
ಬಿಗ್ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಇಂದು (ಭಾನುವಾರ) ನಡೆಯಲಿದೆ. ಸೆಪ್ಟೆಂಬರ್ 28, 2025ರಂದು ಪ್ರಾರಂಭವಾದ ಬಿಗ್ಬಾಸ್ ಸೀಸನ್ 12 ಇಂದಿಗೆ 112 ದಿನಗಳನ್ನು ಪೂರೈಸಲಿದೆ. ಫಿನಾಲೆಗೆ ಗಿಲ್ಲಿ ನಟ, ಅಶ್ವಿನಿ ಗೌಡ, ಧನುಶ್, ಕಾವ್ಯಾ, ರಘು ಮತ್ತು ರಕ್ಷಿತಾ ಶೆಟ್ಟಿ ಅವರುಗಳು ಬಂದಿದ್ದಾರೆ. ಈ ಆರರಲ್ಲಿ ಒಬ್ಬರು ಈ ಸೀಸನ್ನ ವಿಜೇತರಾಗಲಿದ್ದಾರೆ. ಒಬ್ಬ ಸ್ಪರ್ಧಿಗೆ 37 ಕೋಟಿಗೂ ಅಧಿಕ ವೋಟು ಬಂದಿದೆ, ಇನ್ನೊಬ್ಬ ಸ್ಪರ್ಧಿಗೂ ಸರಿ ಸುಮಾರು ಇಷ್ಟೆ ಮತಗಳು ಬಂದಿವೆ ಎಂದು ಸುದೀಪ್ ಹೇಳಿರುವುದು ಕುತೂಹಲ ಮೂಡಿಸಿದೆ. ಕೆಲವೇ ಗಂಟೆಗಳಲ್ಲಿ ವಿನ್ನರ್ ಘೋಷಣೆ ಆಗಲಿದೆ. ಬಿಗ್ಬಾಸ್ ಫಿನಾಲೆಯ ಕ್ಷಣ-ಕ್ಷಣದ ಮಾಹಿತಿಯನ್ನು ಇಲ್ಲಿ ಗಮನಿಸಿ…
ಅದ್ಭುತವಾಗಿ ಆಡಿದ ರಕ್ಷಿತಾ ಶೆಟ್ಟಿ ಮೊದಲ ರನ್ನರ್ ಅಪ್ ಆದರು. ಮನೊರಂಜನಾ ಕ್ಷೇತ್ರದ ಹಿನ್ನೆಲೆ ಇಲ್ಲದ ರಕ್ಷಿತಾ ರನ್ನರ್ ಅಪ್ ಆಗಿದ್ದನ್ನು ಸಾಧನೆ ಎಂದು ಸುದೀಪ್ ಕೊಂಡಾಡಿದರು.
ಗಿಲ್ಲಿಗೆ ಅಶ್ವಸೂರ್ಯ ಅವರ ಕಡೆಯಿಂದ 50 ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಮಾರುತಿಯ ಹೊಸ ಕಾರನ್ನು ಉಡುಗೊರೆಯಾಗಿ ನೀಡಲಾಯ್ತು.
ಬಿಗ್ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಆಗಿದ್ದಾರೆ ಗಿಲ್ಲಿ ನಟ.
ಈ ಸೀಸನ್ನ ಗಟ್ಟಿ ಸ್ಪರ್ಧಿ ಎನಿಸಿಕೊಂಡಿದ್ದ ಅಶ್ವಿನಿ ಗೌಡ ಅವರು ಎರಡನೇ ರನ್ನರ್ ಅಪ್ ಆಗಿ ಬಿಗ್ಬಾಸ್ ಮನೆಯಿಂದ ಹೊರ ಹೋಗಿದ್ದಾರೆ.
ಬಿಗ್ಬಾಸ್ ಕನ್ನಡ ಸಿಸನ್ 12 ರ ಮನೆಯ ಲೈಟ್ ಅನ್ನು ಸುದೀಪ್ ಆಫ್ ಮಾಡುವ ಮೂಲಕ ಈ ಸೀಸನ್ನ ಮನೆಗೆ ವಿದಾಯ ಹೇಳಿದರು.
