
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ (Gilli Nata) ಅವರು ಒಳ್ಳೆಯ ರೀತಿಯಲ್ಲಿ ಆಟ ಆಡುತ್ತಿದ್ದಾರೆ. ಅವರು ಎಲ್ಲರನ್ನು ನಗಿಸುವುದರ ಜೊತೆಗೆ ಒಂದಷ್ಟು ಮಾಸ್ಟರ್ ಪ್ಲ್ಯಾನ್ಗಳನ್ನು ಮಾಡುತ್ತಿದ್ದಾರೆ. ಈ ಪ್ಲ್ಯಾನ್ಗಳು ಅನೇಕರಿಗೆ ಅಚ್ಚರಿ ತರಿಸುತ್ತಿವೆ. ಈ ವಾರದ ನಾಮಿನೇಷನ್ ಟಾಸ್ಕ್ನಲ್ಲಿಯೂ ಅದೇ ರೀತಿ ಆಗಿದೆ. ಅವರ ಮಾಸ್ಟರ್ ಪ್ಲ್ಯಾನ್ಗೆ ರಾಶಿಕಾ ಅವರು ನಾಮಿನೇಟ್ ಆದರು.
ಬಿಗ್ ಬಾಸ್ ಮನೆಯಲ್ಲಿ ಪ್ರತಿ ವಾರ ಇಬ್ಬರನ್ನು ಮಾತ್ರ ನಾಮಿನೇಟ್ ಮಾಡಲು ಅವಕಾಶ ಇರುತ್ತದೆ. ಆದರೆ, ಈ ಬಾರಿ ಬಿಗ್ ಬಾಸ್ ಹೊಸ ರೀತಿಯ ಅವಕಾಶ ನೀಡಿದರು. ಎಲ್ಲಾ ಸ್ಪರ್ಧಿಗಳು ಎಷ್ಟು ಜನರನ್ನು ಬೇಕಿದ್ದರೂ ನಾಮಿನೇಟ್ ಮಾಡಬಹುದಿತ್ತು. ಇಲ್ಲಿ ಬಿಗ್ ಬಾಸ್ ಒಂದು ಅವಕಾಶ ಕೂಡ ನೀಡಿದರು.
ಪ್ರತಿ ಸ್ಪರ್ಧಿ ಕನ್ಫೆಷನ್ ರೂಂಗೆ ಹೋಗಬೇಕು. ಅಲ್ಲಿ ಹೋದ ಬಳಿಕ ಉಳಿದ ಸ್ಪರ್ಧಿಗಳು ನಾಮಿನೇಟ್ ಮಾಡಬೇಕು. ಎಷ್ಟು ಮಂದಿ ನಾಮಿನೇಟ್ ಮಾಡಿದ್ದಾರೆ ಎಂದು ಬಿಗ್ ಬಾಸ್ ಹೇಳುತ್ತಾರೆ. ಅದು ಯಾರು ಎಂಬದನ್ನು ಸರಿಯಾಗಿ ಊಹಿಸಬೇಕು. ರಾಶಿಕಾ ಊಹೆಯನ್ನು ಗಿಲ್ಲಿ ನಟ ಅವರು ತಪ್ಪು ಮಾಡಿದ್ದಾರೆ.
ಹಲವು ಬಾರಿ ರಾಶಿಕಾ ಅವರನ್ನು ಗಿಲ್ಲಿ ನಾಮಿನೇಟ್ ಮಾಡಿದ್ದು ಇದೆ. ಆದರೆ, ಈ ವಾರ ಗಿಲ್ಲಿ ಅವರು ರಾಶಿಕಾನ ನಾಮಿನೇಟ್ ಮಾಡಿಯೇ ಇಲ್ಲ. ರಾಶಿಕಾ ಲೆಕ್ಕಾಚಾರ ತಪ್ಪಾಗಿದ್ದು ಇಲ್ಲೇ. ಅವರು ಗಿಲ್ಲಿ ಹೆಸರನ್ನು ಕೂಡ ತೆಗೆದುಕೊಂಡರು. ಆದರೆ, ಗಿಲ್ಲಿ ಹೆಸರನ್ನು ತಪ್ಪಾಗಿ ಊಹಿಸಿದ್ದರು. ಹೀಗಾಗಿ ರಾಶಿಕಾ ನಾಮಿನೇಟ್ ಆಗಿದ್ದಾರೆ. ಆ ಬಳಿಕ ಗಿಲ್ಲಿ ಅವರು ನಿಮ್ಮ ಹೆಸರು ತೆಗೆದುಕೊಂಡಿಲ್ಲ ಎಂಬುದನ್ನು ಅನೇಕರು ಹೇಳಿದರು. ಇದನ್ನು ಕೇಳಿ ರಾಶಿಕಾ ಶಾಕ್ ಆದರು.
ಇದನ್ನೂ ಓದಿ: ಗಿಲ್ಲಿ ನಟಿಸಿದ್ರೂ ‘ಡೆವಿಲ್’ ಟ್ರೇಲರ್ನ ಬಿಗ್ ಬಾಸ್ನಲ್ಲಿ ಏಕೆ ಹಾಕಿಲ್ಲ? ಬೇರೆಯದೇ ಕಾರಣ ಕೊಟ್ಟ ರಜತ್
ಈ ವಾರ ಬಿಗ್ ಬಾಸ್ ಮನೆಯಲ್ಲಿ ಫ್ಯಾಮಿಲಿ ವೀಕ್ ಇರಲಿದೆ. ಸ್ಪರ್ಧಿಗಳ ಮನೆ ಸದಸ್ಯರು ಬಿಗ್ ಬಾಸ್ ಮನೆಗೆ ಬರುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.