
ಕಳೆದ ವಾರ ಬಿಗ್ಬಾಸ್ (Bigg Boss) ಮನೆಯಲ್ಲಿ ಕಾಲೇಜು ಟಾಸ್ಕ್ ನಡೆಯಿತು. ಬಿಗ್ಬಾಸ್ ಮನೆ ಸ್ಪರ್ಧಿಗಳೆಲ್ಲ ಬಿಬಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದರು. ಕ್ಯಾಪ್ಟನ್ ರಘು ಅವರು ಬಿಗ್ಬಾಸ್ ಕಾಲೇಜಿನ ಪ್ರಿನ್ಸಿಪಲ್ ಆಗಿದ್ದರು. ಮನೆಯ ಎಲ್ಲ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಕೆಲವರಂತೂ ಬಹಳ ಚೆನ್ನಾಗಿ ಆಟ ಆಡಿದರು. ಕೆಲವರು ಕಾಲೇಜಿನಿಂದ ಡಿಬಾರ್ ಆಡಿದರು. ಕಾಲೇಜಿನಲ್ಲಿ ಸಾಂಸ್ಕೃತಿ ಕಾರ್ಯಕ್ರಮ ಸಹ ನಡೆದಿತ್ತು, ವೀಕೆಂಡ್ ಎಪಿಸೋಡ್ನಲ್ಲಿ ಸುದೀಪ್ ಈ ಬಗ್ಗೆ ಮಾತನಾಡಿದರು.
ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಡ್ಯಾನ್ಸ್ ಪ್ರದರ್ಶನ ನೀಡಲೆಂದು ಜೋಡಿಗಳು ಡ್ಯಾನ್ಸ್ ರಿಹರ್ಸಲ್ ಮಾಡಿದರು. ಈ ವೇಳೆ ಸೂರಜ್ ಮತ್ತು ಕಾವ್ಯಾ ಒಟ್ಟಿಗೆ ಡ್ಯಾನ್ಸ್ ಮಾಡಲು ಪ್ರಾಕ್ಟಿಸ್ ಮಾಡುತ್ತಿದ್ದರು. ಆದರೆ ಕಾವ್ಯಾ ಬಗ್ಗೆ ವಿಶೇಷ ಆಸಕ್ತಿ ಇರಿಸಿಕೊಂಡಿರುವ ಗಿಲ್ಲಿ, ಅದನ್ನು ಹೊರಗೆ ನಿಂತು ಕದ್ದು-ಮುಚ್ಚಿ ನೋಡುತ್ತಿದ್ದರು. ಪೆಚ್ಚು ಮೋರೆ ಹಾಕಿಕೊಂಡು ಕಾವ್ಯಾ ಹಾಗೂ ಸೂರಜ್ ಡ್ಯಾನ್ಸ್ ನೋಡುತ್ತಿದ್ದ ಗಿಲ್ಲಿಯ ಫೋಟೊ ಇದೀಗ ವೈರಲ್ ಆಗುತ್ತಿದೆ. ಈ ಬಗ್ಗೆಯೂ ಸಹ ಸುದೀಪ್ ಮಾತನಾಡಿದರು. ಈ ವೇಳೆ, ಮಾತನಾಡಿದ ಗಿಲ್ಲಿ, ‘ನನ್ನ ಶಾಪದಿಂದಲೇ ಅವರಿಬ್ಬರ ಡ್ಯಾನ್ಸ್ ಚೆನ್ನಾಗಿ ಮೂಡಿಬರಲಿಲ್ಲ. ಬಹಳ ಕೆಟ್ಟದಾಗಿ ಡ್ಯಾನ್ಸ್ ಮಾಡಿದರು. ಸರಿಯಾಗಿ ಹೊಂದಾಣಿಕೆಯೇ ಆಗಲಿಲ್ಲ. ಅದಕ್ಕೆ ನನ್ನ ಶಾಪವೇ ಕಾರಣ’ ಎಂದು ಹೇಳಿದರು.
ಇದನ್ನೂ ಓದಿ:ಬಿಗ್ಬಾಸ್ ಮನೆಯಲ್ಲಿ ಕಬಡ್ಡಿ: ರೊಚ್ಚಿಗೆದ್ದ ರಾಶಿಕಾ-ರಕ್ಷಿತಾ
ಅದಾದ ಬಳಿಕ ವೀಕೆಂಡ್ ಎಪಿಸೋಡ್ನಲ್ಲಿ ಸಹ ಸುದೀಪ್ ಅವರು ಸ್ಪರ್ಧಿಗಳಿಂದ ಡ್ಯಾನ್ಸ್ ಮಾಡಿಸಿದರು. ಮೊದಲಿಗೆ ಧನುಶ್ ಮತ್ತು ಕಾವ್ಯಾ ಡ್ಯಾನ್ಸ್ ಮಾಡಿದರು. ಆಗಲೂ ಸಹ ಗಿಲ್ಲಿ ಪೆಚ್ಚು ಮೋರೆ ಹಾಕಿಕೊಂಡು ಅವರಿಬ್ಬರ ಡ್ಯಾನ್ಸ್ ನೋಡಿದರು. ಕಾವ್ಯಾ ಮತ್ತು ಧನುಶ್ ಡ್ಯಾನ್ಸ್ ಮಾಡುತ್ತಿದ್ದರೆ ಕ್ಯಾಮೆರಾಗಳು ಮಾತ್ರ ಗಿಲ್ಲಿಯ ಪೆಚ್ಚು ಮೋರೆಯ ಮೇಲೆ ಫೋಕಸ್ ಆಗಿದ್ದವು.
ಆದರೆ ಗಿಲ್ಲಿಗೆ ಡ್ಯಾನ್ಸ್ ಮಾಡುವ ಅವಕಾಶ ಸಿಕ್ಕಿತು. ಆಗ ಗಿಲ್ಲಿ ಆಯ್ಕೆ ಮಾಡಿದ್ದು ಕಾವ್ಯಾ ಅವರನ್ನೆ. ಕಾವ್ಯಾ ಮತ್ತು ಗಿಲ್ಲಿ ಅವರುಗಳು ಸುದೀಪ್ ಅವರ ಸಿನಿಮಾ ಹಾಡಿಗೆ ಡ್ಯಾನ್ಸ್ ಮಾಡಿದರು. ಇಬ್ಬರ ಡ್ಯಾನ್ಸ್ಗೆ ಪ್ರೇಕ್ಷಕರು ಚಪ್ಪಾಳೆ ತಟ್ಟಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