‘ನಿಮ್ಮ ತಂದೆ ಜೊತೆ ಇನ್ನೊಬ್ರು ಬರ್ತಾರೆ’; ರಘು ಮಗನಿಗೆ ಅಶ್ವಿನಿ ಹೇಳಿದ ಮಾತಿನ ಅರ್ಥ ಅದೇನಾ?

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ರಘು ಮತ್ತು ಅಶ್ವಿನಿ ಗೌಡರ ಗೆಳೆತನ ಗಮನ ಸೆಳೆದಿದೆ. ಅಂತಿಮ ವಾರದಲ್ಲಿ ರಘು ಪುತ್ರ ರೋನಿತ್ ಮನೆಗೆ ಬಂದಾಗ, ಅಶ್ವಿನಿ ಗೌಡ ಹಾಸ್ಯಭರಿತವಾಗಿ ‘ನಿಮ್ಮ ಅಪ್ಪ ಒಬ್ಬರೇ ಹೊರಗೆ ಬರೋದಿಲ್ಲ, ಇನ್ನೊಬ್ಬರು ಜೊತೆ ಇರುತ್ತಾರೆ’ ಎಂದಿದ್ದರು. ಈ ಮಾತಿಗೆ ಹಲವು ಅರ್ಥ ಕಲ್ಪಿಸಲಾಗುತ್ತಿದೆ.

‘ನಿಮ್ಮ ತಂದೆ ಜೊತೆ ಇನ್ನೊಬ್ರು ಬರ್ತಾರೆ’; ರಘು ಮಗನಿಗೆ ಅಶ್ವಿನಿ ಹೇಳಿದ ಮಾತಿನ ಅರ್ಥ ಅದೇನಾ?
ಬಿಗ್ ಬಾಸ್

Updated on: Jan 14, 2026 | 8:28 AM

ಬಿಗ್ ಬಾಸ್ (Bigg Boss) ಮನೆಯಲ್ಲಿರೋ ರಘು ಹಾಗೂ ಅಶ್ವಿನಿ ಗೌಡ ಮಧ್ಯೆ ಒಳ್ಳೆಯ ಫ್ರೆಂಡ್​​ಶಿಪ್ ಬೆಳೆದಿದೆ. ಇಬ್ಬರ ವಯಸ್ಸು ಸರಿ ಸುಮಾರು ಒಂದೇ ರೀತಿ ಇದೆ. ಈ ಕಾರಣದಿಂದಲೇ ಬಾಂಡಿಂಗ್ ಬಿಗಿಯಾಗಿದೆ. ಬಿಗ್ ಬಾಸ್ ಮನೆಯ ಇತರ ಸ್ಪರ್ಧಿಗಳು ಇವರ ಕಾಲೆಳೆಯುವ ಕೆಲಸ ಮಾಡುತ್ತಿರುತ್ತಾರೆ. ಈಗ ಅಶ್ವಿನಿ ಗೌಡ ಅವರು ಈ ವಿಷಯದಲ್ಲಿ ಫನ್ ಮಾಡಿದ್ದಾರೆ. ಅವರು ಹೇಳಿದ ವಾಕ್ಯಕ್ಕೆ ಬೇರೆ ಬೇರೆ ರೀತಿಯ ಅರ್ಥ ಕಲ್ಪಿಸಲಾಗುತ್ತಾ ಇದೆ. ಆ ಬಗ್ಗೆ ಇಲ್ಲಿದೆ ವಿವರ.

