ಕಾಮಿಡಿ ವಿಷಯದಲ್ಲಿ ಗಿಲ್ಲಿನ ತೆಗಳಿದ್ದ ಧನುಷ್​​ಗೆ ತಾಯಿಯಿಂದಲೇ ಮುಖಭಂಗ

ಬಿಗ್ ಬಾಸ್ ಮನೆಯಲ್ಲಿ ಫ್ಯಾಮಿಲಿ ವೀಕ್ ನಡೆಯುತ್ತಿದ್ದು, ಧನುಷ್ ತಾಯಿ ದೊಡ್ಮನೆಗೆ ಆಗಮಿಸಿದ್ದಾರೆ. ಯಾವಾಗಲೂ ಗಿಲ್ಲಿ ಕಾಮಿಡಿಯನ್ನು ಟೀಕಿಸುತ್ತಿದ್ದ ಧನುಷ್‌ಗೆ ಅವರ ತಾಯಿಯಿಂದಲೇ ಮುಖಭಂಗವಾಗಿದೆ. ತಾಯಿ ಗಿಲ್ಲಿ ಕಾಮಿಡಿಯನ್ನು ಬಹುವಾಗಿ ಮೆಚ್ಚಿ, 'ಗಿಲ್ಲಿ ಇಲ್ಲದಿದ್ದರೆ ಬೇಸರವಾಗುತ್ತಿತ್ತು' ಎಂದು ಹೇಳಿದ್ದಾರೆ. ಇದು ಧನುಷ್ ಹಾಗೂ ಇಡೀ ಮನೆಯವರಿಗೆ ಅಚ್ಚರಿ ಮೂಡಿಸಿದೆ. ಗಿಲ್ಲಿಯ ಜನಪ್ರಿಯತೆಯನ್ನು ಇದು ಸಾರಿ ಹೇಳಿದೆ.

ಕಾಮಿಡಿ ವಿಷಯದಲ್ಲಿ ಗಿಲ್ಲಿನ ತೆಗಳಿದ್ದ ಧನುಷ್​​ಗೆ ತಾಯಿಯಿಂದಲೇ ಮುಖಭಂಗ
ಬಿಗ್ ಬಾಸ್

Updated on: Dec 25, 2025 | 7:31 AM

ಬಿಗ್ ಬಾಸ್ ಮನೆಯಲ್ಲಿ ಈ ವಾರ ಫ್ಯಾಮಿಲಿ ವೀಕ್ ನಡೆಯುತ್ತಿದೆ. ವಿವಿಧ ಸ್ಪರ್ಧಿಗಳ ಕುಟುಂಬದವರು ದೊಡ್ಮನೆಗೆ ಆಗಮಿಸಿ ಸ್ಪರ್ಧಿಗಳಿಗೆ ಹುರುಪು ತುಂಬುತ್ತಾ ಇದ್ದಾರೆ. ಈಗ ಧನುಷ್​​ಗೆ ತಾಯಿಯಿಂದಲೇ ಮುಖಭಂಗ ಆಗಿದೆ. ಗಿಲ್ಲಿ ಕಾಮಿಡಿ ವಿಷಯದಲ್ಲಿ ಯಾವಾಗಲೂ ಧನುಷ್ ತಕರಾರರು ತೆಗೆಯುತ್ತಲೇ ಇದ್ದರು. ಗಿಲ್ಲಿಯನ್ನು ನಾಮಿನೇಟ್ ಮಾಡಲು ಧನುಷ್ ಕೊಡುತ್ತಿದ್ದ ಕಾರಣಗಳೇ ಇದಾಗಿತ್ತು. ಆದರೆ, ಗಿಲ್ಲಿಗೆ ಧನುಷ್ ತಾಯಿ ಮೆಚ್ಚುಗೆ ಸೂಚಿಸಿದರು.

