ಬಿಗ್ ಬಾಸ್ ವಿನ್ನರ್ಗಳ ಕರೆಸಿ ಹೊಸ ಸೀಸನ್ ಮಾಡಿದ್ರೂ ಗಿಲ್ಲಿನೇ ಗೆಲ್ಲೋದು; ಭವಿಷ್ಯ ನುಡಿದ ಕಿರುತೆರೆ ನಟ
ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಗಿಲ್ಲಿ ಅವರ ಜನಪ್ರಿಯತೆ ಗಗನಕ್ಕೇರಿದೆ. ಅವರ ಖಡಕ್ ಮಾತುಗಳು ಮತ್ತು ದಿಟ್ಟ ನಿಲುವುಗಳಿಂದ ಜನಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೂ ದೊಡ್ಡ ಅಭಿಮಾನಿ ಬಳಗ ಸೃಷ್ಟಿಯಾಗಿದೆ. ಕಿರುತೆರೆ ನಟ ಅಭಿಷೇಕ್ ರಾಮ್ದಾಸ್ ಅವರು, ಎಲ್ಲಾ ಸೀಸನ್ ವಿನ್ನರ್‌ಗಳನ್ನೂ ಮೀರಿಸಿ ಗಿಲ್ಲಿ ಗೆಲ್ಲುತ್ತಾರೆ ಎಂದು ಹೇಳಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 12ರ (BBk 12) ಸ್ಪರ್ಧಿ ಗಿಲ್ಲಿ ನಟ ಕ್ರೇಜ್ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಇವರು ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಹೊರಗೆ ಇವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಗಿಲ್ಲಿಗೆ ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಅಭಿಮಾನಿಗಳಿದ್ದಾರೆ. ಈಗ ಕಿರುತೆರೆ ನಟನೋರ್ವ ಗಿಲ್ಲಿಯನ್ನು ಹೊಗಳಿದ್ದಾರೆ. ಎಲ್ಲಾ ಸೀಸನ್ಗಳ ವಿನ್ನರ್ ಕರೆಸಿ ಶೋ ಮಾಡಿದರೂ ಗೆಲ್ಲೋದು ಗಿಲ್ಲಿ ಎಂದಿದ್ದಾರೆ.
ಗಿಲ್ಲಿ ಎಲ್ಲರಿಗೂ ಇಷ್ಟ ಆಗೋಕೆ ಕಾರಣ ಅವರ ಮಾತು. ತಮ್ಮ ಮಾತುಗಳ ಮೂಲಕ, ಖಡಕ್ ತಿರುಗೇಟುಗಳ ಮೂಲಕ ಗಿಲ್ಲಿ ಗಮನ ಸೆಳೆದರು. ಅಶ್ವಿನಿ ಅವರನ್ನು ಯಾರೂ ಎದುರು ಹಾಕಿಕೊಳ್ಳಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣ ಆದಾಗ ಗಿಲ್ಲಿ ಅವರು ತಿರುಗೇಟು ಕೊಡಲು ಆರಂಭಿಸಿದರು. ಹೀಗಾಗಿಯೇ ಅವರ ಅಭಿಮಾನಿ ಬಳಗ ಹಿರಿದಾಯಿತು. ಈಗ ಗಿಲ್ಲಿಗೆ ದೊಡ್ಡ ಫ್ಯಾನ್ಬೇಸ್ ಸೃಷ್ಟಿ ಆಗಿದೆ.
View this post on Instagram
‘ನಂದ ಗೋಕುಲ’ ಧಾರಾವಾಹಿಯಲ್ಲಿ ವಲ್ಲಭ ಹೆಸರಿನ ಪಾತ್ರ ಮಾಡುತ್ತಿರುವ ಅಭಿಷೇಕ್ ರಾಮ್ದಾಸ್ ಅವರು ಗಿಲ್ಲಿ ಅಭಿಮಾನಿಯಾಗಿದ್ದಾರೆ. ಅವರು ಗಿಲ್ಲಿ ಬಗ್ಗೆ ಮಾತನಾಡಿದ್ದಾರೆ. ಅವರು ಒಂದು ಓಪನ್ ಚಾಲೆಂಜ್ ಹಾಕಿದ್ದಾರೆ. ‘ಹನುಮಂತ ಸೇರಿದಂತೆ ಎಲ್ಲಾ ಸೀಸನ್ಗಳ ವಿನ್ನರ್ ಕರೆಸಿ ಶೋ ಮಾಡಿದರೂ ಅಲ್ಲಿ ಗೆಲ್ಲೋದು ಗಿಲ್ಲಿ. ಪೊಟೆನ್ಶಿಯಲ್ ಶಬ್ದದ ಅರ್ಥವೇ ಗಿಲ್ಲಿ ’ ಎಂದು ಹೇಳಿದ್ದಾರೆ ಅಭಿಷೇಕ್. ಅಭಿಷೇಕ್ ಹೇಳಿದ ಈ ಮಾತನ್ನು ವೈರಲ್ ಮಾಡಲಾಗುತ್ತಿದೆ. ಗಿಲ್ಲಿ ಕ್ರೇಜ್ ಎನು ಎಂಬುದನ್ನು ಇವು ತೋರಿಸುತ್ತವೆ ಎಂದು ಅನೇಕರು ಹೇಳಿದ್ದಾರೆ.
ಇದನ್ನೂ ಓದಿ: ಗಿಲ್ಲಿ ಗೆಲ್ಲೋ ಸೂಚನೆ ಕೊಟ್ರಾ ಬಿಗ್ ಬಾಸ್? ಅಭಿಮಾನಿಗಳ ಮುಂದೆಯೇ ಘೋಷಣೆ
ಈ ಮೊದಲು ಸಂಗೀತಾ ಶೃಂಗೇರಿ ಕೂಡ ಗಿಲ್ಲಿ ಬಗ್ಗೆ ಮಾತನಾಡಿದ್ದರು. ‘ಗಿಲ್ಲಿ ಸಖತ್ ಇಷ್ಟ’ ಎಂದು ಅವರು ಹೇಳಿದ್ದರು. ಅನೇಕ ಸೆಲೆಬ್ರಿಟಿಗಳು ಗಿಲ್ಲಿ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಶೀಘ್ರವೇ ಫಿನಾಲೆಗೆ ವೋಟಿಂಗ್ ಲೈನ್ ಓಪನ್ ಆಗಲಿದ್ದು, ಶನಿವಾರದವರೆಗೆ ವೋಟ್ ಮಾಡಲು ಅವಕಾಶ ಇರುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:10 pm, Wed, 14 January 26




