AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಈ ವಾರ ಚಪ್ಪಾಳೆ ಅಲ್ಲ, ಚಪ್ಪಲಿ ಏಟು’; ವೀಕೆಂಡ್ ಎಪಿಸೋಡ್​ಗೆ ಭಯಬಿದ್ದ ಸ್ಪರ್ಧಿಗಳು

ಬಿಗ್ ಬಾಸ್ ಕನ್ನಡ 13ನೇ ಸೀಸನ್‌ನ ನಾಲ್ಕನೇ ವಾರದಲ್ಲಿ ಸ್ಪರ್ಧಿಗಳು ಮಾಡಿದ ತಪ್ಪಿನಿಂದ ಕ್ಯಾಪ್ಟನ್ಸಿ ಟಾಸ್ಕ್ ರದ್ದಾಗಿದೆ. ಇದರಿಂದ ಕಿಚ್ಚ ಸುದೀಪ್ ಅವರಿಂದ ವಾರ್ನಿಂಗ್ ಸಿಗುವ ಭಯ ಮನೆ ಮಂದಿಗೆ ಶುರುವಾಗಿದೆ. ತಾಂಡವ್ ರಾಮ್‌ಗೆ ಕ್ಯಾಪ್ಟನ್ಸಿ ನೀಡಿದ ನಿರ್ಧಾರದ ಬಗ್ಗೆಯೂ ವೀಕ್ಷಕರಲ್ಲಿ ತೀವ್ರ ಚರ್ಚೆ ಹಾಗೂ ಕುತೂಹಲ ಮೂಡಿದ್ದು, ವೀಕೆಂಡ್ ಎಪಿಸೋಡ್‌ಗಾಗಿ ಕಾಯುತ್ತಿದ್ದಾರೆ.

‘ಈ ವಾರ ಚಪ್ಪಾಳೆ ಅಲ್ಲ, ಚಪ್ಪಲಿ ಏಟು’; ವೀಕೆಂಡ್ ಎಪಿಸೋಡ್​ಗೆ ಭಯಬಿದ್ದ ಸ್ಪರ್ಧಿಗಳು
ಬಿಗ್ ಬಾಸ್ Image Credit source: Colors Kannada
ರಾಜೇಶ್ ದುಗ್ಗುಮನೆ
|

Updated on:Oct 02, 2026 | 7:04 AM

Share

ಮುಖ್ಯಾಂಶಗಳು

  • ‘ಚಪ್ಪಾಳೆ ಅಲ್ಲ, ಚಪ್ಪಲಿ ಏಟು’
  • ವೀಕೆಂಡ್ ಕ್ಲಾಸ್‌ಗೆ ಬೆದರಿದ ಬಿಗ್ ಬಾಸ್ ಸ್ಪರ್ಧಿಗಳು
  • ಸುದೀಪ್ ಪಂಚಾಯಿತಿಯಲ್ಲಿ ಸಿಗಲಿದೆಯೇ ಕಠಿಣ ಶಿಕ್ಷೆ?

‘ಬಿಗ್ ಬಾಸ್ ಕನ್ನಡ ಸೀಸನ್ 13’ರ ನಾಲ್ಕನೇ ವಾರ ಸಾಕಷ್ಟು ಡ್ರಾಮಾಗಳನ್ನು ಒಳಗೊಂಡಿದೆ. ಈ ಡ್ರಾಮಾಗಳನ್ನು ನೋಡಿ ವೀಕ್ಷಕರು ಸೋಶಿಯ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಹೀಗಿರುವಾಗಲೇ ಎಲ್ಲಾ ಸ್ಪರ್ಧಿಗಳು ವೀಕೆಂಡ್ ಎಪಿಸೋಡ್​ ಬಗ್ಗೆ ಚಿಂತೆಯಲ್ಲಿದ್ದಾರೆ. ತಾವು ಮಾಡಿದ ತಪ್ಪುಗಳ ಬಗ್ಗೆ ಎಲ್ಲರಿಗೂ ಅರಿವಿದೆ. ಈ ಕಾರಣದಿಂದ ಸುದೀಪ್ ಕ್ಲಾಸ್ ಬಗ್ಗೆ ಭಯ ಶುರುವಾಗಿದೆ.