ಧನುಷ್ ಅವರು ಯಾವಾಗಲೂ ಗಿಲ್ಲಿ ಬಗ್ಗೆ ಕಂಪ್ಲೇಂಟ್ ಮಾಡುತ್ತಲೇ ಬರುತ್ತಿದ್ದಾರೆ. ಗಿಲ್ಲಿ ಉತ್ತಮವಾಗಿ ಆಡೋದಿಲ್ಲ, ಹಾಸ್ಯದ ಮೂಲಕ ಎಲ್ಲರಿಗೂ ನೋವುಂಟು ಮಾಡುತ್ತಾನೆ ಎಂದೆಲ್ಲ ಹೇಳುತ್ತಿದ್ದರು. ಆದರೆ, ಹೊರಗಿನ ಪ್ರಪಂಚ ಗಿಲ್ಲಿಯನ್ನು ನೋಡುತ್ತಿರುವ ರೀತಿಯೇ ಬೇರೆ ಎನ್ನೋದು ಧನುಷ್​​ಗೆ ಈಗ ಅರ್ಥವಾದಂತೆ ಇದೆ. ಅದು ಕೂಡ ಧನುಷ್ ತಾಯಿ ಕಡೆಯಿಂದಲೇ ಎಂಬುದು ವಿಶೇಷ.

ಧನುಷ್ ತಾಯಿ ಗಿಲ್ಲಿಯನ್ನು ಹಾಡಿ ಹೊಗಳಿದ್ದಾರೆ. ‘ಗಿಲ್ಲಿ ಕಾಮಿಡಿ ನಂಗೆ ತುಂಬಾನೇ ಇಷ್ಟ ಆಗುತ್ತದೆ’ ಎಂದು ಮನಸಾರೆ ಹೇಳಿದ್ದಾರೆ. ಆಗ ಧನುಷ್​​ಗೆ ಏನು ಹೇಳಬೇಕು ಎನ್ನುವುದು ಗೊತ್ತಾಗಿಲ್ಲ. ‘ಗಿಲ್ಲಿ ಇಲ್ಲದಿದ್ದರೆ ನಿಮಗೆಲ್ಲ ಬೇಸರ ಆಗುತ್ತಿತ್ತು. ಧನುಷ್ ಈ ಮನೆಯಲ್ಲಿ ಇಲ್ಲದೆ ಇದ್ದಿದ್ದರೆ ನನ್ನೆಲ್ಲ ವೋಟ್​​ನ ಗಿಲ್ಲಿಗೆ ಹಾಕುತ್ತಿದ್ದೆ’ ಎಂಬುದನ್ನು ಕೂಡ ಉಲ್ಲೇಖ ಮಾಡಿದ್ದಾರೆ ಧನುಷ್ ತಾಯಿ. ಈ ಹೊಗಳಿಕೆಯಿಂದ ಗಿಲ್ಲಿ ಖುಷಿಯಾದರು. ಧನುಷ್ ತಾಯಿ ಮಾತು ಇಡೀ ಮನೆಯವರಿಗೆ ಇದು ಅಚ್ಚರಿ ಎನಿಸಿದೆ.

ಇದನ್ನೂ ಓದಿ: ಕಾವ್ಯ ಎದುರಲ್ಲೇ ಗಿಲ್ಲಿ ಹಣೆಬರಹ ತೆರೆದಿಟ್ಟ ಧನುಷ್: ಅಶ್ವಿನಿ ಸೈಲೆಂಟ್ ಆಗಿದ್ದೇಕೆ?

ಸಾಮಾನ್ಯವಾಗಿ ಯಾವುದೇ ಸ್ಪರ್ಧಿಗಳ ಕುಟುಂಬದವರು ಬಂದವರು ತಮ್ಮ ಮಕ್ಕಳನ್ನು ಹೊಗಳುವ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಮಕ್ಕಳ ಬಗ್ಗೆ ಮೆಚ್ಚುಗೆ ಸೂಚಿಸುತ್ತಾರೆ. ಈ ಸಂದರ್ಭದಲ್ಲಿ ಬೇರೆಯವರನ್ನು ಹೊಗಳಿದರೆ ಅವರ ಆಟಕ್ಕೆ ಮೈಲೇಜ್ ಸಿಗುತ್ತದೆ ಎಂಬುದು ಗೊತ್ತಿದೆ. ಆದಾಗ್ಯೂ ಈ ಕೆಲಸವನ್ನು ಧನುಷ್ ತಾಯಿ ಮಾಡಿರುವುದು ಅನೇಕರ ಮೆಚ್ಚುಗೆಗೆ ಕಾರಣ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.