ಗೆಲ್ಲುವ ಕುದುರೆ ಆದರೂ ಗೆದ್ದೆತ್ತಿನ ಬಾಲ ಹಿಡಿಯುತ್ತಿದ್ದಾರಾ ಗಿಲ್ಲಿ?

ಬಿಗ್ ಬಾಸ್ ಕನ್ನಡ 12ರಲ್ಲಿ ಗಿಲ್ಲಿ ನಟ ವಿನ್ನರ್ ಆಗಬಹುದು ಎಂಬ ಮಾತು ಬಲವಾಗಿದೆ. ಅವರ ಆಟದ ಶೈಲಿ ಅದಕ್ಕೆ ಕಾರಣ. ಆದರೆ, ಅವರು 'ಗೆದ್ದೆತ್ತಿನ ಬಾಲ ಹಿಡಿಯುತ್ತಿದ್ದಾರೆ' ಎಂಬ ಆರೋಪ ಕೇಳಿಬಂದಿದೆ. ಕ್ಯಾಪ್ಟನ್ ಜೊತೆ ಸೇರಿಕೊಳ್ಳುವುದು, ಸ್ಟ್ರಾಂಗ್ ಆಟಗಾರರ ಹಿಂದೆ ಹೋಗುವುದು ಅವರ ತಂತ್ರವೇ? ಈ ಬಗ್ಗೆ ಮನೆಯೊಳಗೆ ಚರ್ಚೆಗಳು ನಡೆಯುತ್ತಿವೆ.

ಗೆಲ್ಲುವ ಕುದುರೆ ಆದರೂ ಗೆದ್ದೆತ್ತಿನ ಬಾಲ ಹಿಡಿಯುತ್ತಿದ್ದಾರಾ ಗಿಲ್ಲಿ?
ಗಿಲ್ಲಿ ನಟ

Updated on: Nov 22, 2025 | 12:18 PM

ಗಿಲ್ಲಿ ನಟ (Gilli Nata) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ರ ವಿನ್ನರ್ ಆಗಬಹುದು ಎಂದು ಬಹುತೇಕರಿಗೆ ಅನಿಸಿದೆ. ಇದಕ್ಕೆ ಕಾರಣ ಆಗಿದ್ದು ಅವರ ಆಟದ ಶೈಲಿ. ಅವರಿಗೆ ಯಾರೂ ಸ್ಪರ್ಧೆ ಕೊಡಲು ಸಾಧ್ಯವೇ ಇಲ್ಲ ಎಂಬ ರೀತಿಯಲ್ಲಿ ಆಡುತ್ತಿದ್ದಾರೆ. ಅವರೇ ಗೆಲ್ಲುವ ಕುದುರೆ ಆದರೂ ಗೆದ್ದೆತ್ತಿನ ಬಾಲ ಹಿಡಿಯುತ್ತಿದ್ದಾರಾ? ಹೀಗೊಂದು ಪ್ರಶ್ನೆ ಕೆಲವರಿಗೆ ಮೂಡಿದೆ. ಇದಕ್ಕೆ ಕಾರಣವೂ ಇದೆ. ಆ ಬಗ್ಗೆ ಇಲ್ಲಿದೆ ವಿವರ.

ಗಿಲ್ಲಿ ನಟ ಅವರು ಯಾರೇ ಕ್ಯಾಪ್ಟನ್ ಆದರೂ, ‘ನಾನು ಉಪನಾಯಕ’ ಎಂಬ ಪಟ್ಟ ತೆಗೆದುಕೊಂಡು ಓಡಾಡುತ್ತಾರೆ. ರಘು ಕ್ಯಾಪ್ಟನ್ ಆದಾಗ ಅವರು ಇದೇ ರೀತಿ ಮಾಡಿದ್ದರು. ಈ ವಾರ ಅಭಿಷೇಕ್ ಕ್ಯಾಪ್ಟನ್ ಆಗಿದ್ದಾರೆ. ಆಗಲೂ ಅವರು ಮಾಡಿದ್ದು ಹಾಗೆಯೇ. ಇದನ್ನು ಮನೆಯ ಕೆಲವರು ಟೀಕೆ ಮಾಡಿದ್ದಾರೆ.

ನವೆಂಬರ್ 21ರ ಎಪಿಸೋಡ್​ನಲ್ಲಿ ಅಭಿಷೇಕ್ ಅವರು ಕ್ಯಾಪ್ಟನ್ ಆಗಿ ಕ್ಯಾಪ್ಟನ್ ರೂಂ ಒಳಗೆ ಹೋಗುವವರು ಇದ್ದರು. ಆಗ ಗಿಲ್ಲಿ ಅಭಿಷೇಕ್ ಅವರ ಬಾಕ್ಸ್ ಹಿಡಿದು ಒಳ ಬಂದರು. ಈ ವೇಳೆ ಅವರು ಕ್ಯಾಪ್ಟನ್ ರೂಂ ಬೆಡ್​ ಮೇಲೆ ಕೆಲ ಹೊತ್ತು ವಿಶ್ರಾಂತಿಸಿದ್ದಾರೆ. ಬಿಗ್ ಬಾಸ್ ನಿಯಮಗಳ ಪ್ರಕಾರ ಕ್ಯಾಪ್ಟನ್ ಹೊರತುಪಡಿಸಿ ಅದನ್ನು ಯಾರೂ ಬಳಕೆ ಮಾಡುವಂತಿಲ್ಲ. ಅದನ್ನು ಕಷ್ಟಪಟ್ಟು ಪಡೆದುಕೊಳ್ಳಬೇಕು. ಆದರೆ, ಗಿಲ್ಲಿ ಹಾಗೆ ಮಾಡುತ್ತಿಲ್ಲ.

ಇದನ್ನೂ ಓದಿ: ಬಿಟ್ಟು ಬಿಡದೆ ಕಾಡಿದ ತಪ್ಪಿತಸ್ಥ ಭಾವನೆ; ಅಶ್ವಿನಿ ಬಳಿ ಕ್ಷಮೆ ಕೇಳಿದ ಗಿಲ್ಲಿ

ಸೂರಜ್ ಅವರು ಉತ್ತಮ ಪಡೆದರು. ಈ ವೇಳೆ ಗಿಲ್ಲಿ ಅವರು ಕ್ಯಾಪ್ಟನ್ ಹಾಗೂ ಉತ್ತಮ ಪಡೆದ ಸೂರಜ್ ಜೊತೆ ಪೋಸ್ ಕೊಟ್ಟರು. ಇದಕ್ಕೆ ಜಾನ್ವಿ ಕೊಂಕು ತೆಗೆದರು. ‘ಗಿಲ್ಲಿ ಗೆದ್ದೆತ್ತಿನ ಬಾಲ ಹಿಡಿಯುತ್ತಾನೆ. ಯಾರೇ ಗೆದ್ದರೂ ಅವರ ಹಿಂದೆ ಹೋಗುತ್ತಾನೆ’ ಎಂದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆದಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.