ಇನ್ನು ಕೆಲವೇ ನಿಮಿಷಗಳಲ್ಲಿ ಎಲ್ಲರೂ ಬಿಗ್ಬಾಸ್ ಮನೆ ಬಿಟ್ಟು ಹೊರಗೆ ಬರಲಿದ್ದಾರೆ. ರಕ್ಷಿತಾ, ತಮ್ಮ ಕಿಚ್ಚನ ಚಪ್ಪಾಳೆಯ ಫೊಟೊ ತೆಗೆದುಕೊಂಡು ಹೋಗುವೆ ಎಂದರು ಆದರೆ ಕಿಚ್ಚ ಬೇಡ ಎಂದಿದ್ದಾರೆ. ಕೈ ಮುಗಿದು ರಕ್ಷಿತಾ ಬೇಡಿಕೊಂಡಿದ್ದಾರೆ.
ಕಿಚ್ಚ ಸುದೀಪ್ ಅವರು ಇದೀಗ ಬಿಗ್ಬಾಸ್ ಮನೆಗೆ ಹೋಗಿದ್ದಾ. ಉಳಿದ ಮೂವರಾದ ಗಿಲ್ಲಿ, ರಕ್ಷಿತಾ ಮತ್ತು ಅಶ್ವಿನಿ ಅವರನ್ನು ಖುದ್ದಾಗಿ ಬಿಗ್ಬಾಸ್ ವೇದಿಕೆಗೆ ಕರೆತರುತ್ತಿದ್ದಾರೆ.
ಸುದೀಪ್ ಅವರು ಇದೀಗ ಗಿಲ್ಲಿ, ರಕ್ಷಿತಾ ಶೆಟ್ಟಿ ಮತ್ತು ಅಶ್ವಿನಿ ಗೌಡ ಅವರುಗಳ ಹಿಂದಿನ ಪಯಣದ ವಿಡಿಯೋಗಳನ್ನು ಹಾಕಿ ತೋರಿಸುತ್ತಿದ್ದಾರೆ. ಎಲ್ಲರ ಪ್ರಯಾಣವೂ ಅದ್ಭುತವಾಗಿದೆ.
ಬಿಗ್ಬಾಸ್ ಮನೆಯಲ್ಲಿ ಪ್ರಸ್ತುತ ಉಳಿದಿರುವುದು ಮೂರೇ ಜನ ಸ್ಪರ್ಧಿಗಳು. ಗಿಲ್ಲಿ ನಟ, ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ. ಈ ಮೂವರಲ್ಲಿ ಗೆಲ್ಲುವುದು ಯಾರು?
Kavya
ಬಿಗ್ಬಾಸ್ ಫಿನಾಲೆಯಿಂದ ನಾಲ್ಕನೇ ಸ್ಪರ್ಧಿಯಾಗಿ ಕಾವ್ಯಾ ಅವರು ಹೊರಗೆ ಹೋಗಿದ್ದಾರೆ. ರವಿಚಂದ್ರನ್ ಅವರು ಮನೆಯ ಒಳಗೆ ಹೋಗಿ ಆಕ್ಟಿವಿಟಿ ಮೂಲಕ ಕಾವ್ಯಾ ಅನ್ನು ಹೊರಗೆ ಕರೆತಂದರು.
ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಬಿಗ್ಬಾಸ್ ಮನೆಗೆ ಸೂಟ್ಕೇಸ್ ಸಹಿತ ಹೋಗಿದ್ದರು. ಈಗಲೇ ಹೊರಬರುವ ಸ್ಪರ್ಧಿಗೆ ಐದು ಲಕ್ಷ ಹಣ ಕೊಡುವುದಾಗಿ ಹೇಳಿದರು. ಆದರೆ ಯಾರೂ ಸಹ ರವಿಚಂದ್ರನ್ ನೀಡಿದ ಆಫರ್ ಒಪ್ಪಿಕೊಳ್ಳಲಿಲ್ಲ.
