ಬಿಗ್ ಬಾಸ್ ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್; ಆ ಇಬ್ಬರು ಔಟ್?

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಅಚ್ಚರಿಯ ಟ್ವಿಸ್ಟ್‌ಗಳು ಮುಂದುವರಿದಿವೆ. ಮೊದಲ ಫಿನಾಲೆಗೂ ಮುನ್ನ ಮಿಡ್ ವೀಕ್ ಎಲಿಮಿನೇಷನ್ ನಡೆದಿದೆ. ಈ ವೇಳೆ ಇಬ್ಬರು ಸ್ಪರ್ಧಿಗಳು ದೊಡ್ಮನೆಯಿಂದ ಹೊರ ಹೋಗಿದ್ದಾರೆ ಎನ್ನಲಾಗಿದೆ. ಅಕ್ಟೋಬರ್ 18-19ರಂದು ನಡೆಯಲಿರುವ ಫಿನಾಲೆಯಲ್ಲಿ ಮತ್ತಷ್ಟು ಸ್ಪರ್ಧಿಗಳು ಎಲಿಮಿನೇಟ್ ಆಗುವ ಸಾಧ್ಯತೆ ಇದೆ.

ಬಿಗ್ ಬಾಸ್ ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್; ಆ ಇಬ್ಬರು ಔಟ್?
ಬಿಗ್ ಬಾಸ್

Updated on: Oct 16, 2025 | 6:58 AM

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (BBK 12) ಸಾಕಷ್ಟು ಟ್ವಿಸ್ಟ್​ಗಳು ಇರಲಿವೆ ಎಂಬ ಬಗ್ಗೆ ವಾಹನಿಯವರು ಮೊದಲೇ ಹೇಳಿದ್ದರು. ಈ ವಾರಾಂತ್ಯದಲ್ಲಿ ಮೊದಲ ಫಿನಾಲೆ ನಡೆಯುತ್ತಿದೆ. ಅದಕ್ಕೂ ಮೊದಲೇ ಬಿಗ್ ಬಾಸ್ ಮನೆಯಲ್ಲಿ ಬಿಗ್ ಟ್ವಿಸ್ಟ್ ಒಂದು ಸಿಗುತ್ತಿದೆ. ಈ ವಾರ ಮಿಡ್ ವೀಕ್ ಎಲಿಮಿನೇಷನ್ ನಡೆಯುತ್ತಿದ್ದು, ಇಬ್ಬರು ಸ್ಪರ್ಧಿಗಳು ದೊಡ್ಮನೆಯಿಂದ ಔಟ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

‘ಬಿಗ್ ಬಾಸ್’ ಫಿನಾಲೆ ಅಕ್ಟೋಬರ್ 18 ಹಾಗೂ 19ರಂದು ನಡೆಯಲಿದೆ. ಇದು ಕನ್ನಡದ ಪಾಲಿಗೆ ಹೊಸ ಪ್ರಯೋಗ. ಸದ್ಯ ದೊಡ್ಮನೆಯಲ್ಲಿ 17 ಮಂದಿ ಇದ್ದು, ಇವರಲ್ಲಿ ಇಬ್ಬರು ವಾರದ ಮಧ್ಯವೇ ಹೊರ ಹೋಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಬಳಿಕ ವಾರಾಂತ್ಯದಲ್ಲಿ ನಾಲ್ಕರಿಂದ ಐದು ಜನ ಔಟ್ ಆಗಬಹುದು ಎಂದು ಹೇಳಲಾಗುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ಸೋರಿಕೆ ಆಗಿರೋ ಮಾಹಿತಿ ಪ್ರಕಾರ, ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಮಿಡ್ ವೀಕ್ ಎಲಿಮಿನೇಷನ್​ನಲ್ಲಿ ಸತೀಶ್ ಹಾಗೂ ಮಂಜು ಭಾಷಿಣಿ ಔಟ್ ಆಗಿದ್ದಾರಂತೆ. ಇಂದು (ಅಕ್ಟೋಬರ್ 16) ಈ ಎಪಿಸೋಡ್ ಪ್ರಸಾರ ಕಾಣುವ ಸಾಧ್ಯತೆ ಇದೆ.

ಇದನ್ನೂ ಓದಿ
ಗಿಲ್ಲಿ ಜೊತೆಗಿನ ಗೆಳೆತನಕ್ಕಾಗಿ ಫಿನಾಲೆ ಚಾನ್ಸ್ ತ್ಯಾಗ ಮಾಡಿದ ಚಂದ್ರಪ್ರಭ?
ಮಂಗಳವಾರವೂ ‘ಕಾಂತಾರ: ಚಾಪ್ಟರ್ 1’ ಅಧಿಕ ಕಲೆಕ್ಷನ್; 500 ಕೋಟಿ ಇನ್ನೂ ಸನಿಹ
ಸ್ಪರ್ಧಿಗಳಿಗೆ ಕೊನೆಯ ಅವಕಾಶ ಕೊಟ್ಟ ‘ಬಿಗ್ ಬಾಸ್​’; ಮಾಡು ಇಲ್ಲವೇ ಮಡಿ
‘ಕಾಂತಾರ: ಚಾಪ್ಟರ್ 2’ ಯಾವಾಗ? ಕೊನೆಗೂ ಉತ್ತರಿಸಿದ ರಿಷಬ್ ಶೆಟ್ಟಿ

ಇದನ್ನೂ ಓದಿ: ‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಮೊದಲ ಫಿನಾಲೆಯಲ್ಲಿ ಹೊರ ಹೋಗೋದು ಎಷ್ಟು ಜನ?

ಈಗಾಗಲೇ ಫಿನಾಲೆಗೆ ಸ್ಪರ್ಧಿಗಳು ಆಯ್ಕೆ ಆಗಿ ಆಗಿದೆ. ಕಾಕ್ರೋಚ್ ಸುಧಿ, ಅಶ್ವಿನಿ ಗೌಡ, ಮಾಲು ಹಾಗೂ ರಾಶಿಕಾ ಫಿನಾಲೆಯಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನೂ ಕೆಲವರು ಫಿನಾಲೆಯಲ್ಲಿ ಸ್ಥಾನ ಪಡೆಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಫಿನಾಲೆ ವಿವರ

ಅಕ್ಟೋಬರ್ 18 ಹಾಗೂ 19ರಂದು ‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಮೊದಲ ಫಿನಾಲೆ ನಡೆಯಲಿದೆ. ರಾತ್ರಿ 8 ಗಂಟೆಯಿಂದ 11 ಗಂಟೆವರೆಗೆ ಶೋ ಪ್ರಸಾರ ಕಾಣಲಿದೆ. ಈ ಸಂದರ್ಭದಲ್ಲಿಯೂ ನಾಲ್ಕೈದು ಎಲಿಮಿನೇಷನ್ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಾ ಇದೆ. ಈ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಆ ಬಳಿಕ ಕೆಲವರು ವೈಲ್ಡ್ ಕಾರ್ಡ್ ಮೂಲಕ ದೊಡ್ಮೆನೆಗೆ ಎಂಟ್ರಿ ಪಡೆಯೋ ಸಾಧ್ಯತೆ ಇದೆ. ಶ್ವೇತಾ ಪ್ರಸಾದ್ ಮೊದಲಾದವರ ಹೆಸರು ಈಗ ಚಾಲ್ತಿಯಲ್ಲಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:58 am, Thu, 16 October 25