ಬಿಗ್ಬಾಸ್ ಮನೆಯಲ್ಲಿ ಆಯ್ತು ಸಾಕ್ಷಾತ್ಕಾರ: ತಪ್ಪುಗಳ ಒಪ್ಪಿಕೊಂಡ ರಘು
Bigg Boss Kannada 12: ಬಿಗ್ಬಾಸ್ ಮನೆ ಕೇವಲ ಜಗಳಕ್ಕೆ ಮಾತ್ರವಲ್ಲ, ತಮ್ಮನ್ನು ತಾವು ಅರಿತುಕೊಳ್ಳಲು, ತಪ್ಪುಗಳನ್ನು ತಿದ್ದಿಕೊಳ್ಳಲು ಹೊಸ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಹ ಸಹಾಯ ಮಾಡುತ್ತದೆ. ಈ ಹಿಂದೆ ಸಹ ಹಲವು ಸ್ಪರ್ಧಿಗಳಿಗೆ ತಮ್ಮ ತಪ್ಪುಗಳನ್ನು ಅರ್ಥ ಮಾಡಿಕೊಳ್ಳಲು ಬಿಗ್ಬಾಸ್ ಮನೆ ಸಹಾಯ ಮಾಡಿದೆ. ಹೊರಗೆ ಅಹಂಕಾರ, ಸಿಟ್ಟಿನಿಂದ ಮೆರೆದವರಿಗೆ ಬಿಗ್ಬಾಸ್ ಮನೆ ತಾಳ್ಮೆ, ಸಹನೆ ಕಲಿಸಿದೆ. ಇದೀಗ ಬಿಗ್ಬಾಸ್ ಸ್ಪರ್ಧಿ ಆಗಿರುವ ರಘು ಅವರೂ ಸಹ ಬಿಗ್ಬಾಸ್ ಮನೆಗೆ ಬಂದು, ಹೊರಗೆ ತಾವು ಮಾಡುತ್ತಿದ್ದ ತಪ್ಪಿನ ಅರಿವು ಮೂಡಿಸಿಕೊಂಡಿದ್ದಾರೆ.

ಬಿಗ್ಬಾಸ್ (Bigg Boss) ಮನೆ ಎಂದರೆ ಅದು ಜಗಳದ ಮನೆ, ಕಚ್ಚಾಟ, ಗೆಲುವಿಗಾಗಿ ಪರಸ್ಪರ ಕಾಲೆಳೆತದ ಮನೆ ಎಂಬ ಅಭಿಪ್ರಾಯ ಇದೆ. ಆದರೆ ಬಿಗ್ಬಾಸ್ ಮನೆ ಕೇವಲ ಜಗಳಕ್ಕೆ ಮಾತ್ರವಲ್ಲ, ತಮ್ಮನ್ನು ತಾವು ಅರಿತುಕೊಳ್ಳಲು, ತಪ್ಪುಗಳನ್ನು ತಿದ್ದಿಕೊಳ್ಳಲು ಹೊಸ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಹ ಸಹಾಯ ಮಾಡುತ್ತದೆ. ಈ ಹಿಂದೆ ಸಹ ಹಲವು ಸ್ಪರ್ಧಿಗಳಿಗೆ ತಮ್ಮ ತಪ್ಪುಗಳನ್ನು ಅರ್ಥ ಮಾಡಿಕೊಳ್ಳಲು ಬಿಗ್ಬಾಸ್ ಮನೆ ಸಹಾಯ ಮಾಡಿದೆ. ಹೊರಗೆ ಅಹಂಕಾರ, ಸಿಟ್ಟಿನಿಂದ ಮೆರೆದವರಿಗೆ ಬಿಗ್ಬಾಸ್ ಮನೆ ತಾಳ್ಮೆ, ಸಹನೆ ಕಲಿಸಿದೆ. ಇದೀಗ ಬಿಗ್ಬಾಸ್ ಸ್ಪರ್ಧಿ ಆಗಿರುವ ರಘು ಅವರೂ ಸಹ ಬಿಗ್ಬಾಸ್ ಮನೆಗೆ ಬಂದು, ಹೊರಗೆ ತಾವು ಮಾಡುತ್ತಿದ್ದ ತಪ್ಪಿನ ಅರಿವು ಮೂಡಿಸಿಕೊಂಡಿದ್ದಾರೆ.
ರಘು ಅವರು ವೈಲ್ಡ್ ಕಾರ್ಡ್ ಎಂಟ್ರಿ ರೂಪದಲ್ಲಿ ಬಿಗ್ಬಾಸ್ ಮನೆಗೆ ಬಂದಿದ್ದಾರೆ. ನಟರಾಗಿರುವ ರಘು ಅವರು ಈ ಹಿಂದೆ ಅಡುಗೆಗೆ ಸಂಬಂಧಿಸಿದ ರಿಯಾಲಿಟಿ ಶೋ ಗೆದ್ದು ಬಿಗ್ಬಾಸ್ ಮನೆಗೆ ಬಂದಿದ್ದಾರೆ. ರಘು ಅವರು ಬಿಗ್ಬಾಸ್ ಮನೆಯಲ್ಲಿ ಚೆನ್ನಾಗಿ ಆಡುತ್ತಿದ್ದಾರೆ. ಟಾಸ್ಕ್ ಆಗಲಿ, ಮನೆ ಕೆಸವಾಗಲಿ, ಅಡುಗೆ ಮಾಡುವುದಾಗಲಿ ಎಲ್ಲದಕ್ಕೂ ಸೈ. ಯಾರೇ ರೇಗಿಸಲಿ, ತಕರಾರು ಮಾಡಲಿ ತಾಳ್ಮೆಯಿಂದ ಆಟ ಆಡುತ್ತಿದ್ದಾರೆ ರಘು. ಆದರೆ ಅವರು ಹೊರಗೆ ಹೀಗೆ ಇರಲಿಲ್ಲವಂತೆ. ಈ ಬಗ್ಗೆ ಅವರ ಕುಟುಂಬದವರು ಮಾತನಾಡಿದ್ದಾರೆ.
