AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಿಗ್ ಬಾಸ್ ಹಿಂದಿ 20’ನೇ ಸೀಸನ್​ಗೆ ಶಾರುಖ್ ಕೋ ಹೋಸ್ಟ್? ದೊಡ್ಡ ಸುಳಿವು ನೀಡಿದ ಸಲ್ಮಾನ್ ಖಾನ್

ಬಿಗ್ ಬಾಸ್ ಸೀಸನ್ 20ರ ಹೊಸ ಪ್ರೋಮೋ ಸಲ್ಮಾನ್ ಖಾನ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. 'ಕರಣ್-ಅರ್ಜುನ್' ವಿಷಯ ಪ್ರಸ್ತಾಪಿಸಿರುವ ಸಲ್ಮಾನ್, ಶಾರುಖ್ ಖಾನ್ ಆಗಮನದ ಸುಳಿವು ನೀಡಿದ್ದಾರೆ. ಸೆಪ್ಟೆಂಬರ್ 6 ರಿಂದ ಆರಂಭವಾಗಲಿರುವ ಈ ಶೋನಲ್ಲಿ ಇಬ್ಬರು ವಿನ್ನರ್ಸ್ ಇರಲಿದ್ದಾರಾ ಅಥವಾ ಜೋಡಿಯಾಗಿ ಆಟ ನಡೆಯಲಿದೆಯಾ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ.

‘ಬಿಗ್ ಬಾಸ್ ಹಿಂದಿ 20’ನೇ ಸೀಸನ್​ಗೆ ಶಾರುಖ್ ಕೋ ಹೋಸ್ಟ್? ದೊಡ್ಡ ಸುಳಿವು ನೀಡಿದ ಸಲ್ಮಾನ್ ಖಾನ್
ಬಿಗ್ ಬಾಸ್
ರಾಜೇಶ್ ದುಗ್ಗುಮನೆ
|

Updated on:Aug 04, 2026 | 2:50 PM

Share

ಮುಖ್ಯಾಂಶಗಳು

  • ಬಿಗ್ ಬಾಸ್ ವೇದಿಕೆಯಲ್ಲಿ ಸಲ್ಮಾನ್-ಶಾರುಖ್ ಒಂದಾಗ್ತಾರಾ?
  • ಇಬ್ಬರು ವಿನ್ನರ್ಸ್, ಹೊಸ ಟ್ವಿಸ್ಟ್: ಸೀಸನ್ 20ರ ರಹಸ್ಯ ಭೇದಿಸಿ
  • ಕಿರುತೆರೆಗೆ ಬರಲು ದಿನಗಣನೆ ಶುರು

ಬಿಗ್ ಬಾಸ್ ವೀಕ್ಷಕರಿಗೆ ದೊಡ್ಡ ಒಂದಾದ ಮೇಲೆ ಒಂದರಂತೆ ಗುಡ್ ನ್ಯೂಸ್ ಸಿಗುತ್ತಿದೆ. ಬಿಗ್ ಬಾಸ್‌ನ ಎಲ್ಲಾ 6 ಭಾಷೆಗಳ ಆವೃತ್ತಿಗಳು ಒಂದೇ ಬಾರಿಗೆ ಪ್ರಸಾರವಾಗಲಿವೆ ಎನ್ನಲಾಗಿದೆ. ಇದಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇತ್ತೀಚೆಗೆ ಕನ್ನಡದ ಟೀಸರ್ ರಿಲೀಸ್ ಆಗಿತ್ತು. ಈಗ ಹಿಂದಿ ಬಿಗ್ ಬಾಸ್ ಟೀಸರ್ ಸಮಯ. ಸಲ್ಮಾನ್ ಖಾನ್ ಮತ್ತೆ ನಿರೂಪಕರಾಗಿ ಕಾಣಿಸಿಕೊಂಡಿದ್ದಾರೆ. ಆದರೆ, ಈ ಪ್ರೋಮೋದಲ್ಲಿ ಅವರು ನೀಡಿದ ಒಂದು ರಹಸ್ಯ ಸುಳಿವು ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ.

