
ಗಿಲ್ಲಿ ನಟ (Gilli Nata) ಅವರು ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಿದೆ. ಎಲ್ಲರೂ ಬಂದು ಅವರನ್ನು ಉರಿಸೋ ಪ್ರಯತ್ನ ಮಾಡಿದರು. ಆಗೆಲ್ಲ ಅವರು ಮತ್ತೂ ಮೇಲಕ್ಕೆ ಏರುತ್ತಿದ್ದಾರೆ ಎಂದರೂ ತಪ್ಪಾಗಲಾರದು. ಈಗ ಅವರಿಗಾಗಿ ಅಭಿಮಾನಿಗಳು ವಿಶೇಷ ಹಾಡನ್ನು ರಚನೆ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಹಾಡು ವೈರಲ್ ಆಗಿದ್ದು, ಗಮನ ಸೆಳೆದಿದೆ.
ಗಿಲ್ಲಿ ನಟ ಅವರು ಪ್ರಾಪರ್ಟಿ ಕಾಮಿಡಿಗಾಗಿ ಫೇಮಸ್ ಆದವರು. ಜೀ ಕನ್ನಡ ವಾಹಿನಿಯಲ್ಲಿ ಅನೇಕ ಶೋಗಳನ್ನು ನೀಡಿದ್ದಾರೆ. ಕೆಲವು ಶೋಗಳಲ್ಲಿ ಅವರು ರನ್ನರ್ ಅಪ್ ಆಗಿದ್ದಾರೆ. ನಂತರ ಅವರು ‘ಕ್ವಾಟ್ಲೆ ಕಿಚನ್’ ಶೋನಲ್ಲಿ ಕೆಲವು ದಿನ ಇದ್ದರು. ಆ ಬಳಿಕ ಅವರು ಬಂದಿದ್ದು ಕಲರ್ಸ್ ಕನ್ನಡದ ಬಿಗ್ ಬಾಸ್ ಶೋಗೆ. ಈ ಶೋಗೆ ಬಂದ ನಂತರದಲ್ಲಿ ಅವರು ಸಾಕಷ್ಟು ಜನಪ್ರಿಯತೆ ಪಡೆದರು.
ಆರಂಭದಲ್ಲಿ ಅಶ್ವಿನಿ ಗೌಡ ಅವರು ಮಾಡಿದ ಕೆಲವು ಟೀಕೆಗಳಿಗೆ ಉತ್ತರಿಸಿದರು. ಜಾನ್ವಿ ಹಾಗೂ ಅಶ್ವಿನಿ ಗೌಡ ಅವರು ಒಟ್ಟಾಗಿ ಮಾಡುವ ಕೆಲಸಗಳನ್ನು ಟೀಕಿಸಿದರು. ಈ ಎಲ್ಲಾ ಕಾರಣದಿಂದ ಅವರು ಸಾಕಷ್ಟು ಗಮನ ಸೆಳೆದರು. ರಕ್ಷಿತಾ ಶೆಟ್ಟಿಗೆ ತೊಂದರೆ ಕೊಡುವಾಗ ಗಿಲ್ಲಿ ಒಬ್ಬರೇ ಸ್ಟ್ಯಾಂಡ್ ತೆಗೆದುಕೊಂಡರು. ಈ ಎಲ್ಲಾ ಕಾರಣದಿಂದ ಗಿಲ್ಲಿ ಗ್ರಾಫ್ ಮೇಲಕ್ಕೆ ಹೋಗಿದೆ.
ಈಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಗಿಲ್ಲಿ ಅವರಿಗಾಗಿ ವಿಶೇಷ ಹಾಡು ಮಾಡಲಾಗಿದೆ. ಗಿಲ್ಲಿಯ ಆಟ ವೈಖರಿ, ಅವರೇ ಬಿಗ್ ಬಾಸ್ ಗೆಲ್ಲುತ್ತಾರೆ ಎಂಬ ರೀತಿಯಲ್ಲಿ ಈ ಹಾಡು ಇದೆ. ಅಭಿಮಾನಿಗಳು ಈ ಹಾಡನ್ನು ಬಹುವಾಗಿ ಇಷ್ಟಪಟ್ಟಿದ್ದಾರೆ ಎಂದರೂ ತಪ್ಪಾಗಲಿಕ್ಕಿಲ್ಲ.ರಗಳೆ ಬೀಟ್ಸ್ ಈ ಹಾಡನ್ನು ರಚನೆ ಮಾಡಿದೆ.
ಇದನ್ನೂ ಓದಿ: ‘ನಿನ್ನ ಬಾಯಿ ಸರಿ ಇಲ್ಲ’; ಗಿಲ್ಲಿಗೆ ನೇರವಾಗಿ ಹೇಳಿದ ರಘು
ಸೋಶಿಯಲ್ ಮೀಡಿಯಾದಲ್ಲಿ ಗಿಲ್ಲಿಗೆ ಸಾಕಷ್ಟು ಫ್ಯಾನ್ ಪೇಜ್ಗಳು ಸೃಷ್ಟಿ ಆಗಿವೆ. ಅವರೆಲ್ಲರೂ ಗಿಲ್ಲಿಯನ್ನು ಬೆಂಬಲಿಸುತ್ತಾ ಬರುತ್ತಿದ್ದಾರೆ. ಗಿಲ್ಲಿಯ ಹಾಸ್ಯ, ಅವರ ಟೈಮಿಂಗ್ ಪಂಚ್ ಇಷ್ಟ ಆಗುವ ರೀತಿಯಲ್ಲಿ ಇದೆ. ಒಟ್ಟಾರೆ ಫಿನಾಲೆ ತಲುಪೋದು ಯಾರು? ಕಪ್ ಎತ್ತೋದು ಯಾರು ಎಂಬ ಪ್ರಶ್ನೆ ಅನೇಕರಿಗೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.