ಇದನ್ನೂ ಓದಿ:ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್ಬಾಸ್ ಮನೆಯ ಟಫ್ ಮ್ಯಾನ್ ರಘು
ರಘು ಅವರ ಪುತ್ರ ಮತ್ತು ಪತ್ನಿ ಬಿಗ್ಬಾಸ್ ಮನೆಗೆ ಬಂದಿದ್ದರು. ಈ ವೇಳೆ ಮಾತನಾಡಿದ ರಘು ಅವರ ಪತ್ನಿ, ‘ನಾನು ನೋಡಿರುವ ರಘು ಅವರಿಗೂ ಬಿಗ್ಬಾಸ್ ಮನೆಯಲ್ಲಿರುವ ರಘು ಅವರಿಗೂ ಅಜಗಜಾಂತರ ವ್ಯತ್ಯಾಸ ಇದೆ. ಮನೆಯಲ್ಲಿ ರಘು ಬಹಳ ಸಿಟ್ಟಿನ ವ್ಯಕ್ತಿ, ನಮ್ಮೊಂದಿಗೆ ಸರಿಯಾಗಿ ಮಾತನಾಡುವುದು ಸಹ ಇಲ್ಲ. ಎಲ್ಲದಕ್ಕೂ ರೇಗುತ್ತಿರುತ್ತಾರೆ. ಆದರೆ ಇಲ್ಲಿ ಅವರು ಬಹಳ ತಾಳ್ಮೆಯಿಂದ ಇದ್ದಾರೆ’ ಎಂದಿದ್ದಾರೆ.
‘ಯಾರಾದರೂ ಅವರ ಮೇಲೆ ಮಲಗಿಕೊಂಡರೆ, ಗಡ್ಡ ಮುಟ್ಟಿದರೆ, ಅವರ ದೇಹದ ಬಗ್ಗೆ, ವ್ಯಾಯಾಮದ ಬಗ್ಗೆ ಟೀಕೆ ಮಾಡಿದರೂ ಸಹ ಸುಮ್ಮನಿದ್ದಾರೆ. ಆದರೆ ಮನೆಯಲ್ಲಿ ಇವರು ಬಂದು ಗಾಡಿ ನಿಲ್ಲಿಸಿದರೂ ಸಹ ನಮಗೆ ಭಯ ಆಗುತ್ತಿರುತ್ತದೆ, ಕೈ ನಡುಗುತ್ತಿರುತ್ತದೆ ಅಷ್ಟು ಸಿಟ್ಟು ಮಾಡಿಕೊಳ್ಳುತ್ತಾರೆ. ಮಾತ್ರವಲ್ಲ ಯಾವೊಂದು ಕೆಲಸ ಸಹ ಮಾಡುವುದಿಲ್ಲ. ಬೆಡ್ನಿಂದ ಎದ್ದು ಫ್ಯಾನ್ ಸಹ ಆನ್ ಮಾಡಿಕೊಳ್ಳುವುದಿಲ್ಲ, ಅದಕ್ಕೂ ನನ್ನನ್ನು ಕರೆಯುತ್ತಾರೆ. ಮಾತನಾಡಲು ಬಂದರೆ ಸರಿಯಾಗಿ ಮಾತನಾಡುವುದಿಲ್ಲ, ಮಗ ಆಟ ಆಡಲು ಕರೆದರೂ ಹೋಗುವುದಿಲ್ಲ. ಆದರೆ ಇಲ್ಲಿ ಎಲ್ಲ ಮಾಡುತ್ತಿದ್ದಾರೆ ಎಂದಿದ್ದಾರೆ.
ಕುಟುಂಬದವರು ಹೋದ ಬಳಿಕ ರಘು ಸಹ ಈ ವಿಷಯವಾಗಿ ಮಾತನಾಡಿದ್ದು, ‘ನಾನು ಮನೆಯವರೊಟ್ಟಿಗೆ ಸರಿಯಾಗಿ ವರ್ತಿಸಲಿಲ್ಲ. ಅವರು ಮಾತನಾಡಲು ಬಂದಾಗ ನಾನು ಅವರೊಟ್ಟಿಗೆ ಮಾತನಾಡಿಲ್ಲ, ಮಗನೊಟ್ಟಿಗೆ ಆಟ ಸಹ ಆಡಲಿಲ್ಲ ಆದರೆ ನಾನು ಎಂಥಹ ತಪ್ಪು ಮಾಡಿದೆ ಎಂದು ನನಗೆ ಅರ್ಥ ಆಗಿದೆ’ ಎಂದು ಹೇಳಿಕೊಂಡಿದ್ದಾರೆ. ಆ ಮೂಲಕ ಹೊರಗೆ ತಾವು ಮಾಡಿದ ತಪ್ಪಿನ ಅರಿವು ಮಾಡಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:13 am, Sat, 27 December 25




