‘ಜಡ್ಜ್​ ಆಗಿ ತಪ್ಪುಮಾಡಿದೆ’; ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಟ್ರೋಲ್ಸ್​ನಿಂದ ಸಂಗೀತಾ ಶೃಂಗೇರಿ ಕಂಗಾಲು

'ಬಿಗ್ ಬಾಸ್ ಅಗ್ನಿಪರೀಕ್ಷೆ' ಶೋ ಜಡ್ಜ್‌ಗಳಾದ ಸಂಗೀತಾ ಶೃಂಗೇರಿ ಹಾಗೂ ವಿನಯ್ ಗೌಡ ಸೋಶಿಯಲ್ ಮೀಡಿಯಾ ಟ್ರೋಲ್‌ಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಮೇಲಾಗುತ್ತಿರುವ ನೆಗೆಟಿವ್ ಕಾಮೆಂಟ್‌ಗಳನ್ನು ವಿನಯ್ ಎಂಜಾಯ್ ಮಾಡುತ್ತಿರುವುದನ್ನು ಕಂಡು ಸಂಗೀತಾ ಶೃಂಗೇರಿ ಸೆಟ್‌ನಲ್ಲೇ ವಿನಯ್ ವಿರುದ್ಧವಾಗಿ ಕಿಡಿಕಾರಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

‘ಜಡ್ಜ್​ ಆಗಿ ತಪ್ಪುಮಾಡಿದೆ’; ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಟ್ರೋಲ್ಸ್​ನಿಂದ ಸಂಗೀತಾ ಶೃಂಗೇರಿ ಕಂಗಾಲು
ಸಂಗೀತಾ-ವಿನಯ್

Updated on: Aug 14, 2026 | 2:49 PM

ಮುಖ್ಯಾಂಶಗಳು

  • ‘ಬಿಗ್ ಬಾಸ್ ಅಗ್ನಿಪರೀಕ್ಷೆ’ಗೆ ನೆಗೆಟಿವ್ ರಿವ್ಯೂಸ್
  • ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟ್ರೋಲ್
  • ತಮ್ಮ ಮೇಲಿನ ಟ್ರೋಲ್ ನೋಡಿ ವಿನಯ್​ಗೆ ಮಜಾ

‘ಬಿಗ್ ಬಾಸ್ ಕನ್ನಡ’ (BBK) ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದು. ಇದೀಗ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಎಂಬ ವಿಶಿಷ್ಟ ಹಾಗೂ ಹೊಸ ಮಾದರಿಯಲ್ಲಿ ಶೋ ಆರಂಭಗೊಂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಪ್ರಮುಖ ಕಂಟೆಂಟ್ ಕ್ರಿಯೇಟರ್ಸ್‌ಗಳು ಸ್ಪರ್ಧಿಗಳಾಗಿ ಭಾಗವಹಿಸಿರುವ ಈ ಶೋಗೆ ನಟಿ ಸಂಗೀತಾ ಶೃಂಗೇರಿ, ವಿನಯ್ ಗೌಡ, ಚಂದನ್ ಶೆಟ್ಟಿ ಹಾಗೂ ನಟಿ ಶ್ರುತಿ ಜಡ್ಜ್‌ಗಳಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಆದರೆ ಶೋನಲ್ಲಿ ನೀಡಲಾಗುತ್ತಿರುವ ಟಾಸ್ಕ್ ಹಾಗೂ ಜಡ್ಜ್‌ಗಳ ನಿರ್ಣಯಗಳನ್ನು ಆಧರಿಸಿ ಜಾಲತಾಣಗಳಲ್ಲಿ ಭಾರೀ ಟ್ರೋಲ್ ಮಾಡಲಾಗುತ್ತಿದೆ.

ಈ ಟ್ರೋಲ್​ಗಳ ಕುರಿತು ಸ್ವತಃ ಕಲರ್ಸ್ ಕನ್ನಡ ವಿಡಿಯೋ ಹಂಚಿಕೊಂಡಿದೆ. ಜಡ್ಜಿಂಗ್ ಚೇರ್‌ನಲ್ಲಿದ್ದ ಸಂಗೀತಾ ಶೃಂಗೇರಿ ತಮ್ಮ ಮೊಬೈಲ್‌ನಲ್ಲಿ ಸೋಶಿಯಲ್ ಮೀಡಿಯಾ ಫೀಡ್ ನೋಡುತ್ತಾ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ‘ಜಡ್ಜ್ ಆಗಿ ಬಂದು ತಪ್ಪು ಮಾಡಿದೆ ಅನಿಸುತ್ತದೆ. ಫೀಡ್‌ತುಂಬಾ ಬರೀ ನೆಗೆಟಿವ್ ರಿವ್ಯೂಸ್ ಹಾಗೂ ಟ್ರೋಲ್‌ಗಳೇ ಕಾಣಿಸುತ್ತಿವೆ. ನಾವು ಪ್ರಾಮಾಣಿಕವಾಗಿ, ಕಟ್ಟುನಿಟ್ಟಾಗಿ ಜಡ್ಜ್ ಮಾಡುತ್ತಿರುವುದಕ್ಕೆ ನಮಗೆ ಹೀಗೆ ಟ್ರೋಲ್ ಮಾಡಬೇಕಾ?’ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ‘ಬಿಗ್ ಬಾಸ್ ಅಗ್ನಿಪರೀಕ್ಷೆ’; 72 ವರ್ಷದ ರತ್ನ ಹಾಗೂ 20 ವರ್ಷ ಕುಮಾರಿ ಪಾಸ್

