
ಬಿಗ್ಬಾಸ್ ಕನ್ನಡದ (Bigg Boss Kannada) ಹೊಸ ಸೀಸನ್ ಈ ಬಾರಿ ತುಸು ಮುಂಚಿತವಾಗಿಯೇ ಶುರು ಆಗಲಿದೆ. ಅದು ಮಾತ್ರವೇ ಅಲ್ಲದೆ, ಈ ಬಾರಿ ಬಿಗ್ಬಾಸ್ ಕನ್ನಡಕ್ಕೆ ಸೆಲೆಬ್ರಿಟಿಗಳ ಜೊತೆಗೆ ಜನಸಾಮಾನ್ಯರ ಎಂಟ್ರಿಗೂ ಅವಕಾಶ ನೀಡಲಾಗಿದ್ದು, ಇದಕ್ಕಾಗಿ ಜನ ಅರ್ಜಿ ಸಲ್ಲಿಸಿ, ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಬೇಕಿದೆ. ಕಲರ್ಸ್ ವಾಹಿನಿಯು ಸಾಮಾನ್ಯರು ತಮ್ಮ ಎಂಟ್ರಿ ಕಳಿಸಲು ವಿಶೇಷ ವ್ಯವಸ್ಥೆಯನ್ನು ಮಾಡಿದ್ದು, ಆಡಿಷನ್ ವಿಡಿಯೋ ಮಾಡಿ ಅದನ್ನು ಕಲರ್ಸ್ ವಾಹಿನಿ ಸೂಚಿಸಿರುವ ಲಿಂಕ್ಗೆ ಕಳಿಸಬೇಕು, ಕೇವಲ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದರೆ ಸಾಲದು. ಆದರೆ ಆಡಿಷನ್ ವೇಳೆ ಸಾಕಷ್ಟು ಜನ ವಾಹಿನಿ ಹೇಳಿರುವ ನಿಯಮಗಳನ್ನು ಮರೆತು ಆಡಿಷನ್ ವಿಡಿಯೋ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಇದೀಗ ವಾಹಿನಿಯೂ ಮತ್ತೊಮ್ಮೆ ನಿಯಮಗಳನ್ನು ನೆನಪಿಸಿದೆ.
ಕಲರ್ಸ್ ವಾಹಿನಿಯು ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದನ್ನು ಹಂಚಿಕೊಂಡಿದ್ದು, ಆಡಿಷನ್ ವಿಡಿಯೋ ಮಾಡುವಾಗ ಕಡ್ಡಾಯವಾಗಿ ನಾಲ್ಕು ಹಂತಗಳನ್ನು ಪಾಲಿಸಲೇ ಬೇಕು ಎಂದು ವಾಹಿನಿ ಹೇಳಿದೆ. ಆ ಹಂತಗಳು ಇಂತಿವೆ, ‘ವಿಡಿಯೋ ಮಾಡುವಾಗ ನಿಮ್ಮ ವಿಶೇಷತೆ ಏನು? ಬಿಗ್ಬಾಸ್ನಲ್ಲಿ ಭಾಗವಿಸಲು ನೀವು ಏಕೆ ಸೂಕ್ತ ವ್ಯಕ್ತಿ? ಸ್ಪರ್ಧೆಯಲ್ಲಿ ನಿಮ್ಮಿಂದ ನಾವು ಏನು ನಿರೀಕ್ಷಿಸಬಹುದು? ಎಂಬುದನ್ನು ಸ್ಪಷ್ಟವಾಗಿ ಹೇಳಿ’ ಎಂದು ವಾಹಿನಿ ಹೇಳಿದೆ.
ಗಮನಿಸಿ!! ಬಿಗ್ ಬಾಸ್ ಆಡಿಷನ್ ವೀಡಿಯೋದಲ್ಲಿ ಏನೇನಿರಬೇಕು, ಇಲ್ಲಿದೆ ನೋಡಿ!#BiggBossKannada13 #BBK13 #BBKAuditions #ColorsKannada #ಕಲರ್ಫುಲ್ಕತೆ #colorfulstory #KicchaSudeep #CKEngage pic.twitter.com/GjkZlT5Soo
— Colors Kannada (@ColorsKannada) June 13, 2026
‘ಬಿಗ್ಬಾಸ್, ಪ್ರತಿಭೆ, ಆತ್ಮವಿಶ್ವಾಸ, ಟ್ಯಾಲೆಂಟ್ ಅನ್ನು ತೋರಿಸಲು ಸೂಕ್ತವಾದ ವೇದಿಕೆ. ಇಲ್ಲಿಗೆ ಅರ್ಹತೆ ಪಡೆಯಲು ನೀವೆಷ್ಟು ಸೂಕ್ತವಾದ ವ್ಯಕ್ತಿ ಎಂಬುದನ್ನು ಸ್ಪಷ್ಟವಾಗಿ ಹೇಳಿ’ ಎಂದು ವಾಹಿನಿ ಹೇಳಿದೆ. ಮುಂದುವರೆದು, ‘ಬಿಗ್ಬಾಸ್ ಆಡಿಷನ್ನಲ್ಲಿ ಭಾಗವಹಿಸಲು ಜನ ತೋರುತ್ತಿರುವ ಉತ್ಸಾಹ ನಮ್ಮನ್ನು ಅಚ್ಚರಿಗೊಳಿಸಿದೆ. ಆದರೆ ಉತ್ಸಾಹದ ಭರದಲ್ಲಿ ಆಡಿಷನ್ ವಿಡಿಯೋ ಕಳಿಸುವಾಗ ನಾಲ್ಕು ಹಂತಗಳನ್ನು ಮರೆಯುವುದು ಬೇಡ’ ಎಂದು ವಾಹಿನಿ ಮನವಿ ಮಾಡಿದೆ.
ಇದನ್ನೂ ಓದಿ:ಮತ್ತೆ ತೆಲುಗಿಗೆ ಹೊರಟ ರುಕ್ಮಿಣಿ ವಸಂತ್, ಸ್ಟಾರ್ ನಟನ ಸಿನಿಮಾ
ಬಿಗ್ಬಾಸ್ ನಲ್ಲಿ ಭಾಗವಹಿಸಲು ಸಾಮಾನ್ಯ ಜನರು ಆಡಿಷನ್ ನೀಡಬೇಕಿದೆ. ಈ ಹಿಂದೆ ಕೆಲ ಬಾರಿ ಸಾಮಾನ್ಯರನ್ನು ಬಿಗ್ಬಾಸ್ಗೆ ಸೇರಿಸಿಕೊಳ್ಳಲಾಗಿತ್ತು. ಆದರೆ ಶೋನಲ್ಲಿ ಗಮನ ಸೆಳೆದ ಸಾಮಾನ್ಯರು ತುಸು ಕಡಿಮೆಯೇ. ಕಳೆದ ಬಾರಿ ಗಿಲ್ಲಿ ಗೆಲ್ಲುವ ಮೂಲಕ ಗ್ರಾಮೀಣ ಪ್ರತಿಭೆಗಳು ಶೋಗೆ ಕಳೆ ತಂದುಕೊಡುತ್ತಾರೆಂಬುದನ್ನು ಗಮನಿಸಿರುವ ಬಿಗ್ಬಾಸ್, ಈ ಬಾರಿ ಸಾಮಾನ್ಯರನ್ನು ಶೋಗೆ ಕರೆದುಕೊಂಡು ಬರುವ ನಿರ್ಧಾರ ಕೈಗೊಂಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:19 pm, Sat, 13 June 26