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಈಗ ನಡೆಯುತ್ತಿರುವುದು ಕೊನೆಯ ವಾರ. ಸ್ಪರ್ಧಿಗಳ ಮಧ್ಯೆ ಸಾಕಷ್ಟು ಟಫ್ ಸ್ಪರ್ಧೆ ಏರ್ಪಡುತ್ತಿದೆ. ಯಾರು ಹೋಗ್ತಾರೆ, ಯಾರು ಕಪ್ ಗೆಲ್ತಾರೆ ಎನ್ನುವ ಕುತೂಹಲ ಮೂಡಿದೆ. ಈ ಮಧ್ಯೆ ಕೊನೆಯ ವಾರದಲ್ಲಿ ವಿವಿಧ ರೀತಿಯ ಆಸೆಗಳನ್ನು ಹೇಳಿಕೊಳ್ಳಲು ಅವಕಾಶ ಇತ್ತು. ಅದೇ ರೀತಿ ರಘು ಅವರು ತಮ್ಮ ಮಗನ ಜೊತೆ ಸ್ವಿಮ್ಮಿಂಗ್​​ಪೂಲ್​​ನಲ್ಲಿ ಆಟ ಆಡಬೇಕು ಎಂದು ಆಸೆ ಹೇಳಿದ್ದರು. ಅಂತೆಯೇ ರಘು ಮಗ ರೋನಿತ್ ಬಿಗ್ ಬಾಸ್ ಮನೆಗೆ ಬಂದಿದ್ದಾರೆ.

ಬಿಗ್ ಬಾಸ್ ಮನೆಯ ಈಜುಕೊಳದಲ್ಲಿ ರಘು ಹಾಗೂ ರೋನಿತ್ ಆಟ ಆಡುತ್ತಿದ್ದರು. ಈ ವೇಳೆ ಅಶ್ವಿನಿ ಗೌಡ ಮಾತಿಗೆ ಇಳಿದರು. ‘ನಿಮ್ಮ ಅಪ್ಪ ಬಿಗ್ ಬಾಸ್ ಮನೆಯಿಂದ ಹೊರ ಬರುವಾಗ ಒಬ್ಬರೇ ಬರೋದಿಲ್ಲ. ಇನ್ನೊಬ್ಬರು ಅವರ ಜೊತೆ ಇರ್ತಾರೆ. ಓಕೆ ಅಲ್ಲವಾ’ ಎಂದು ಕೇಳಿದರು. ‘ಯಾರು ಇರ್ತಾರೆ’ ಎಂದು ರೋನಿತ್ ಮರು ಪ್ರಶ್ನೆ ಮಾಡಿದ. ಆಗ, ಅಶ್ವಿನಿ ಗೌಡ ಉತ್ತರಿಸಬೇಕು ಎನ್ನುವಾಗ ಬಿಗ್ ಬಾಸ್ ಹಾಡೊಂದನ್ನು ಹಾಕಿದರು. ಹೀಗಾಗಿ ಆ ಸಂಭಾಷಣೆ ಮುಂದುವರಿಯಲೇ ಇಲ್ಲ.

ಇದನ್ನೂ ಓದಿ: ಧ್ರುವಂತ್​ಗೆ ಸೀಸನ್ ಚಪ್ಪಾಳೆ ಬದಲು ವಾರದ ಚಪ್ಪಾಳೆ; ನಿರ್ಧಾರ ಬದಲಿಸಿದ ಬಿಗ್ ಬಾಸ್

ಅಶ್ವಿನಿ ಗೌಡ ಹೇಳಿದ ಮಾತಿಗೆ ನಾನಾ ಅರ್ಥ ಕಲ್ಪಿಸಲಾಗುತ್ತಿದೆ. ‘ಅವರ ಜೊತೆ ನಾನು ಬರ್ತೀನಿ’ ಎಂಬರ್ಥದಲ್ಲಿ ಅವರು ಹಾಸ್ಯ ಮಾಡಿರಬಹುದು ಎಂದು ಕೆಲವರು ಹೇಳಿದ್ದಾರೆ. ರಘು ಅವರಿಗೆ ಈಗಾಗಲೇ ಮದುವೆ ಆಗಿ ಸುಖವಾಗಿ ಸಂಸಾರ ನಡೆಸುತ್ತಿದ್ದಾರೆ. ಅವರದ್ದು ಶುದ್ಧ ಮನಸ್ಸು. ಹೀಗಾಗಿ, ಈ ಬಗ್ಗೆ ಅವರು ಆಲೋಚಿಸಿರುವುದಿಲ್ಲ. ಇದೆಲ್ಲ ಹಾಸ್ಯಕ್ಕೆ ಮಾತ್ರ ಸೀಮಿತವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 7:02 am, Wed, 14 January 26