ಬಿಗ್ಬಾಸ್ ವೇದಿಕೆಗೆ ಮತ್ತೊಮ್ಮೆ ಬಂದಿದ್ದಾರೆ ಕ್ರೇಜಿ ಸ್ಟಾರ್ ವಿ ರವಿಚಂದ್ರನ್. ಇದೇ ಸೀಸನ್ನಲ್ಲಿ ಒಮ್ಮೆ ಬಿಗ್ಬಾಸ್ ಮನೆಗೂ ಹೋಗಿದ್ದ ರವಿಚಂದ್ರನ್ ಅವರು ಇದೀಗ ವೇದಿಕೆಗೆ ಬಂದಿದ್ದು, ನಾಲ್ಕನೇ ಸ್ಪರ್ಧಿಯನ್ನು ಹೊರಗೆ ಕರೆದುಕೊಂಡು ಬರಲಿದ್ದಾರೆ.
ಬಿಗ್ಬಾಸ್ ವೇದಿಕೆ ಮೇಲೆ ನಕ್ಕು ನಗಿಸಿದ ಗಿಚ್ಚಿ ಗಿಲಿ ಗಿಲಿ ತಂಡ, ಸ್ಪರ್ಧಿಗಳ ಅನುಕರಣೆ ಮಾಡಿದ ಸ್ಪರ್ಧಿಗಳು.
ಬಿಗ್ಬಾಸ್ ಮನೆಯಿಂದ ಐದನೇ ಸ್ಪರ್ಧಿ ಹೊರಗೆ ಬಂದಿದ್ದಾರೆ. ಅದುವೇ ರಘು. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ರಘು ಟಾಸ್ಕ್ ಹಾಗೂ ತಮ್ಮ ವ್ಯಕ್ತಿತ್ವದಿಂದ ಗಮನ ಸೆಳೆದಿದ್ದರು. ಇದೀಗ ಅವರು ಹೊರಗೆ ಬಂದಿದ್ದಾರೆ.
ಬಿಗ್ಬಾಸ್ ವೇದಿಕೆ ವಿಶೇಷ ಅತಿಥಿ ಬಂದಿದ್ದಾರೆ. ನಟಿ ಶ್ರುತಿ ಅವರು ಬಿಗ್ಬಾಸ್ ವೇದಿಕೆ ಬಂದಿದ್ದು, ಐದನೇ ಸ್ಪರ್ಧಿಯ ಎವಿಕ್ಷನ್ ಅನ್ನು ಶ್ರುತಿ ಅವರು ನಡೆಸಿಕೊಡಲಿದ್ದಾರೆ.
ಬಿಗ್ಬಾಸ್ ಕನ್ನಡ ಮನೆಯಲ್ಲಿ ಯಾರು ಹೆಚ್ಚು ಅತ್ತಿದ್ದಾರೆ ಯಾರು ಚೆನ್ನಾಗಿ ಅತ್ತಿದ್ದಾರೆ ಎಂಬುದನ್ನು ಗುರುತಿಸಿ, ಕಣ್ಣೀರ ಕಣ್ಮಣಿ ಪ್ರಶಸ್ತಿಯನ್ನು ರಾಶಿಕಾಗೆ ನೀಡಲಾಯ್ತು. ರಾಶಿಕಾಗೂ ಒಂದು ಲಕ್ಷ ನಗದು ಕೊಡಲಾಯ್ತು.