ಬಿಗ್ ಬಾಸ್ 13ನೇ ಸೀಸನ್ ಅಲ್ಲಿ ಪ್ರತಿ ವಾರ ಸುದೀಪ್ ಅವರು ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಸ್ಪರ್ಧಿಗಳು ಪದೇ ಪದೇ ತಪ್ಪು ಮಾಡುತ್ತಿರುವುದೇ ಇದಕ್ಕೆ ಕಾರಣ. ಆ ಕ್ಲಾಸ್ ಈ ವಾರವೂ ಮುಂದುವರಿಯುವುದು ಸ್ಪಷ್ಟವಾಗಿದೆ. ಬಿಗ್ ಬಾಸ್ ಸ್ಪರ್ಧಿಗಳು ಮಾಡಿದ ತಪ್ಪಿನಿಂದ ಕ್ಯಾಪ್ಟನ್ಸಿ ಟಾಸ್ಕ್ ರದ್ದಾಗಿದೆ. ಇದು ಎಷ್ಟು ದೊಡ್ಡ ತಪ್ಪು ಎಂಬುದು ಸ್ಪರ್ಧಿಗಳಿಗೆ ಸ್ಪಷ್ಟವಾಗಿ ಅರಿವಾಗಿದೆ. ಹೀಗಾಗಿ, ವೀಕೆಂಡ್ ಎಪಿಸೋಡ್ ಬಗ್ಗೆ ಭಯ ಶುರುವಾಗಿದೆ. ಈ ಬಗ್ಗೆ ಮನೆ ಮಂದಿ ಮಾತನಾಡಿಕೊಂಡಿದ್ದಾರೆ.

ಯಶಸ್, ಲಿಖಿತ್ ಹಾಗೂ ಮಂಜು ಅವರು ಒಂದು ಕಡೆ ನಿಂತು ಮಾತನಾಡುತ್ತಿದ್ದರು. ಈ ವೇಳೆ ಮಂಜು ಅವರು, ‘ನನ್ನ ಭವಿಷ್ಯ ಅತಿ ಸುಂದರವಾಗಿ ಕಾಣಿಸುತ್ತಿದೆ. ಬಹಳವೇ ಸ್ಪಷ್ಟವಾಗಿ ಕಾಣಿಸುತ್ತಿದೆ’ ಎಂದು ಹೇಳಿದ್ದಾರೆ. ಅಂದರೆ ವೀಕೆಂಡ್ ಎಪಿಸೋಡ್​ನಲ್ಲಿ ಸುದೀಪ್ ಯಾವ ರೀತಿಯಲ್ಲಿ ಕ್ಲಾಸ್ ತೆಗೆದುಕೊಳ್ಳಬಹುದು ಎಂಬುದು ನನಗೆ ಗೊತ್ತಾಗುತ್ತಿದೆ ಎಂಬುದು ಅವರ ಮಾತು.

‘ಈ ವಾರ ಚಪ್ಪಾಳೆ ಅಲ್ಲ, ಚಪ್ಪಲಿ ಏಟು’ ಎಂದರು ಲಿಖಿತ್. ‘ಈ ವಾರ ಧ್ವಂಸ ಅಲ್ಲ, ಗುಡ್ಡೆ ಮಾಂಸ’ ಎಂದರು ಮಂಜು. ಒಟ್ಟಿನಲ್ಲಿ ಈ ವಾರ ಬಹುತೇಕ ಎಲ್ಲಾ ಸ್ಪರ್ಧಿಗಳು ಪಾಠ ಹೇಳಿಸಿಕೊಳ್ಳುವುದು ಬಹುತೇಕ ಸ್ಪಷ್ಟ ಎಂಬಂತಾಗಿದೆ. ವೀಕ್ಷಕರು ಕೂಡ ವೀಕೆಂಡ್​ ಎಪಿಸೋಡ್​​ಗಾಗಿ ಕಾಯುತ್ತಾ ಇದ್ದಾರೆ.

ಇದನ್ನೂ ಓದಿ: ‘ನೀವು ಯಾರೂ ಅರ್ಹರಲ್ಲ’: ಸ್ಪರ್ಧಿಗಳಿಗೆ ನೇರವಾಗಿ ಛೀಮಾರಿ ಹಾಕಿದ ಬಿಗ್ ಬಾಸ್

ಬಿಗ್ ಬಾಸ್ ಮನೆಗೆ ಮರಳಿರುವ ತಾಂಡವ್ ರಾಮ್ ಅವರಿಗೆ ಕ್ಯಾಪ್ಟನ್ ಪಟ್ಟ ಕೊಡಲಾಗಿದೆ. ಅವರಿಗೆ ಕ್ಯಾಪ್ಟನ್ಸಿ ಕೊಡಬೇಕು ಎಂಬ ಕಾರಣದಿಂದಲೇ ಬಿಗ್ ಬಾಸ್ ಕ್ಯಾಪ್ಟನ್ಸಿ ಟಾಸ್ಕ್ ರದ್ದು ಮಾಡಿದರೇ ಎನ್ನುವ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:04 am, Fri, 2 October 26

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