AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತಮವಾಗಿ ಟಾಸ್ಕ್ ಆಡಿದರೂ ಕಳಪೆ ಆದ ಗಾನವಿ; ಉಸ್ತುವಾರಿ ವಿಷಯದಲ್ಲಿ ಮನೆಯವರ ಮೌನ

‘ಬಿಗ್ ಬಾಸ್ ಕನ್ನಡ 13’ರಲ್ಲಿ ಉಸ್ತುವಾರಿಗಳ ಎಡವಟ್ಟಿನಿಂದಾಗಿ ಕ್ಯಾಪ್ಟನ್ಸಿ ಟಾಸ್ಕ್ ರದ್ದಾಗಿದೆ. ಅತ್ಯುತ್ತಮವಾಗಿ ಆಟವಾಡಿ ತಂಡವನ್ನು ಗೆಲ್ಲಿಸಿದ ವೈಲ್ಡ್ ಕಾರ್ಡ್ ಸ್ಪರ್ಧಿ ಗಾನವಿಗೆ ಮನೆಯವರು 'ಕಳಪೆ' ನೀಡಿದ್ದಾರೆ. ಅಸಲಿಗೆ ಕಳಪೆಗೆ ಅರ್ಹರಾಗಿದ್ದ ಮಂಜು ಮತ್ತು ಲಿಖಿತ್ ಬಚಾವ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಉತ್ತಮವಾಗಿ ಟಾಸ್ಕ್ ಆಡಿದರೂ ಕಳಪೆ ಆದ ಗಾನವಿ; ಉಸ್ತುವಾರಿ ವಿಷಯದಲ್ಲಿ ಮನೆಯವರ ಮೌನ
ಗಾನವಿ
ರಾಜೇಶ್ ದುಗ್ಗುಮನೆ
|

Updated on: Oct 01, 2026 | 8:46 AM

Share

ಮುಖ್ಯಾಂಶಗಳು

  • ಉತ್ತಮವಾಗಿ ಆಡಿ ತಂಡ ಗೆಲ್ಲಿಸಿದರೂ ಸಿಕ್ಕಿತು 'ಕಳಪೆ'
  • ಗಾನವಿ ವಿಷಯದಲ್ಲಿ ಅನ್ಯಾಯವಾಯ್ತಾ?
  • ಮೊದಲ ವಾರವೇ ಗಾನವಿಗೆ ದೊಡ್ಡ ಶಾಕ್ ಕೊಟ್ಟ ಮನೆಮಂದಿ

‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಈ ವಾರ ಕ್ಯಾಪ್ಟನ್ಸಿ ಟಾಸ್ಕ್ ರದ್ದಾಗಿದೆ. ಇದಕ್ಕೆ ಕಾರಣ ಆಗಿದ್ದು ಉಸ್ತುವಾರಿಗಳ ನಡೆ. ಟಾಸ್ಕ್​​ನ ಸರಿಯಾಗಿ ಅರ್ಥ ಮಾಡಿಕೊಳ್ಳದೆ, ಮನಸ್ಸಿಗೆ ಬಂದಂತೆ ರೂಲ್ಸ್ ಮಾಡಿ ಇಡೀ ಆಟವನ್ನು ಹಾಳು ಮಾಡಿದರು. ಅದು ಯಾವ ಹಂತಕ್ಕೆ ಹೋಯಿತು ಎಂದರೆ ಬಿಗ್ ಬಾಸ್ ಟಾಸ್ಕ್ ಅನ್ನೇ ರದ್ದು ಮಾಡಬೇಕಾದ ಪರಿಸ್ಥಿತಿ ಬಂತು. ಈ ವಿಷಯದಲ್ಲಿ ಮನೆಯವರು ಮೌನ ತಾಳಿದ್ದಾರೆ. ಉತ್ತಮವಾಗಿ ಆಡಿದ ಗಾನವಿಗೆ ಕಳಪೆ ಕೊಟ್ಟಿದ್ದಾರೆ.

ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟವರು ಗಾನವಿ. ಈ ಮೊದಲು ಹಳ್ಳಿ ಪವರ್ ಶೋ ಮೂಲಕ ಮಿಂಚಿದ್ದ ಗಾನವಿ ಈ ಬಾರಿ ಬಿಗ್ ಬಾಸ್ ಶೋಗೆ ಬಂದು ಮಿಂಚುತ್ತಿದ್ದಾರೆ. ಟಾಸ್ಕ್ ವೇಳೆ ಅವರು ಭಾರವನ್ನು ಎತ್ತಿ ಹಿಡಿಯಬೇಕಿತ್ತು. ಈ ಟಾಸ್ಕ್​ನಲ್ಲಿ ಉತ್ತಮವಾಗಿ ಆಡಿದರು. ಆದರೆ, ಅವರಿಗೆ ಇದಕ್ಕೆ ಪ್ರತಿಯಾಗಿ ಸಿಕ್ಕಿದ್ದು ಬೈಗುಳ. ಸೌಂದರ್ಯಾ ಶೆಟ್ಟಿ ಅವರು ಗಾನವಿಯನ್ನು ಟೀಕಿಸಲು ಶುರು ಮಾಡಿದರು. ಇಡೀ ತಂಡ ಅವರ ವಿರುದ್ಧ ತಿರುಗಿ ಬೀಳುವಂತೆ ಆಯಿತು. ಗಾನವಿ ತಂಡ ಗೆದ್ದರೂ ಯಾರೊಬ್ಬರಿಗೂ ಖುಷಿ ಇರಲಿಲ್ಲ.

ಗಾನವಿ ಅವರು ತಂಡದ ನಾಯಕಿ ಆಗಿ ಎಲ್ಲರನ್ನೂ ಸಂಭಾಳಿಸಿಕೊಂಡು ಹೋಗಿ ತಂಡಕ್ಕೆ ಗೆಲುವು ಕೊಟ್ಟರೂ ಯಾವುದೇ ಪ್ರಯೋಜನ ಆಗಿಲ್ಲ. ಅವರಿಗೆ ಮೊದಲ ವಾರವೇ ಕಳಪೆ ಸಿಕ್ಕಿದೆ. ಗಗನ್ ಸೇರಿದಂತೆ ಮನೆಯ ಅನೇಕರು ಗಾನವಿಗೆ ಕಳಪೆ ನೀಡಿದ್ದಾರೆ.

ಇದನ್ನೂ ಓದಿ: ಗಾನವಿ ವಿರುದ್ಧ ಸಿಡಿದೆದ್ದ ಸೋನಿಕಾ: ವೈಲ್ಡ್ ಕಾರ್ಡ್ ಸ್ಪರ್ಧಿಗಳ ನಡುವೆಯೇ ಜಗಳ

ಗಾನವಿ ಕಳಪೆಗೆ ಅರ್ಹರೋ ಅಥವಾ ಇಲ್ಲವೋ ಎಂಬುದು ವೀಕ್ಷಕರ ದೃಷ್ಟಿಕೋನಕ್ಕೆ ಬಿಟ್ಟ ವಿಷಯ. ಆದರೆ, ಮಂಜು ಹಾಗೂ ಲಿಖಿತ್ ಈ ವಾರದ ಕಳಪೆಗೆ ಹೇಳಿ ಮಾಡಿಸಿದವರು. ಅವರ ಉಸ್ತುವಾರಿಯಿಂದ ಇಡೀ ವಾರದ ಶ್ರಮ ವ್ಯರ್ಥವಾಗಿದೆ. ಒಬ್ಬರಿಗೆ ಒಲಿಯಬೇಕಿದ್ದ ಕ್ಯಾಪ್ಟನ್ಸಿ ಕೂಡ ಮಿಸ್ ಆಗಿದೆ. ಒಬ್ಬರಿಗೆ ಕ್ಯಾಪ್ಟನ್ಸಿ ಮಿಸ್ ಆಗಿರುವುದು ಇಲ್ಲಿ ಯಾರಿಗೂ ದೊಡ್ಡದು ಎನಿಸಿಯೇ ಇಲ್ಲ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More