ಮಿಡ್ ವೀಕ್ ಎವಿಕ್ಷನ್ ಆದ ಧ್ರುವಂತ್ ಅವರಿಗೆ ಮನೆಯಿಂದ ಹೊರಗೆ ಹೋದ ಬಳಿಕ ಪ್ರಶಸ್ತಿ ಲಭಿಸಿದೆ. ಅದುವೇ ಮೈ-ಕೈ ಜಾಕ್ಸನ್. ಧ್ರುವಂತ್ ಅವರ ಡ್ಯಾನ್ಸ್ ನೋಡಿ ಮೈ-ಕೈ ಜಾಕ್ಸನ್ ಪ್ರಶಸ್ತಿ ನೀಡಲಾಗಿದೆ. ಒಂದು ಲಕ್ಷ ಬಹುಮಾನ ಸಹ ಪಡೆದಿದ್ದಾರೆ.
ಧನುಶ್ ಅವರ ಪತ್ನಿಯೊಟ್ಟಿಗೆ ಮಾತನಾಡಿದ ಸುದೀಪ್ ಅವರು, ‘ಧನುಶ್ ಅದ್ಭುತ ಆಟಗಾರ, ಅವರ ನಗು ಮಾಸಿಲ್ಲ, ಎಲ್ಲರನ್ನೂ ಗೆದ್ದಿದ್ದಾರೆ, ನನಗೆ ಅವರ ಕೈ ಎತ್ತುವ ಅವಕಾಶ ಸಿಗಲಿಲ್ಲ ಆದರೆ ಅವರ ಕೈ ಹಿಡಿದಿದ್ದೀವಿ’ ಎಂದು ಮಾರ್ಮಿಕವಾಗಿ ಹೇಳಿದರು.
ಧನುಶ್ ಅವರು ಆರನೇ ಸ್ಪರ್ಧಿಯಾಗಿ ಹೊರಗೆ ಬಂದಿದ್ದಾರೆ. ಆದರೆ ಸುದೀಪ್ ಅವರು ಧನುಶ್ ಅವರ ವ್ಯಕ್ತಿತ್ವವನ್ನು ಕೊಂಡಾಡಿದ್ದಾರೆ. ಸುದೀಪ್ ಅವರು ಖುದ್ದು ಧನುಶ್ ಅವರ ವ್ಯಕ್ತಿತ್ವವನ್ನು ಕೊಂಡಾಡಿದ್ದಾರೆ. ನನ್ನ ಮನಸ್ಸು ಗೆದ್ದಿದ್ದಾರೆ ಎಂದಿದ್ದಾರೆ.
ಮಗ ಹೊರಗಡೆ ಬಂದಿದ್ದು ನೋಡಿ ಧನುಶ್ ತಾಯಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಕೊನೆಗೆ ಧನುಶ್ ಅವರೇ ಹೋಗಿ ಅವರಿಗೆ ಸಮಾಧಾನ ಮಾಡಿದ್ದಾರೆ.
ಧನುಶ್ ಅವರು ಆರನೇ ಸ್ಪರ್ಧಿಯಾಗಿ ಬಿಗ್ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಅವರಿಗೆ 1.37 ಕೋಟಿ ಮತಗಳು ಬಂದಿವೆ. ಧನುಶ್ ಒಳ್ಳೆಯ ಸ್ಪರ್ಧಿ ಆಗಿದ್ದರು. ಆದರೆ ಇದೀಗ ಐದನೇ ರನ್ನರ್ ಅಪ್ ಆಗಿದ್ದಾರೆ
ಬಿಗ್ಬಾಸ್ ಫಿನಾಲೆ ನಡೆಯುತ್ತಿರುವ ಬಿಡದಿಯ ಜಾಲಿವುಡ್ನ ಅಭಿಮಾನಿಗಳ ದಂಡು ಧಾವಿಸುತ್ತಿದೆ. ಬಿಡದಿಗೆ ಹೋಗುವ ರಸ್ತೆಗಳೆಲ್ಲ ಟ್ರಾಫಿಕ್ ಹೆಚ್ಚಾಗುತ್ತಿದೆ.