ಟೀಸರ್‌ನಲ್ಲಿ ಸಲ್ಮಾನ್ ಖಾನ್ ಕುದುರೆಯ ಜೊತೆಗೆ ಹೆಜ್ಜೆ ಹಾಕುತ್ತಾ ಬರುವ ದೃಶ್ಯವಿದೆ. ಕೊನೆಯಲ್ಲಿ ಅವರು, ‘ಕರಣ್ ಅರ್ಜುನ್ ಸಿನಿಮಾದಲ್ಲಿ ಆಗಿದ್ದು ಈಗ ಬಿಗ್ ಬಾಸ್‌ನಲ್ಲಿ ಮತ್ತೆ ನಡೆಯಲಿದೆ. ತಥಾಸ್ತು’ ಎಂದು ಹೇಳಿದ್ದಾರೆ. ಈ ಸಾಲುಗಳು ವೀಕ್ಷಕರಲ್ಲಿ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಲ್ಮಾನ್ ಖಾನ್ ಈ ಸೀಸನ್ ಅನ್ನು ಪೂರ್ತಿಯಾಗಿ ನಿರೂಪಣೆ ಮಾಡುವುದಿಲ್ಲ ಎಂಬ ವದಂತಿಗಳು ಇತ್ತೀಚೆಗೆ ಹರಿದಾಡಿದ್ದವು. ಅವರು ತಮ್ಮ ಸಂಭಾವನೆಯನ್ನು 120 ಕೋಟಿಯಿಂದ 70 ಕೋಟಿಗೆ ಇಳಿಸಿದ್ದಾರೆ ಎಂದೂ ಹೇಳಲಾಗಿತ್ತು. ಆದರೆ ಇದಕ್ಕೆ ಯಾವುದೇ ಅಧಿಕೃತ ಆಧಾರಗಳಿಲ್ಲ.

View this post on Instagram

A post shared by JioHotstar (@jiohotstar)

1995ರಲ್ಲಿ ಬಂದ ‘ಕರಣ್ ಅರ್ಜುನ್’ ಸಿನಿಮಾದಲ್ಲಿ ಸಲ್ಮಾನ್ ಮತ್ತು ಶಾರುಖ್ ಖಾನ್ ಜೊತೆಯಾಗಿ ನಟಿಸಿದ್ದರು. ಹಾಗಾಗಿ ಗ್ರ್ಯಾಂಡ್ ಪ್ರಿಮಿಯರ್‌ನಲ್ಲಿ ಶಾರುಖ್ ಖಾನ್ ಭಾಗವಹಿಸಬಹುದು ಅಥವಾ ಶೋಗೆ ಕೋ-ಹೋಸ್ಟ್ ಆಗಿ ಬರಬಹುದು ಎನ್ನಲಾಗುತ್ತಿದೆ. ಡೈಲಾಗ್ ಕೊನೆಯಲ್ಲಿ ಸಲ್ಮಾನ್ ‘ಎರಡು’ ಎಂದು ಹೇಳಿರುವುದರಿಂದ, ಈ ಬಾರಿ ಬಿಗ್ ಬಾಸ್ 20ರಲ್ಲಿ ಒಬ್ಬರ ಬದಲು ಇಬ್ಬರು ವಿನ್ನರ್‌ಗಳು ಇರಲಿದ್ದಾರಾ ಅಥವಾ ಜೋಡಿಯಾಗಿ ಆಟ ಶುರುವಾಗಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: ‘ಬಿಗ್ ಬಾಸ್’ ಭಾವಿ ಸ್ಪರ್ಧಿಗಳಿಗೆ ‘ಅಗ್ನಿಪರೀಕ್ಷೆ’; ಜಡ್ಜ್​ ಸ್ಥಾನದಲ್ಲಿ ಗಿಲ್ಲಿ, ಸಂಗೀತಾ?

ಹಿಂದಿ ಬಿಗ್ ಬಾಸ್ ಸೆಪ್ಟೆಂಬರ್ 6ರಿಂದ ಪ್ರಾರಂಭವಾಗಲಿದೆ. ಪ್ರತಿದಿನ ರಾತ್ರಿ 9 ಗಂಟೆಗೆ ‘ಜಿಯೋ ಹಾಟ್‌ಸ್ಟಾರ್’ ಆ್ಯಪ್‌ನಲ್ಲಿ ಮತ್ತು ರಾತ್ರಿ 10:30 ಕ್ಕೆ ‘ಕಲರ್ಸ್ ಟಿವಿ’ಯಲ್ಲಿ ಪ್ರಸಾರವಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:49 pm, Tue, 4 August 26

Follow Us