‘ನಿನ್ನ ಬಾಯಿ ಸರಿ ಇಲ್ಲ’; ಗಿಲ್ಲಿಗೆ ನೇರವಾಗಿ ಹೇಳಿದ ರಘು
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ರಘು ಮತ್ತು ಗಿಲ್ಲಿ ನಡುವೆ ಒಳ್ಳೆಯ ಗೆಳೆತನವಿದೆ. ರಘು ನೇರವಾಗಿ ಗಿಲ್ಲಿಯ ತಪ್ಪುಗಳನ್ನು ಪ್ರಶ್ನಿಸುತ್ತಾರೆ. ಇದರಿಂದ ಗಿಲ್ಲಿಗೆ ಕೋಪ ಬಂದರೂ ಗೆಳೆತನ ಬಿಡುವುದಿಲ್ಲ. ಇತ್ತೀಚೆಗೆ ರಘು ಗಿಲ್ಲಿಯಿಂದ ಅಂತರ ಕಾಯ್ದುಕೊಳ್ಳಲು ಯತ್ನಿಸುತ್ತಿದ್ದಾರೆ. ಅವರ ಸಂಬಂಧವನ್ನು ಟಾಮ್ ಆ್ಯಂಡ್ ಜರಿ ಎಂದು ಬಣ್ಣಿಸಲಾಗಿದ್ದು, ನೋಡುಗರಿಗೆ ಇದು ಮುದ್ದಾಗಿ ಕಾಣುತ್ತಿದೆ.

ಬಿಗ್ ಬಾಸ್ (Bigg Boss) ಕನ್ನಡ ಸೀಸನ್ 12ರಲ್ಲಿ ರಘು ಹಾಗೂ ಗಿಲ್ಲಿ ಮಧ್ಯೆ ಒಳ್ಳೆಯ ಗೆಳೆತನ ಬೆಳೆದಿದೆ. ಇಬ್ಬರೂ ಕ್ಲೋಸ್ ಫ್ರೆಂಡ್ಸ್. ಗಿಲ್ಲಿ ಯಾವುದೇ ತಪ್ಪು ಮಾಡಿದರೂ ರಘು ಅದನ್ನು ನೇರವಾಗಿ ಹೇಳುತ್ತಾರೆ. ಮುಲಾಜಿಲ್ಲದೆ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಈ ವಿಷಯ ಗಿಲ್ಲಿಗೆ ಅನೇಕ ಬಾರಿ ಕೋಪ ತರಿಸುತ್ತದೆ. ಆದರೆ, ರಘು ಜೊತೆಗಿನ ಗೆಳೆತನವನ್ನು ಮಾತ್ರ ಗಿಲ್ಲಿ ಬಿಟ್ಟುಕೊಡುವುದೇ ಇಲ್ಲ. ಈಗ ತಮ್ಮ ಅಭಿಪ್ರಾಯ ಏನು ಎಂಬುದನ್ನು ರಘು ಅವರು ನೇರ ಮಾತುಗಳಲ್ಲಿ ಗಿಲ್ಲಿ ಎದುರೇ ಹೇಳಿದ್ದಾರೆ.
ರಘು ಅವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಬೆನ್ನಲ್ಲೇ ಕ್ಯಾಪ್ಟನ್ ಆದರು. ಆ ವಾರ ಕಾಲೇಜ್ ಟಾಸ್ಕ್ ನೀಡಲಾಯಿತು. ಇದರಿಂದ ಅವರು ಪ್ರಿನ್ಸಿಪಲ್ ಆದರು. ಈ ವೇಳೆ ಸ್ಟುಡೆಂಟ್ ಆಗಿದ್ದ ಗಿಲ್ಲಿ, ರಘುಗೆ ತುಂಬಾನೇ ಕೀಟಲೆ ಮಾಡಿದರು. ಅಂದಿನಿಂದ ಇಬ್ಬರ ಮಧ್ಯೆ ಗೆಳೆತನ ಮೂಡಿದೆ. ಇತ್ತೀಚೆಗೆ ರಘುಗೆ ಗಿಲ್ಲಿ ಮೇಲೆ ಕೋಪ ಹೆಚ್ಚುತ್ತಿದೆ.
ಕಳೆದ ವಾರ ಗಿಲ್ಲಿ ಅವರು ಬಟ್ಟೆ ಇದ್ದರೂ ಹಾಕಿಕೊಳ್ಳುತ್ತಿಲ್ಲ ಎಂಬ ವಿಷಯದಲ್ಲಿ ರಘು ಕೋಪ ಮಾಡಿಕೊಂಡರು. ಗಿಲ್ಲಿ ಬಟ್ಟೆಯನ್ನು ಕಿತ್ತೆಸೆದರು. ಈ ವಾರ ಗಿಲ್ಲಿ ಹಾಗೂ ರಘು ಮತ್ತೆ ಒಟ್ಟಿಗೆ ಇರುತ್ತಿದ್ದಾರೆ. ಆದರೆ, ರಘು ಅವರು ಗಿಲ್ಲಿಯಿಂದ ಅಂತರ ಕಾಯ್ದುಕೊಳ್ಳುವ ಪ್ರಯತ್ನದಲ್ಲಿದ್ದಾರೆ.
ಇದನ್ನೂ ಓದಿ: ಹಳಿ ತಪ್ಪಿತು ರಕ್ಷಿತಾ ಶೆಟ್ಟಿ ಆಟ; ಶುರುವಾಯ್ತು ಚೀಪ್ ಗಿಮಿಕ್? ‘ಎಲ್ಲರಿಗೂ ಮಸಾಜ್ ಮಾಡಿ ಕೊಡ್ತೀಯಾ. ಆದರೆ, ನನ್ನನ್ನು ಮಾತ್ರ ನೀನು ಕರೆದೇ ಇಲ್ಲ’ ಎಂದು ರಘು ಬಳಿ ಗಿಲ್ಲಿ ಹೇಳಿದರು. ಇದಕ್ಕೆ ಉತ್ತರಿಸಿದ ರಘು,‘ಯಾರಿಗೆ ಮಸಾಜ್ ಮಾಡಿದರೂ ನಿನಗೆ ಮಾತ್ರ ಮಾಡಲ್ಲ. ನಿನ್ನ ಬಾಯಿ ಸರಿ ಇಲ್ಲ. ನಾಮಿನೇಷನ್ ವೇಳೆ , ಇಲ್ಲವೇ ವೀಕೆಂಡ್ನಲ್ಲಿ ನನ್ನ ಬಗ್ಗೆ ಏನಾದರೂ ಹೇಳ್ತೀಯಾ’ ಎಂದು ರಘು ಅವರು ಹೇಳಿದರು. ಇದನ್ನು ಗಿಲ್ಲಿ ಒಪ್ಪಿಕೊಳ್ಳಲೇ ಇಲ್ಲ.
ಗಿಲ್ಲಿ ಹಾಗೂ ರಘು ಅವರದ್ದು ಟಾಮ್ ಆ್ಯಂಡ್ ಜರಿ ರೀತಿಯ ಸಂಬಂಧ. ಇವರ ಮಧ್ಯೆ ಕಿತ್ತಾಟ ನಡೆಯುತ್ತಲೇ ಇರುತ್ತದೆ. ಅದು ನೋಡುಗರಿಗೆ ಕ್ಯೂಟ್ ಆಗಿ ಕಾಣಿಸುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