ಬಿಗ್ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಕಾರ್ಯಕ್ರಮ ಶುರುವಾಗಿದೆ. ಮನೆಯಲ್ಲಿರುವ ಸ್ಪರ್ಧಿಗಳು, ಮನೆಯ ಒಳಗಿನಿಂದಲೇ ಡ್ಯಾನ್ಸ್ ಮಾಡಿ ಪ್ರೇಕ್ಷಕರ ಮನರಂಜಿಸಿದ್ದಾರೆ.
Boss
ಕಲರ್ಸ್ ಕನ್ನಡ ಹಾಗೂ ಜಿಯೋ ಹಾಟ್ಸ್ಟಾರ್ನಲ್ಲಿ ಪ್ರಸಾರ ಆರಂಭ ಆಗಿದೆ. ಸಂಜೆ 6 ಗಂಟೆಗೆ ಪ್ರಸಾರ ಶುರುವಾಗಿದೆ.
ಇದೇ ಬಿಗ್ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಆಗಿದ್ದ ಜಾನ್ವಿ, ಗಿಲ್ಲಿಯ ಅಭಿಮಾನಿಗಳನ್ನು, ಗಿಲ್ಲಿಗೆ ಮತ ಹಾಕುವವರನ್ನು ಆಡಿಕೊಳ್ಳುವ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಗಿಲ್ಲಿ ಅಭಿಮಾನಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಬಿಗ್ಬಾಸ್ ಕನ್ನಡ 11ನೇ ಸೀಸನ್ನ ವಿಜೇತ ಹನುಮಂತು ಟಿವಿ9 ಜೊತೆಗೆ ಮಾತನಾಡಿದ್ದು, ಈ ಬಾರಿಯ ವಿಜೇತ ಗಿಲ್ಲಿಯೇ ಎಂದಿದ್ದಾರೆ. ಸುದೀಪ್ ಹೇಳಿದ 37 ಕೋಟಿ ವೋಟು ಬಂದಿರುವುದು ಗಿಲ್ಲಿಗೇನೆ ಎಂದಿದ್ದಾರೆ.
ಫಿನಾಲೆಯಲ್ಲಿ ಆರು ಮಂದಿ ಸ್ಪರ್ಧಿಗಳಿದ್ದಾರೆ. ಗಿಲ್ಲಿ ನಟ, ಧನುಶ್, ಅಶ್ವಿನಿ ಗೌಡ, ರಘು, ಕಾವ್ಯಾ ಮತ್ತು ರಕ್ಷಿತಾ ಶೆಟ್ಟಿ. ಈ ಆರು ಮಂದಿಯಲ್ಲಿ ಒಬ್ಬರು ಈ ಬಾರಿ ವಿನ್ನರ್ ಎನಿಸಿಕೊಳ್ಳಲಿದ್ದಾರೆ.
ಬಿಗ್ಬಾಸ್ ಕನ್ನಡ ಸೀಸನ್ 12ರ ಫಿನಾಲೆಯ ಚಿತ್ರೀಕರಣ ಈಗಾಗಲೇ ಬಿಡದಿಯ ಜಾಲಿವುಡ್ ಸ್ಟುಡಿಯೋಸ್ನಲ್ಲಿ ಪ್ರಾರಂಭ ಆಗಿದೆ. ಇದೇ ಕಾರಣಕ್ಕೆ ಜಾಲಿವುಡ್ ಸ್ಟುಡಿಯೋ ಬಳಿ ಬಿಗಿ ಬಂದೋಬಸ್ತ್ ಆಯೋಜಿಸಲಾಗಿದೆ.
ಜಾಲಿವುಡ್ ಸ್ಟುಡಿಯೋದ ಗೇಟ್ನ ಎದುರು ಸ್ಪರ್ಧಿಗಳ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಪರ್ಧಿಗಳ ಫ್ಲೆಕ್ಸ್ ಬ್ಯಾನರ್ಗಳನ್ನು ಹಾಕಿದ್ದಾರೆ. ಒಟ್ಟಾರೆ ಫಿನಾಲೆಗೆ ಭಾರಿ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.
Published On - 2:52 pm, Sun, 18 January 26