ಮಾಳು ಮತ್ತು ಸ್ಪಂದನಾ ಇಬ್ಬರಲ್ಲಿ ಅಂತ್ಯವಾಗಿದ್ದು ಯಾರ ಪ್ರಯಾಣ

Bigg Boss Kannada 12: ಶನಿವಾರದ ಎಪಿಸೋಡ್​​ನಲ್ಲಿ ಎಲ್ಲರಿಗೂ ಅಚ್ಚರಿ ಆಗುವಂತೆ ಸೂರಜ್ ಅವರು ಮನೆಯಿಂದ ಹೊರಗೆ ಹೋಗಿದ್ದರು. ಸಹ ಸ್ಪರ್ಧಿಗಳು ವಿದಾಯ ಸಹ ಹೇಳಲಾಗದೆ ಸೂರಜ್ ಅವರನ್ನು ಹೊರಗೆ ಕಳಿಸಲಾಗಿತ್ತು. ಇದೀಗ ಭಾನುವಾರವೂ ಸಹ ಒಬ್ಬ ಸ್ಪರ್ಧಿ ಹೊರಗೆ ಹೋಗಿದ್ದಾರೆ. ಈ ಬಾರಿಯೂ ಅಚ್ಚರಿಯ ಸ್ಪರ್ಧಿಯನ್ನು ಹೊರಗೆ ಕಳಿಸಲಾಗಿದೆ. ಸ್ಪಂದನಾ ಮತ್ತು ಮಾಳು ನಡುವೆ ಮನೆಯಿಂದ ಹೊರಗೆ ಹೋಗಿದ್ದು ಯಾರು?

ಮಾಳು ಮತ್ತು ಸ್ಪಂದನಾ ಇಬ್ಬರಲ್ಲಿ ಅಂತ್ಯವಾಗಿದ್ದು ಯಾರ ಪ್ರಯಾಣ
Bigg Boss Kannada 12

Updated on: Dec 28, 2025 | 10:50 PM

ಮನೆಯಲ್ಲಿ ಎಲ್ಲವೂ ಪ್ರೇಕ್ಷಕ ಅಂದುಕೊಂಡಂತೆ ನಡೆಯುತ್ತಿದೆ ಎಂದುಕೊಳ್ಳುತ್ತಿರುವಾಗಲೇ ಬಿಗ್​​ಬಾಸ್ (BiggBoss) ಹೊಸದೊಂದು ಟ್ವಿಸ್ಟ್ ಕೊಡುತ್ತಾರೆ. ಈ ವಾರ ಡಬಲ್ ಎಲಿಮಿನೇಷನ್ ಎಂಬ ಸುಳಿವನ್ನು ಬಿಗ್​​ಬಾಸ್ ಮೊದಲೇ ಕೊಟ್ಟಿದ್ದರು. ಅದರಂತೆ ಶನಿವಾರದ ಎಪಿಸೋಡ್​​ನಲ್ಲಿ ಎಲ್ಲರಿಗೂ ಅಚ್ಚರಿ ಆಗುವಂತೆ ಸೂರಜ್ ಅವರು ಮನೆಯಿಂದ ಹೊರಗೆ ಹೋಗಿದ್ದರು. ಸಹ ಸ್ಪರ್ಧಿಗಳು ವಿದಾಯ ಸಹ ಹೇಳಲಾಗದೆ ಸೂರಜ್ ಅವರನ್ನು ಹೊರಗೆ ಕಳಿಸಲಾಗಿತ್ತು. ಇದೀಗ ಭಾನುವಾರವೂ ಸಹ ಒಬ್ಬ ಸ್ಪರ್ಧಿ ಹೊರಗೆ ಹೋಗಿದ್ದಾರೆ. ಈ ಬಾರಿಯೂ ಅಚ್ಚರಿಯ ಸ್ಪರ್ಧಿಯನ್ನು ಹೊರಗೆ ಕಳಿಸಲಾಗಿದೆ.

