
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ (BBK 12) ಕಳೆದ ವಾರ ಸುದೀಪ್ ಅವರು ಆಗಮಿಸಿರಲಿಲ್ಲ ಎಂಬುದು ಗೊತ್ತೇ ಇದೆ. ಅವರು ‘ಮಾರ್ಕ್’ ಚಿತ್ರದ ಪ್ರಚಾರದಲ್ಲಿ ಬ್ಯುಸಿ ಇದ್ದರು. ತಮ್ಮ ಸಿನಿಮಾನ ರಕ್ಷಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಅವರಿಗೆ ಇದೆ. ಹೀಗಾಗಿ, ಬಿಗ್ ಬಾಸ್ಗೆ ಅವರು ಬರಲಿಲ್ಲ. ಬದಲಿಗೆ ಸೆಲೆಬ್ರಿಟಿಗಳ ದಂಡು ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಬಂದರು. ಈ ಪೈಕಿ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ತಂಡ ಗಮನ ಸೆಳೆಯಿತು. ಹೊಸ ಎರಡು ಪಾತ್ರಕ್ಕೆ ಅವರು ಆಡಿಷನ್ ಕೂಡ ಮಾಡಿದರು ಎಂದರೆ ನೀವು ನಂಬಲೇಬೇಕು.
ಕಳೆದ ಸೀಸನ್ ಅಲ್ಲಿ ‘ಬಾಯ್ಸ್ vs ಗರ್ಲ್ಸ್’ ಶೋ ನಡೆಯಿತು. ಅದಕ್ಕೂ ಮೊದಲು ಬಿಗ್ ಬಾಸ್ ಮನೆಗೆ ಬಂದ ಈ ಶೋನ ಸ್ಪರ್ಧಿಗಳು ಭರ್ಜರಿಯಾಗಿ ಆಡಿಷನ್ ಮಾಡಿದರು. ಚೈತ್ರಾ ಕುಂದಾಪುರ, ರಜತ್, ಧನರಾಜ್, ಹನುಮಂತ ಮೊದಲಾದವರನ್ನು ಬಿಗ್ ಬಾಸ್ನಲ್ಲೇ ಆಡಿಷನ್ ಮಾಡಿ ಕರೆದುಕೊಂಡು ಹೋಗಲಾಯಿತು. ಈ ಬಾರಿಯೂ ಅದೇ ರೀತಿ ಮಾಡುವ ಸೂಚನೆಯನ್ನು ಬಿಗ್ ಬಾಸ್ ಅಲ್ಲಿ ನೀಡಲಾಯಿತು.
‘ಭಾಗ್ಯಲಕ್ಷ್ಮೀ’ ಧಾರಾವಾಹಿಯ ಮುಖ್ಯಪಾತ್ರಧಾರಿಗಳಾದ ಸುಷ್ಮಾ ರಾವ್ ಹಾಗೂ ಸುದರ್ಶನ್ ರಂಗಪ್ರಸಾದ್ ಅವರು ಬಿಗ್ ಬಾಸ್ ಮನೆಗೆ ಬಂದರು. ಬರುತ್ತಿದ್ದಂತೆ ಅವರು ಒಂದು ವಿಷಯ ತಿಳಿಸಿದರು. ‘ನಮ್ಮ ಧಾರಾವಾಹಿಯಲ್ಲಿ ಎರಡು ಹೊಸ ಪಾತ್ರಧಾರಿಗಳು ಬರುತ್ತಿದ್ದಾರೆ. ಇದಕ್ಕಾಗಿ ನಾವು ಆಡಿಷನ್ ಮಾಡುತ್ತಿದ್ದೇವೆ’ ಎಂದರು. ಆಗ ಸ್ಪಂದನಾ ಅವರು, ‘ಮುಗಿಯದ ಕಥೆ’ ಎಂದರು.
‘ನಾವು ಆಡಿಷನ್‌ಗೆ ಕೇವಲ ಕಲಾವಿದರನ್ನು ಮಾತ್ರ ಆಯ್ಕೆ ಮಾಡುತ್ತಾ ಇಲ್ಲ. ಕಲಾವಿದರು ಅಲ್ಲದವರನ್ನೂ ಆಯ್ಕೆ ಮಾಡುತ್ತಿದ್ದೇವೆ’ ಎಂದರು ಸುಷ್ಮಾ. ಆಗ ಎಲ್ಲರೂ ಅಚ್ಚರಿ ಹೊರಹಾಕಿದರು. ‘ರಕ್ಷಿತಾ ಹಾಗೂ ರಘು ಅವರನ್ನು ನಾವು ಆಯ್ಕೆ ಮಾಡಿದ್ದೇವೆ. ಅವರಿಗೆ ಆಡಿಷನ್ ಮಾಡುತ್ತೇವೆ’ ಎಂದರು ಸುಷ್ಮಾ. ರಘು ಅವರು ನಾವು ನಟಿಸೋಲ್ಲ ಎಂದರು.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ರಘು, ಅಶ್ವಿನಿ ಗೌಡ ಸ್ವಯಂವರ? ಗಿಲ್ಲಿ ನಟ ಶಾಕ್
ನಂತರ ರಕ್ಷಿತಾ ಹಾಗೂ ಆಡಿಷನ್ ಮಾಡಿದರು. ಆದರೆ, ಆಡಿಷನ್ ಬಳಿಕ ಇದು ಗಂಭೀರವಾಗಿ ಹೇಳಿದ್ದು ಅಲ್ಲ ಎಂಬುದು ಗೊತ್ತಾಗಿದೆ. ಆದರೆ, ಈ ವಿಷಯವನ್ನು ಅವರು ಎಲ್ಲಿಯೂ ಉಲ್ಲೇಖಿಸಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.