ಇದಕ್ಕೆ ಪ್ರತಿಕ್ರಿಯಿಸಿದ ವಿನಯ್ ಗೌಡ, ‘ಬರೀ ನಿನ್ನಷ್ಟೇ ಅಲ್ಲ ಸಂಗೀತಾ, ನನ್ನ ಮೇಲೂ ಟ್ರೋಲ್ ಆಗುತ್ತಿದೆ. ಇನ್‌ಸ್ಟಾಗ್ರಾಮ್ ಓಪನ್ ಮಾಡಿದರೆ ಬರೀ ಇವೇ ಬರುತ್ತಿವೆ’ ಎಂದಿದ್ದಾರೆ. ವಿನಯ್ ಅವರು ಈ ವಿಷಯವನ್ನು ತಮಾಷೆಯಾಗಿ ತೆಗೆದುಕೊಂಡು ನಗುತ್ತಿರುವುದನ್ನು ಕಂಡು ಸಂಗೀತಾ ಮತ್ತಷ್ಟು ಕೋಪಗೊಂಡಿದ್ದಾರೆ. ‘ನನ್ನ ಮೇಲಾಗುತ್ತಿರುವ ಟ್ರೋಲ್‌ಗಳನ್ನು ನೋಡಿ ನೀನು ಎಂಜಾಯ್ ಮಾಡುತ್ತಿದ್ದೀಯಾ? ಇದರಲ್ಲಿ ತಮಾಷೆ ಏನಿದೆ?’ ಎಂದು ವಿನಯ್ ವಿರುದ್ಧ ಸಂಗೀತಾ ಗರಂ ಆಗಿ ಅಲ್ಲಿಂದ ತೆರಳಿದ್ದಾರೆ.ಇದಕ್ಕೆ ಎರಡನೇ ಪಾರ್ಟ್ ಕೂಡ ಬರಲಿದೆ ಎಂಬ ಮಾಹಿತಿ ನೀಡಲಾಗಿದೆ.

ರಿಯಾಲಿಟಿ ಶೋ ಸುತ್ತ ಸಾಲು ಸಾಲು ವಿವಾದ ಹಾಗೂ ಟ್ರೋಲ್ಸ್

ಬಿಗ್ ಬಾಸ್ ರಿಯಾಲಿಟಿ ಶೋಗೆ ಕರೆದುಕೊಂಡು ಹೋಗಲು ‘ಬಿಗ್ ಬಾಸ್ ಅಗ್ನಿ ಪರೀಕ್ಷೆ’ ಮಾಡಲಾಗಿದೆ. 60 ಮಂದಿ ಪೈಕಿ ಕೆಲವರನ್ನು ಬಿಗ್ ಬಾಸ್ ಮನೆಗೆ ಕರೆದುಕೊಂಡು ಹೋಗಲಾಗುತ್ತಿದೆ. ‘ಬಿಗ್ ಬಾಸ್ ಅಗ್ನಿ ಪರೀಕ್ಷೆ’ ಆಗಸ್ಟ್ 16ರಿಂದ ಆರಂಭ ಆಗುತ್ತಿದೆ. ಮುಖ್ಯ ಶೋ ಸೆಪ್ಟೆಂಬರ್​ನಿಂದ 6ರಿಂದ ಆರಂಭ ಆಗುವ ನಿರೀಕ್ಷೆ ಇದೆ.

ಪ್ರಶ್ನೆ: ಬಿಗ್ ಬಾಸ್ ಅಗ್ನಿಪರೀಕ್ಷೆ ಯಾವಾಗಿನಿಂದ ಆರಂಭ?
ಉತ್ತರ: ಆಗಸ್ಟ್ 26

ಪ್ರಶ್ನೆ: ಬಿಗ್ ಬಾಸ್ ಅಗ್ನಿಪರೀಕ್ಷೆಗೆ ಜಡ್ಜ್​ ಯಾರು?
ಉತ್ತರ: ವಿನಯ್ ಗೌಡ, ಸಂಗೀತಾ ಶೃಂಗೇರಿ, ಚಂದನ್ ಶೆಟ್ಟಿ, ಶ್ರುತಿ

ಪ್ರಶ್ನೆ: ಬಿಗ್ ಬಾಸ್ ಅಗ್ನಿಪರೀಕ್ಷೆಯಲ್ಲಿ ಸ್ಪರ್ಧಿಗಳು ಯಾರು?
ಉತ್ತರ: ಕಂಟೆಂಟ್ ಕ್ರಿಯೇಟರ್ 

Loading...
Unable to load recommendations.
Follow Us