ಈ ವಾರ ಸುದೀಪ್ ಬಂದಿರಲಿಲ್ಲ ಬದಲಿಗೆ ಮಾಜಿ ಸ್ಪರ್ಧಿ, ನಟಿ ಅನುಪಮಾ ಅವರು ಬಿಗ್​​ಬಾಸ್ ಮನೆಗೆ ಬಂದು ಸ್ಪರ್ಧಿಗಳೊಟ್ಟಿಗೆ ಕೆಲವು ಫನ್ ಆಕ್ಟಿವಿಟಿಗಳನ್ನು ಮಾಡಿಸಿದರು. ಜೊತೆಗೆ ಈ ಬಾರಿ ನಾಮಿನೇಷನ್​​ನಲ್ಲಿದ್ದ ಸ್ಪರ್ಧಿಗಳಲ್ಲಿ ಕೆಲವರನ್ನು ನಾಮಿನೇಷನ್​​ನಿಂದ ಕಾಪಾಡಲು ಆಕ್ಟಿವಿಟಿ ಮಾಡಿಸಲಾಯ್ತು. ಕಾಫಿ ಕಪ್ ಆಕ್ಟಿವಿಟಿ, ಕೈಗೆ ಬಣ್ಣ ಮೆತ್ತುವ ಆಕ್ಟಿವಿಟಿಗಳನ್ನು ಆಡಿಸುವ ಮೂಲಕ ಈ ವಾರ ಬಚಾವಾದವರನ್ನು ಘೋಷಿಸಲಾಯ್ತು. ಅವುಗಳಲ್ಲಿ ರಾಶಿಕಾ, ಧ್ರುವಂತ್, ರಕ್ಷಿತಾ ಇನ್ನೂ ಕೆಲವರು ಬಚಾವಾದರು.

ಇದನ್ನೂ ಓದಿ: ಡಬಲ್ ಎಲಿಮಿನೇಷನ್​​: ಮನೆ ಮಂದಿಗೆ ಶಾಕ್ ಕೊಟ್ಟ ಬಿಗ್​​ಬಾಸ್

ಅಂತಿಮವಾಗಿ ಸ್ಪಂದನಾ ಮತ್ತು ಮಾಳು ಅವರುಗಳು ಉಳಿದುಕೊಂಡರು. ಈ ವೇಳೆ ಸ್ಪರ್ಧಿಗಳು ಕೆಲವರು ಮಾಳು ಉಳಿಯಬೇಕು ಎಂದರೆ ಕೆಲವರು ಸ್ಪಂದನಾ ಉಳಿಯಬೇಕು ಎಂದರು. ಬಳಿಕ ಬಿಗ್​​ಬಾಸ್ ಎರಡು ಕಾರುಗಳನ್ನು ಕರೆಸಿ, ಮಾಳು ಮತ್ತು ಸ್ಪಂದನಾ ತಲಾ ಒಂದು ಕಾರಿನಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದರು. ಅಂತೆಯೇ ಮಾಳು ಮತ್ತು ಸ್ಪಂದನಾ ಕಾರುಗಳಲ್ಲಿ ಕುಳಿತರು. ಎರಡೂ ಕಾರುಗಳು ಬಿಗ್​​ಬಾಸ್ ಮನೆಯಿಂದ ಹೊರಗೆ ಹೋದವು. ಆದರೆ ವಾಪಸ್ಸಾಗಿದ್ದು ಕೇವಲ ಒಂದು ಕಾರು. ಆ ಕಾರಿನಿಂದ ಸ್ಪಂದನಾ ಕೆಳಗೆ ಇಳಿದರು. ಆ ಮೂಲಕ ಮಾಳು ಬಿಗ್​​ಬಾಸ್ ಮನೆಯಿಂದ ಹೊರಗೆ ಹೋದಂತಾಯ್ತು.

ಈ ವಾರ ಸೂರಜ್ ಮತ್ತು ಮಾಳು ಅವರುಗಳು ಬಿಗ್​​ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ. ಈ ಬಾರಿ ಹೊರಗೆ ಹೋದವರ ದುರಾದೃಷ್ಟವೆಂದರೆ ಸುದೀಪ್ ಅವರನ್ನು ವೇದಿಕೆ ಮೇಲೆ ಭೇಟಿ ಆಗುವ ಅವಕಾಶವೂ ಕೈತಪ್ಪಿದೆ. ಆದರೆ ಮುಂದಿನ ವಾರ ಇವರುಗಳನ್ನು ಮತ್ತೆ ವೇದಿಕೆಗೆ ಕರೆಸುವ ಸಾಧ್ಯತೆ ಇದೆ. ಪ್ರಸ್ತುತ ಬಿಗ್​​ಬಾಸ್ ಮನೆಯಲ್ಲಿ ಅಶ್ವಿನಿ, ರಘು, ಗಿಲ್ಲಿ, ಕಾವ್ಯಾ, ಸ್ಪಂದನಾ, ರಕ್ಷಿತಾ, ಧ್ರುವಂತ್, ಧನುಶ್, ರಾಶಿಕಾ ಅವರುಗಳು ಮಾತ್ರ ಉಳಿದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಸ್ಪರ್ಧೆ ಇನ್ನಷ್ಟು ಕಠಿಣ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:49 pm, Sun, 28 December 25