
ಈ ವಾರ ಬಿಗ್ಬಾಸ್ (Bigg Boss) ಮನೆಯಲ್ಲಿ ಫ್ಯಾಮಿಲಿ ವಾರವಾಗಿತ್ತು. ಮನೆಯ ಸದಸ್ಯರಿಗೆ ಯಾವುದೇ ಟಾಸ್ಕ್ ಇರಲಿಲ್ಲ. ಆದರೆ ಮನೆಯ ಸದಸ್ಯರ ಓಟಿನ ಆಧಾರದ ಮೇಲೆ ಮನೆಯ ಕ್ಯಾಪ್ಟನ್ ಆಯ್ಕೆ ನಡೆದಿದೆ. ಮನೆಗೆ ಬಂದ ಸ್ಪರ್ಧಿಗಳ ಕುಟುಂಬದವರೇ ಈ ಬಾರಿ ಕ್ಯಾಪ್ಟನ್ ಆಯ್ಕೆ ಮಾಡಬೇಕಿತ್ತು. ಅದರಂತೆ ಯಾರಿಗೆ ಯಾರು ಕ್ಯಾಪ್ಟನ್ ಆಗಬೇಕು ಎಂದು ಎಲ್ಲರೂ ಸೂಚಿಸಿದರು. ಈ ವೇಳೆ ಗಿಲ್ಲಿಗೆ ಹೆಚ್ಚು ಓಟು ಬಂದಿತ್ತು, ಅಶ್ವಿನಿ ಅವರಿಗೂ ಸಹ ಹೆಚ್ಚು ಮತಗಳು ಬಂದಿದ್ದವು.
ಅಂತಿಮವಾಗಿ ಅಶ್ವಿನಿ ಮತ್ತು ಗಿಲ್ಲಿ ನಡುವೆ ಅಂತಿಮ ಕ್ಯಾಪ್ಟೆನ್ಸಿ ಟಾಸ್ಕ್ ನಡೆದಿದ್ದು, ಟಾಸ್ಕ್ನಲ್ಲಿ ಗಿಲ್ಲಿ ಗೆಲುವು ಸಾಧಿಸಿ ಮೊಟ್ಟ ಮೊದಲ ಬಾರಿಗೆ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಗಿಲ್ಲಿ ಕ್ಯಾಪ್ಟನ್ ಆಗಿರುವ ಎಪಿಸೋಡ್ ಇನ್ನೂ ಪ್ರಸಾರ ಆಗಿಲ್ಲವಾದರೂ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆ ಜೋರಾಗಿ ನಡೆದಿದೆ. ಇಂದು (ಡಿಸೆಂಬರ್ 27) ಬೆಳಿಗ್ಗೆ ಬಿಡುಗಡೆ ಮಾಡಿರುವ ಪ್ರೋಮೊನಲ್ಲಿ ಸಹ ಗಿಲ್ಲಿ ಕ್ಯಾಪ್ಟನ್ ಆಗಿದ್ದನ್ನೇ ಹಾಕಲಾಗಿದೆ.
ಅಂತೂ ಇಂತು ಮೊಟ್ಟ ಮೊದಲ ಬಾರಿಗೆ ಗಿಲ್ಲಿ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಬೇರೆಯವರು ಕ್ಯಾಪ್ಟನ್ ಆದಾಗೆಲ್ಲ ಗಿಲ್ಲಿ ಟಾರ್ಗೆಟ್ ಆಗಿರುತ್ತಿದ್ದರು. ಗಿಲ್ಲಿಯಿಂದ ಕೆಲಸ ತೆಗೆಸುವುದೇ ಬೇರೆ ಕ್ಯಾಪ್ಟನ್ಗಳಿಗೆ ಹರ ಸಾಹಸ ಆಗಿರುತ್ತಿತ್ತು. ರಘು, ರಾಶಿಕಾ ಇನ್ನೂ ಕೆಲವರು ಕ್ಯಾಪ್ಟನ್ ಆಗಿದ್ದಾಗೆಲ್ಲ ಗಿಲ್ಲಿಯನ್ನು ಸಖತ್ ಆಗಿ ಗೋಳು ಹೊಯ್ದು ಕೊಂಡಿದ್ದೂ ಸಹ ಇದೆ. ಆದರೆ ಈಗ ಸ್ವತಃ ಗಿಲ್ಲಿಯೇ ಕ್ಯಾಪ್ಟನ್ ಆಗಿದ್ದು, ಅವರು ಕ್ಯಾಪ್ಟೆನ್ಸಿಯನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಕಾದು ನೋಡಬೇಕಿದೆ.
ಇದನ್ನೂ ಓದಿ:ಗಿಲ್ಲಿ ಬಗ್ಗೆ ಇದ್ದ ದೊಡ್ಡ ಅನುಮಾನ ಕ್ಲಿಯರ್ ಮಾಡಿದ ತಂದೆ-ತಾಯಿ
ಗಿಲ್ಲಿ ಕ್ಯಾಪ್ಟನ್ ಆಗಿರುವುದು ಮನೆಯ ಕೆಲವರಿಗೆ ಇಷ್ಟವಾದರೆ ಇನ್ನು ಕೆಲವರಿಗೆ ಇಷ್ಟವಾದಂತಿಲ್ಲ. ರಘು ಹಾಗೂ ಸೂರಜ್ ಅವರು ‘ಗಿಲ್ಲಿ ಹೇಗೋ ಟಾಸ್ಕ್ ಆಡಿ ಗೆದ್ದು ಕ್ಯಾಪ್ಟನ್ ಆಗುವುದಿಲ್ಲ ಆದರೆ ಹೀಗಾದರೂ ಕ್ಯಾಪ್ಟನ್ ಆಗಲಿ ಎಂದು ಬಿಗ್ಬಾಸ್ ಹೀಗೆ ಮಾಡಿದ್ದಾರೆ’ ಎಂದೆಲ್ಲ ಮಾತನಾಡಿದ್ದಾರೆ.
ಆದರೆ ಗಿಲ್ಲಿಯ ದುರಾದೃಷ್ಟಕ್ಕೆ, ಗಿಲ್ಲಿ ಕ್ಯಾಪ್ಟನ್ ಆದ ವಾರವೇ ಸುದೀಪ್ ಅವರು ಬಿಗ್ಬಾಸ್ಗೆ ಗೈರಾಗಿದ್ದಾರೆ. ಈ ವಾರ ಸುದೀಪ್ ಅವರು ಬಿಗ್ಬಾಸ್ ನಡೆಸಲು ಬರುತ್ತಿಲ್ಲ. ಪ್ರತಿ ವಾರವೂ ಸುದೀಪ್ ಅವರು ಬಂದಾಗ ಹೊಸ ಕ್ಯಾಪ್ಟನ್ಗೆ ಶುಭಾಶಯ ಕೋರುವುದು ಸಾಮಾನ್ಯ. ಆದರೆ ಗಿಲ್ಲಿ ಕ್ಯಾಪ್ಟನ್ ಆದಾಗಲೇ ಸುದೀಪ್ ಅವರು ಗೈರಾಗಿ, ಗಿಲ್ಲಿ ಅವಕಾಶದಿಂದ ವಂಚಿತರಾಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