಗಿದ್ದರು. ಈ ರೀತಿಯ ಘಟನೆ ಆದಾಗ ಅವರಿಗೆ ಸಾಕಷ್ಟು ನೋವಾಗುತ್ತದೆಯಂತೆ. ಹೀಗಾಗಿ, ಪ್ರತಾಪ್ಗೆ ಆದ ನೋವಲ್ಲಿ ಅವರು ಕೂಡ ಭಾಗಿ ಆಗಿದ್ದಾರೆ.
ಇದನ್ನೂ ಓದಿ: ಒಂದರ ಹಿಂದೊಂದು ಸಮಸ್ಯೆಗೆ ಸಿಲುಕಿದ ಪ್ರತಾಪ್: ರೆಕ್ಕೆ ಕತ್ತರಿಸುವ ಬೆದರಿಕೆ ಹಾಕಿದ ವಿನಯ್
ಡ್ರೋನ್ ಪ್ರತಾಪ್ ಅವರನ್ನು ಟಾರ್ಗೆಟ್ ಮಾಡಿದ ವಿಚಾರ ವೀಕೆಂಡ್ನಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ. ಈ ಘಟನೆಯ ಬಗ್ಗೆ ಸುದೀಪ್ ಅವರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಬಿಗ್ ಬಾಸ್ ನೋಡಲು ಅವಕಾಶ ಇದೆ. ಕಲರ್ಸ ಕನ್ನಡದಲ್ಲಿ ಬಿಗ್ ಬಾಸ್ ಎಪಿಸೋಡ್ ಪ್ರಸಾರ ಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:40 am, Sat, 14 October 23