
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಅಶ್ವಿನಿ ಗೌಡ ಹಾಗೂ ಗಿಲ್ಲಿ ಮಧ್ಯೆ ಫೈಟ್ ನಡೆಯುತ್ತಲೇ ಇರುತ್ತದೆ. ಇವರ ಜಗಳದಿಂದ ಮನೆಯಲ್ಲಿ ಅಶಾಂತಿ ಮೂಡಿದ ಉದಾಹರಣೆ ಇದೆ. ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಗಿಲ್ಲಿ ಅವರು ಅಶ್ವಿನಿ ಅವರನ್ನು ತಮ್ಮ ಮಾತುಗಳಿಂದ ಮತ್ತಷ್ಟು ಉರಿಸುತ್ತಾ ಇದ್ದಾರೆ. ಈ ಮಧ್ಯೆ ಗಿಲ್ಲಿ ಅವರು ಅಶ್ವಿನಿ ಗೌಡ ಅವರನ್ನು ಮಿಮಿಕ್ರಿ ಮಾಡಿದ್ದಾರೆ. ಈ ವಿಡಿಯೋ ಗಮನ ಸೆಳೆದಿದೆ.
ಅಶ್ವಿನಿ ಗೌಡ ಅವರು ವಾರದ ದಿನ ಒಂದು ರೀತಿ ಇದ್ದರೆ, ವೀಕೆಂಡ್ನಲ್ಲಿ ಕಿಚ್ಚ ಸುದೀಪ್ ಎದುರು ಮತ್ತೊಂದು ರೀತಿ ಇರುತ್ತಾರೆ. ವಾರದ ದಿನಗಳಲ್ಲಿ ಎಲ್ಲರನ್ನೂ ಏಕವಚನದಲ್ಲಿ ಕರೆದು, ತಪ್ಪು ಎತ್ತಿ ತೋರಿಸಿದಾಗ ಒಪ್ಪಿಕೊಳ್ಳದೆ ಅರಚಾಡುತ್ತಾರೆ. ಆದರೆ, ವೀಕೆಂಡ್ನಲ್ಲಿ ಅವರ ಟೋನ್ ಭಿನ್ನವಾಗಿರುತ್ತದೆ. ಈ ಬಗ್ಗೆ ಗಿಲ್ಲಿ ನಟ ಮಾತನಾಡಿದ್ದಾರೆ.
ರಘು ಅವರಿಂದ ಅವಮಾನ ಆಗಿದೆ ಎಂದು ಅಶ್ವಿನಿ ಗೌಡ ಮನೆಯಿಂದ ಹೊರಗೆ ಹೋಗುತ್ತೇನೆ ಎಂದು ಹಠ ಹಿಡಿದಿದ್ದರು. ಬಿಗ್ ಬಾಸ್ ಮನೆಯ ಬಾಗಿಲು ತಟ್ಟಿ ರಾದ್ಧಾಂತ ಮಾಡಿದ್ದರು. ಈ ವಿಷಯ ವೀಕೆಂಡ್ನಲ್ಲಿ ಚರ್ಚೆಗೆ ಬಂದರೆ ಅಶ್ವಿನಿ ಯಾವ ರೀತಿ ಮಾತನಾಡುತ್ತಾರೆ ಎಂಬುದನ್ನು ಗಿಲ್ಲಿ ವಿವರಿಸಿದ್ದರು.
‘ಅಣ್ಣ (ಸುದೀಪ್) ಎಲ್ಲೋ ಒಂದು ಕಡೆ ನನ್ನ ದೃಷ್ಟಿಯಿಂದ ಸರಿ ಎನಿಸಿತು. ಅದು ತಪ್ಪು ಅಂತ ಗೊತ್ತಾಯ್ತು. ಮಾತಾಡೋ ಭರದಲ್ಲಿ ನಾನು ತಪ್ಪು ಮಾಡಿದ್ದೇನೆ’ ಎಂದು ಅಶ್ವಿನಿ ಗೌಡ ರೀತಿಯೇ ಮಾತನಾಡಿದ್ದಾರೆ ಗಿಲ್ಲಿ. ಗಿಲ್ಲಿ ಕೊಟ್ಟ ಎಕ್ಸ್ಪ್ರೆಷನ್ ಅಶ್ವಿನಿ ಅವರ ವೀಕೆಂಡ್ನಲ್ಲಿ ಕೊಡುವ ಎಕ್ಸ್ಪ್ರೆಷನ್ಗೆ ಸರಿ ಹೊಂದುತ್ತೆ ಎಂದು ಅನೇಕರು ಹೇಳಿದ್ದಾರೆ.
ಇದನ್ನೂ ಓದಿ: ಸಿನಿಮಾದಲ್ಲಿ ಅಮ್ಮ, ಅತ್ತೆ ಪಾತ್ರ ಸಿಕ್ಕರೆ ಮಾಡುತ್ತೇನೆ: ಬಿಗ್ ಬಾಸ್ ಮಲ್ಲಮ್ಮ
ಅಶ್ವಿನಿ ಗೌಡ ಬಿಗ್ ಬಾಸ್ ಮನೆಯಲ್ಲಿ ವುಮನ್ ಕಾರ್ಡ್ ಪ್ಲೇ ಮಾಡುತ್ತಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಅವರು ದೊಡ್ಮನೆಯಲ್ಲಿ ಜಗಳಗಳ ಮೂಲಕ ಸುದ್ದಿ ಆಗುತ್ತಿದ್ದಾರೆ. ಅವರು ಯಾರಿಗೂ ಗೌರವ ನೀಡೋದಿಲ್ಲ. ಆದರೆ, ಅವರು ಮಾತ್ರ ಗೌರವ ನಿರೀಕ್ಷೆ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:01 am, Fri, 21 November 25